ಕುಂಚಿಟಿಗ ಜಾತಿಯನ್ನ ಪ್ರವರ್ಗ ಒಂದಕ್ಕೆ ಸೇರಿಸಿ: ಶಾಂತವೀರಸ್ವಾಮೀಜಿ
ಚಿತ್ರದುರ್ಗ,ನ07(ಸಂವಾ)- ಚಿತ್ರದುರ್ಗ ಜಿಲ್ಲೆ ಹೊಸದುರ್ಗದ ಕುಂಚಿಟಿಗ ಮಹಾಸಂಸ್ಥಾನ ಮಠದ ಪೀಠಾದ್ಯಕ್ಷರಾದ ಕಾಯಕಯೋಗಿ ಡಾ.ಶ್ರೀ ಶಾಂತವೀರ ಮಹಾಸ್ವಾಮೀಜಿ ಹಾಗೂ ಹಿಂದುಳಿದ ದಲಿತ ಮಠಾಧೀಶರು ಮನವಿ ಸಲ್ಲಿಸಿದರು
ಕರ್ನಾಟಕ ರಾಜ್ಯದ ಕುಂಚಿಟಿಗ ಸಮುದಾಯದ ಕುಲಶಾಸ್ತ್ರೀಯ ಅಧ್ಯಯನ ವರದಿಯನ್ನು ಸಂಪುಟಕ್ಕೆ ತಂದು ಯಥಾವತ್ ಜಾರಿ ಮಾಡಿ ಗೆಜೆಟ್ ಪ್ರಕಟಣೆ ಹೊರಡಿಸಬೇಕು ಹಾಗೂ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಮುಖ್ಯಮಂತ್ರಿಗಳಿಗೆ ಹೊಸದುರ್ಗದ ಕುಂಚಿಟಿಗ ಮಹಾಸಂಸ್ಥಾನ ಮಠದ ಪೀಠಾದ್ಯಕ್ಷರಾದ ಕಾಯಕಯೋಗಿ ಡಾ.ಶ್ರೀ ಶಾಂತವೀರ ಮಹಾಸ್ವಾಮೀಜಿ ಮನವಿ ಸಲ್ಲಿಸು ಮೂಲಕ ಒತ್ತಾಯಿಸಿದರು.
ಮುಖ್ಯಮಂತ್ರಿ ಯಡಿಯೂರಪ್ಪನವರು ಕುಂಚಿಟಿಗ ಸಮಾಜದ ಅಭಿವೃದ್ಧಿಗೆ ಸಾಕಷ್ಟು ಸಹಾಯ ಸಹಕಾರ ನೀಡಿದ್ದಾರೆ. ಈ ಬಾರಿಯು ಕುಂಚಿಟಿಗ ಸಮಾಜದ ಬೇಡಿಕೆಗಳಿಗೆ ಸ್ಪಂದಿಸಿ ಕುಂಚಿಟಿಗ ಅಭಿವೃದ್ಧಿ ನಿಗಮ ಸ್ಥಾಪನೆ ಪ್ರವರ್ಗ ಒಂದಕ್ಕೆ ಸೇರಿಸಬೇಕು ಕೇಂದ್ರ ಹಿಂದುಳಿದ ವರ್ಗಗಳ ಪಟ್ಪಿಗೆ ಕುಂಚಿಟಿಗ ಜಾತಿಯನ್ನು ಸೇರಿಸಬೇಕು.
ಕುಂಚಿಟಿಗ ಸಮುದಾಯವು ಹಿಂದುಳಿದ ಬುಡಕಟ್ಟು ಸಮುದಾಯಕ್ಕೆ ಸೇರಿದ್ದು, ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಹಾಗೂ ರಾಜಕೀಯವಾಗಿ ಅತ್ಯಂತ ಹಿಂದುಳಿದಿದೆ. ಬುಡಕಟ್ಟು ಕುಂಚಿಟಿಗ ಸಮುದಾಯದವರಿಗೆ ಸಾಮಾಜಿಕ ನ್ಯಾಯ ನೀಡುವ ಸಲುವಾಗಿ ಡಿ.ದೇವರಾಜ ಅರಸು ಸಂಶೋಧನಾ ಸಂಸ್ಥೆ, ಕರ್ನಾಟಕ ಸರ್ಕಾರದ ವತಿಯಿಂದ ಮೈಸೂರು ವಿಶ್ವವಿದ್ಯಾನಿಲಯದ ಮಾನವಶಾಸ್ತ್ರ ಅಧ್ಯಯನ ವಿಭಾಗದ ಪ್ರಧಾನ ಸಂಶೋದಕರು ಹಾಗೂ ಪ್ರಾಧ್ಯಾಪಕರಾದ ಡಾ|ಎಂ.ಆರ್.ಗಂಗಾಧರ್ ಮತ್ತು ಯೋಜನಾ ಸಹಾಯಕರಾದ ಡಾ|ಎಸ್.ಮಹದೇವ್ ಅವರು ಕರ್ನಾಟಕ ರಾಜ್ಯದ ಹಲವು ಜಿಲ್ಲೆಗಳಲ್ಲಿ ನೆಲೆಸಿರುವ ಕುಂಚಿಟಿಗ ಸಮುದಾಯದವನ್ನು ಸಮಗ್ರವಾಗಿ ಅಧ್ಯಯನ ಮಾಡಿದ್ದಲ್ಲದೆ ಕ್ಷೇತ್ರ ಪ್ರವಾಸ ಕೈಗೊಂಡು ಸಾವಿರಾರು ಕುಟುಂಬಗಳನ್ನು ಭೇಟಿ ಮಾಡಿ ಕುಂಚಿಟಿಗ ಸಮುದಾಯದಲ್ಲಿನ ಆಚಾರ, ವಿಚಾರ, ಬುಡಕಟ್ಟು ಹಿನ್ನೆಲೆಗಳು, ಕಟ್ಟೆಮನೆಗಳು, ಮದುವೆ, ಸಾವು, ನೋವು, ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಸ್ಥಿತಿಗತಿಗಳುಳ್ಳ ವಸ್ತು ನಿಷ್ಠೆಯ ಕುಲಶಾಸ್ತ್ರೀಯ ಅಧ್ಯಯನ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದ್ದಾರೆ. ಕುಂಚಿಟಿಗ ಜನಾಂಗದ ಹಿತದೃಷ್ಠಿಯಿಂದ ಕೂಡಲೇ ಸಂಪುಟಕ್ಕೆ ತಂದು ಯಥಾವತ್ ಜಾರಿ ಮಾಡಿ ಗೆಜೆಟ್ ಪ್ರಕಟಣೆ ಮಾಡಿ ಸಮುದಾಯಕ್ಕೆ ಸಾಮಾಜಿಕ ನ್ಯಾಯ ನೀಡಬೇಕೆಂದು ಮನವಿ ಸಲ್ಲಿಸಿದರು.

ಹಾಗೂ ಇನ್ನಿತರೆ ಬೇಡಿಕೆಗಳನ್ನು ಮುಂದಿಟ್ಟರು ಅವುಗಳೆಂದರೆ,
ಮೈಸೂರು ವಿಶ್ವವಿದ್ಯಾನಿಲಯದ ಮಾನವಶಾಸ್ತ್ರ ಅಧ್ಯಯನ ವಿಭಾಗವು ನೀಡಿರುವ ಕುಂಚಿಟಿಗ ಕುಲಶಾಸ್ತ್ರೀಯ ಅಧ್ಯಯನ ವರದಿಯನ್ನು ಸಂಪುಟಕ್ಕೆ ತಂದು ಯಥಾವತ್ ಜಾರಿ ಮಾಡಬೇಕು.ಕುಂಚಿಟಿಗ ಅಭಿವೃದ್ಧಿ ನಿಗಮ ಸ್ಥಾಪನೆ ಮಾಡಬೇಕು. ಸಮುದಾಯಕ್ಕೆ ಕೆಪಿಎಸ್ ಸಿ, ನೇಮಕ, ವಿವಿಧ ನಿಗಮ ಮಂಡಳಿಗಳಿಗೆ ಅಧ್ಯಕ್ಷರ ನೇಮಕ ಮಾಡಬೇಕು.ಹಿಂದುಳಿದ ದಲಿತ ಒಕ್ಕೂಟದ 20 ಮಠಾಧೀಶರು ಉಪಮುಖ್ಯಮಂತ್ರಿ ಗೋವಿಂದ್ ಕರಜೋಳ ಶಾಸಕರಾದ ಹಾಲಪ್ಪ ಹಾಗೂ ಕುಂಚಿಟಿಗ ಸಮುದಾಯದ ಮುಖಂಡರು ಹಾಜರಿದ್ದರು.
ಸಂಯುಕ್ತವಾಣಿ
ಡಿ.ಕುಮಾರಸ್ವಾಮಿ





