Chitradurga maramakal

ಮರಮಕಲ್ ಮೇಲೆದ್ದು ನಡೆದರೆ ವಿಜಯೇಂದ್ರ ಗಹಗಹಿಸಿ ನಕ್ಕರು

ಆರೋಗ್ಯ

ಮರಮಕಲ್ ಮೇಲೆದ್ದು ನಡೆದರೆ
ವಿಜಯೇಂದ್ರ ಗಹಗಹಿಸಿ ನಕ್ಕರು

ಮುಖ್ಯಮಂತ್ರಿಗಳ ರಾಜಕೀಯ ಸಲಹೆಗಾರ ಎಂ.ಬಿ.ಮರಮಕಲ್ ಹಣೆಯ ಮೇಲಿನ ಬೆವರೊರೆಸಿಕೊಂಡು ವಿಧಾನಸೌಧದ ಹೆಬ್ಬಾಗಿಲಿನಿಂದ ಹೊರಬಿದ್ದಿದ್ದಾರೆ.

Chitradurga maramakalChitradurga maramakal
ಕೆಲ ಕಾಲದ ಹಿಂದೆ ಶೋಭಕ್ಕ ಕೂಡಾ ಒಂದು ಎಪಿಸೋಡಿನಿಂದ ನೊಂದು ಮುಖ್ಯಮಂತ್ರಿಗಳ ಮನೆಯಿಂದ ಹೊರನಡೆದಿದ್ದರು.
ನೋ ಡೌಟ್,ಯಡಿಯೂರಪ್ಪ ಅವರ ಏಳಿಗೆಯಲ್ಲಿ ಈ ಇಬ್ಬರ ಪಾತ್ರವೂ ಮಹತ್ವದ್ದಾಗಿತ್ತು.
ಮರಮಕಲ್ ತಮ್ಮ ಸುಧೀರ್ಘ ಪತ್ರಿಕೋದ್ಯಮದ ಬದುಕಿನಿಂದ ಗಳಿಸಿದ್ದ ಗೌರವವನ್ನು ಅಡವಿಟ್ಟು ಯಡಿಯೂರಪ್ಪ ಅವರ ಜತೆ ನಿಂತವರು.
ಇಡೀ ವ್ಯವಸ್ಥೆಯ ಕಪ್ಪು ಕಣ್ಣುಗಳಿಗೆ ರಾಕ್ಷಸಿಯ ಗೆಟಪ್ಪಿನಲ್ಲಿ ಕಂಡರೂ ಅಂಜದೆ ಶೋಭಾ ಕರಂದ್ಲಾಜೆ ಕೂಡಾ ಯಡಿಯೂರಪ್ಪ ಅವರ ಜತೆ ನಿಂತಿದ್ದರು.
ಸಿಬಿಐ ಬಲೆಗೆ ಬಿದ್ದು ಯಡಿಯೂರಪ್ಪ‌ ನ್ಯಾಯಾಲಯದ ಕಟಕಟೆ ಏರಿದಾಗ,ತಬ್ಬಲಿತನದ ನರಳಿಕೆಯಲ್ಲಿ‌ಮುಲುಗುತ್ತಿದ್ದಾಗ ಆಸರೆಯಂತೆ ನಿಂತ ಏಕೈಕ ಶಕ್ತಿ ಶೋಭಾ ಕರಂದ್ಲಾಜೆ.
ಅದೇ ರೀತಿ ಕುಮಾರಸ್ವಾಮಿ ನೇತೃತ್ವದ ಸರ್ಕಾರವನ್ನು ಉರುಳಿಸಲು ಯಡಿಯೂರಪ್ಪ ಹಗಲು-ರಾತ್ರಿ ಹೋರಾಡುತ್ತಿದ್ದಾಗ ಅಂಗಿಯ ಬಟನ್ ಬಿಚ್ಚಿಕೊಂಡಿದ್ದರೂ ಅವರ ಪಕ್ಕ ನಿಂತಿದ್ದವರು ಮರಮಕಲ್.
ಅದರರ್ಥ,ಯಡಿಯೂರಪ್ಪ ಸರ್ಕಾರ ಬರಲು ಮರಮಕಲ್ ಕಾರಣ ಅಂತಲ್ಲ,ಬದಲಿಗೆ ಆ ಕಸರತ್ತು ನಡೆಯುತ್ತಿದ್ದಾಗ ಪಕ್ಕದಲ್ಲೇ ನಿಂತು ಅಳಿಲು ಸೇವೆ ಮಾಡಿದವರು ಮರಮಕಲ್.
ಸರ್ಕಾರ ಬಂದಾಗ ಸಹಜವಾಗಿಯೇ ಎಂಎಲ್ಸಿ ಆಗಬೇಕು ಅಂತ ಅವರು ಬಯಸಿದರು.
ಆದರೆ ಇವತ್ತಿನ ಸ್ಥಿತಿಯಲ್ಲಿ ಎಮ್ಮೆಲ್ಸಿ ಹುದ್ದೆ ಪಡೆಯಲು ಎರಡು ರೀತಿಯ ಪ್ಯಾಕೇಜುಗಳಿವೆ.
ಮೊದಲನೆಯದು ಈಜಿ easy ಪ್ಯಾಕೇಜು.ಕನಿಷ್ಟ ಇಪ್ಪತ್ತು ಕೋಟಿಯ ಟರ್ನ್ ಓವರು ತೋರಿಸಬೇಕು.ಅಗ ವಿಧಾನಸಭೆಯಿಂದ ವಿಧಾನಪರಿಷತ್ತಿಗೆ ಹೋಗಬಹುದು.
ಎರಡನೆಯದು,ಬೇರೆ,ಬೇರೆ ಕ್ಷೇತ್ರಗಳಿಂದ ಕಡಿಮೆ ರೇಟಿನಲ್ಲಿ ಟಿಕೆಟ್ ಪಡೆಯಬಹುದು.ಆದರೆ ಎಲೆಕ್ಷನ್ನಿಗೆ ಮಿನಿಮಮ್ ಹತ್ತು ಕೋಟಿ ಸುರಿಯಬೇಕು.
ಮರಮಕಲ್ ಈ ಎರಡೂ ಕೆಟಗರಿಗೆ ಸೇರಿದವರಲ್ಲ.ಬದಲಿಗೆ ತಮ್ಮ ಸೇವೆಗೆ ನೈಜವಾಗಿ ಸಿಗಬೇಕಾದ ಬಳವಳಿ ಇದು ಅಂತ ಅವರು ಭಾವಿಸಿದ್ದರು.ಹೀಗಾಗಿ ಅದು ವರ್ಕ್ ಔಟ್ ಆಗಲಿಲ್ಲ.
ಆದರೂ ಯಡಿಯೂರಪ್ಪ ಅಂದರೆ ಅವರಿಗೆ ಕುರುಡುಪ್ರೀತಿ.ಜೋರ್ ಸೇ ಬೋಲೋ,ಪ್ಯಾರ್ ಸೇ ಬೋಲೋ ಯಡಿಯೂರಪ್ಪ ಜಿಂದಾಬಾದ್ ಅನ್ನುವಂತಹ ಕಾಮನ್ ಮ್ಯಾನ್ ಪ್ರೀತಿ.
ಹೀಗಾಗಿ ತಮಗೆ ರಾಜಕೀಯ ಸಲಹೆಗಾರನ ಹುದ್ದೆ ಸಿಕ್ಕಾಗ ಮುಂದೆ ಬಿದ್ದು ಪ್ರತಿಯೊಂದು ವಿಷಯಗಳಿಗೂ ಸಲಹೆ ನೀಡತೊಡಗಿದರು.
ಹಿಂದೆ ಯಡಿಯೂರಪ್ಪ ಜೈಲಿಗೆ ಹೋಗಲು ಕಾರಣವಾದ ಎಪಿಸೋಡು ಅವರಿಗೆ ಗೊತ್ತಿತ್ತಲ್ಲ?ಹೀಗಾಗಿ ಎಪಿಸೋಡು ರಿಪೀಟು ಆಗಬಾರದು ಅಂತ ದಂಡಿಯಾಗಿ ಸಲಹೆ ಕೊಡತೊಡಗಿದರು.
ಯಡಿಯೂರಪ್ಪ ಕುಟುಂಬದ ಇಪ್ಪತ್ತೇಳು ಮಂದಿ ತರುವ ಲೋಕೋಪಕಾರದ ಪ್ರಪೋಸಲ್ಲುಗಳ ಬಗ್ಗೆ ಎಚ್ಚರ ವಹಿಸಲು ಯಾವಾಗ ಅವರು ಹೇಳತೊಡಗಿದರೋ?ಅಗ ಇಡೀ ಫ್ಯಾಮಿಲಿಯೇ ಮರಮಕಲ್ ವಿರುದ್ಧ ತಿರುಗಿ ಬಿತ್ತು.ವಿಜಯೇಂದ್ರ ಬಳಿ ದೂರಿತು.
ಇವತ್ತಿನ ಸ್ಥಿತಿಯಲ್ಲಿ ಯಡಿಯೂರಪ್ಪ ಡಿಟ್ಟೋ ಧೃತರಾಷ್ಟ್ರ,ವಿಜಯೇಂದ್ರ ಡಿಟ್ಟೋ ಧುರ್ಯೋಧನ.
ಅರ್ಥಾತ್,ಯಡಿಯೂರಪ್ಪ ಅವರಿಗೀಗ ಕಸುವಿಲ್ಲ,ವಿಜಯೇಂದ್ರ ಅವರಿಗೆ ತಡೆಯಿಲ್ಲ.
ಇದನ್ನರ್ಥ ಮಾಡಿಕೊಳ್ಳಲು ವಿಫಲರಾದ ಮರಮಕಲ್ ಥೇಟು ವಿದುರನ ಸ್ಟೈಲಿನಲ್ಲಿ ರಾಜನೀತಿಯ ಕತೆ ಭೋಧಿಸತೊಡಗಿದರು.
ಆದರೆ ಅವರ ಭೋಧನೆಯ ಶೈಲಿಯಿಂದ ಕೆರಳಿದ ವಿಜಯೇಂದ್ರ ಕೆಲ ತಿಂಗಳ ಹಿಂದೆಯೇ:ನೀವಿನ್ನು ಕೃಷ್ಣಾ ಕಡೆ ಬರಬೇಕಿಲ್ಲ ಎಂಬ ಮೆಸೇಜು ತಲುಪಿಸಿದರು.
ಮರಮಕಲ್ ಬಗ್ಗಲಿಲ್ಲ.ಎಷ್ಟೇ ಆದರೂ ಅವರದು ಪತ್ರಕರ್ತನ ಬಿಸುವು.ಹೀಗಾಗಿ ಕೃಷ್ಣಾ ಇಲ್ಲದಿದ್ದರೇನು?ವಿಧಾನಸೌಧ ಸಾಕು ಎಂಬಂತೆ ನಡೆದುಕೊಂಡರು.ಸಹಿಸಿಕೊಂಡು ಸುಮ್ಮನಿರುವುದು ಕಷ್ಟ ಅನ್ನಿಸಿದಾಗ,ಕೆಲ ಮಂತ್ರಿಗಳ ಬಳಿಯೂ ಮಾತನಾಡಿ:ಎಚ್ಚರದಿಂದಿರಲು ಸಾಹೇಬರಿಗೆ ಹೇಳಿ ಎಂದರು.ಇದರಿಂದ ಮತ್ತಷ್ಟು ಕೆರಳಿದ ವಿಜಯೇಂದ್ರ ಒಂದು ಕಂಪ್ಲೇಂಟ್ ರಿಜಿಸ್ಟರು ರೆಡಿ ಮಾಡಿದ್ದಾರೆ.
ಯಡಿಯೂರಪ್ಪ ಅಧಿಕಾರದಿಂದ ಇಳಿಯುವುದು ನಿಶ್ಚಿತ ಅಂತ ಪ್ರತಿಪಕ್ಷ ಸಿದ್ದರಾಮಯ್ಯ ಹೇಳುವುದರ ಹಿಂದೆ ಮರಮಕಲ್ ನೆರಳಿದೆ.
ಇದೇ ರೀತಿ,ಸಧ್ಯದಲ್ಲೇ ಯಡಿಯೂರಪ್ಪ ಕೆಳಗಿಳಿಯುವುದು ನಿಶ್ಚಿತ ಅಂತ ಮಾಧ್ಯಮಗಳಲ್ಲಿ ಪ್ರಕಟವಾದ ವರದಿಯ ಹಿಂದೆ ಮರಮಕಲ್ ನೆರಳಿದೆ.
ಪವರ್ ಟಿವಿ ಎಪಿಸೋಡಿನಲ್ಲಿ ಅರವಿಂದ ಲಿಂಬಾವಳಿ ತಮ್ಮ ವಿರುದ್ಧ ಆಟವಾಡಲು ನೆರವು ನೀಡಿದವರು ಮರಮಕಲ್.
ಹೀಗೆ ಒಂದರ ಹಿಂದೆ ಒಂದು ಆರೋಪಗಳನ್ನು ಹೊರಿಸಿ,ಯಡಿಯೂರಪ್ಪ ಅವರ ಮುಂದೆ ಎಫ್.ಐ.ಆರ್ ದಾಖಲಿಸಿದ್ದಾರೆ.
ಪರಿಣಾಮ?ಮರಮಕಲ್ ಅವರನ್ನು ತಮ್ಮ ರಾಜಕೀಯ ಸಲಹೆಗಾರನ ಹುದ್ದೆಯಿಂದ ಕಿತ್ತು ಹಾಕಬೇಕಾದ ಅನಿವಾರ್ಯತೆಯ ಬಗ್ಗೆ ರೇಣುಕಾಚಾರ್ಯ,ನಿರಾಣಿ ಯಂತವರ ಜತೆ ಮೊನ್ನೆ ಗುರುವಾರ ಸಭೆ ಮಾಡಿ ಹೇಳಿದ್ದಾರೆ.
ಯೇ,ಬೇಡ ಬಿಡ್ರೀ ಸಾರ್ ಅಂತ ಅವರು ಹೇಳಿದರೂ ಮಗನ ಆಟಾಟೋಪ ಹೇಗಿರಬಹುದು ಅಂತ ನೆನಪಿಸಿಕೊಂಡು ಮರಮಕಲ್ ಅವರನ್ನು ಕಿತ್ತು ಹಾಕಿದ್ದಾರೆ.
ಪರಿಣಾಮ?ನೊಂದ ಮರಮಕಲ್ ಸೀದಾ ಎದ್ದು ಹೋಗಿದ್ದಾರೆ.
ವಿಜಯೇಂದ್ರ ಮಾತ್ರ ವಜ್ರಮುನಿಯಂತೆ ಗಹಗಹಿಸಿ ನಗುತ್ತಿದ್ದಾರೆ.ಶೋಭಕ್ಕನಿಗೆ ಗೇಟ್ ಪಾಸ್ ಕೊಟ್ಟ ತನಗೆ ಮರಮಕಲ್ ಯಾವ ಲೆಕ್ಕ?ಎಂಬ ಫೋಸು ಕೊಡುತ್ತಿದ್ದಾರೆ.
ಎಷ್ಟೇ ಆದರೂ ನಾನು ಮುಂದೆ ಕರ್ನಾಟಕ ಭಾಗ್ಯ ವಿಧಾತ ಎಂಬ ಕಲರ್ ಫುಲ್ ಭ್ರಮೆ ಅವರದು.
ಹೀಗಾಗಿ ಬಿಜೆಪಿಯಲ್ಲೀಗ ಘೋಡಾ(ವಿಜಯೇಂದ್ರ) ಹೈ ಮೈದಾನ್ ಹೈ ಎಂಬ ಪರಿಸ್ಥಿತಿ

 

 

 

ಕೃಪೆ

ರ್.ಟಿ.ವಿಠ್ಠಲಮೂರ್ತಿ

ತಾರಾಪ್ರಭ ಮೀಡಿಯಾ ಹೌಸ್

Leave a Reply

Your email address will not be published. Required fields are marked *