ಬೆಂಗಳೂರು: ತೆಲುಗು ಚಿತ್ರ ರಂಗದ ಬಾಹುಬಲಿ ಖ್ಯಾತಿಯ ನಟ ಪ್ರಭಾಸ್ ಮಾಡಿದ ಆ ಒಂದು ಮಿಸ್ಟೇಕ್ ನಿಂದಾಗಿ ಸ್ಯಾಂಡಲ್ ವುಡ್ ನಟ ಯಶ್ ಅಭಿಮಾನಿಗಳು ಆಕ್ರೋಶಗೊಂಡಿದ್ದಾರಾ??
ಬಾಹುಬಲಿ ಸಿನಿಮಾದ ಹಿರೋ ಹಾಗೂ ಪ್ಯಾನ್ ಇಂಡಿಯಾದ ಖ್ಯಾತಿಯನ್ನು ಪಡೆದಿರುವ ಪ್ರಭಾಸ್ ಇದೀಗ ಕನ್ನಡದ ಕೆಜಿಎಫ್ ಚಿತ್ರದ ಖ್ಯಾತ ನಿರ್ದೇಶದ ಪ್ರಶಾಂತ್ ನೀಲ್ ಚಿತ್ರ ಸಲಾರ್ ನಲ್ಲಿ ಹೀರೋ ಆಗಿ ಆಯ್ಕೆಯಾಗಿದ್ದು, ಅದರ ಚಿತ್ರ ಮೂಹೂರ್ತ. ಹೈದ್ರಾಬಾದ್ ನ ಡಿ. ರಾಮನಾಯ್ಡು ಸ್ಟುಡಿಯೋ ದಲ್ಲಿ ಇದೇ ತಿಂಗಳ 13 ರಂದು ಇತ್ತು. ಇದಕ್ಕೆ ಕನ್ನಡದ ಪ್ಯಾನ್ ಇಂಡಿಯಾ ಸ್ಟಾರ್ ಯಶ್ ಕೂಡ ಅಹ್ವಾನದ ಮೇರೆಗೆ ಹೋಗಿದ್ದರು. ಅಲ್ಲಿ ನಿರ್ದೇಶಕ ನೀಲ್ ಹಾಗೂ ಹಿರೋ ಪ್ರಭಾಸ್ ಗೂ ಶುಭ ಹಾರೈಸಿದ್ದಾರೆ. ಮೂಹೂರ್ತದಲ್ಲಿ ಭಾಗಿಯಾಗಿದ್ದಾರೆ. ಇದರ ಫೋಟೋ ಶೂಟ್ ಗಳು ನಡೆದಿವೆ. ಆದರೆ ಪ್ರಭಾಸ್ ಇಲ್ಲೆ ಮಾಡಿರೋದು ನೋಡಿ ಮಿಸ್ಟೇಕ್ ಪ್ರಭಾಸ್ ತಮ್ನ ಟ್ವೀಟರ್ ಖಾತೆಯಲ್ಲಿ ಚಿತ್ರದ ಮೂಹೂರ್ತದ ಬಹ್ಗೆ ಸೇಟ್ಟೇರಿರುವ ಬಗ್ಗೆ ಬರೆದುಕೊಂಡಿ ನಿರ್ದೇಶಕ ಹಾಗೂ ಪ್ರಭಾಸ್ ಇರುವ ಫೋಟೊಗಳನ್ನು ಹಂಚಿಕೊಂಡಿದ್ದು, ಯಶ್ ಇರುವ ಫೋಟೋಗಳನ್ನು ಹಾಕಿಲ್ಲ. ಇದು ಕನ್ನಡಿಗರಿಗೆ ಹಾಗೂ ಮತ್ತೊಬ್ಬ ಸ್ಟಾರ್ ನಟ ಯಶ್ ಗೆ ಮಾಡಿದ ಅವಮಾನ ಎಂದು ಅವರ ಅಭಿಮಾನಿಗಳು ಆಕ್ರೋಶಗೊಳ್ಳಲು ಕಾರಣವಾಗಿದೆ.
ಸಂಯುಕ್ತವಾಣಿ