ಚಿತ್ರದುರ್ಗ ಜಿಲ್ಲೆಯಲ್ಲಿ 474 ಆರೋಗ್ಯ ನೌಕರರಿಗೆ ಲಸಿಕೆ : ಆರ್ ಸಿ ಹೆಚ್ ಡಾ. ಕುಮಾರಸ್ವಾಮಿ
ಚಿತ್ರದುರ್ಗ,ಜ.16 : ಹೆಮ್ಮಾರಿಕೋವಿಡ್ ಗೆ ಲಸಿಕೆಯನ್ನು ಕಂಡು ಹಿಡಿದಿದ್ದು ಇಂದು ಕೋಟೆ ನಾಡು ಚಿತ್ರದುರ್ಗ ಜಿಲ್ಲೆಯಲ್ಲಿನ 474 ಜನ ಆರೋಗ್ಯ ನೌಕರರಿಗೆ ಮೊದಲಿಗೆ ವ್ಯಾಕ್ಸಿನ್ ನೀಡಲಾಯಿತು ಎಂದು ಆರ್ ಸಿ ಹೆಚ್ ಡಾ. ಕುಮಾರಸ್ವಾಮಿ ತಿಳಿಸಿದ್ದಾರೆ.

ಇಂದು ಜಿಲ್ಲಾಸ್ಪತ್ರೆಯ ವ್ಯಾಕ್ಸಿನ್ ಕೊಠಡಿಯಲ್ಲಿ ಸಮಾಜ ಕಲ್ಯಾಣ ಸಚಿವ ಶ್ರೀರಾಮುಲು ಲಸಿಕಾ ಅಭಿಯಾನಕ್ಕೆ ಚಾಲನೆ ನೀಡಿದರು. ಅದರಂತೆ ಜಿಲ್ಲೆಯ ಎಲ್ಲಾ ಲಸಿಕಾ ಕೇಂದ್ರಗಳಲ್ಲು ಕೂಡ ಲಸಿಕೆಯನ್ನು ಆರಂಭಿಸಲಾಯಿತು. ಇದೇ ಸಮಯದಲ್ಲಿ ಮಾತನಾಡಿದ, ಶ್ರೀರಾಮುಲು ನನಗೆ ವೈಯುಕ್ತಿಕವಾಗಿ ಸಂತಸವಾಗಿದೆ ಎಂದರು.
ಈ ಸಮಯದಲ್ಲಿ ಜಿಲ್ಲಾಧಿಕಾರಿ, ಕವಿತಾ ಎಸ್ ಮನ್ನಿಕೇರಿ, ಸಿಇಓ ಡಾ. ನಂದಿನಿ ದೇವಿ ಹಾಗೂ ಶಾಸಕ ತಿಪ್ಪಾರೆಡ್ಡಿ ಮತ್ತು ಸಂಸದ ನಾರಾಯಣಸ್ವಾಮಿ, ಆರ್ ಸಿಹೆಚ್ ಡಾ. ಕುಮಾರಸ್ವಾಮಿ, ಜಿಲ್ಲಾ ಆರೋಗ್ಯಾಧಿಕಾರಿ , ಡಾ. ಫಾಲಾಕ್ಷ, ಡಿಎಸ್ ಡಾ ಬಸವರಾಜ್ ಇನ್ನಿತರರು ಪಾಲ್ಗೊಂಡಿದ್ದರು.
ಸಂಯುಕ್ತವಾಣಿ





