ಚಿತ್ರದುರ್ಗದ ತೋಟಗಾರಿಕೆ ಇಲಾಖೆ ಆವರಣದಲ್ಲಿ ಇದೇ 20ರಿಂದ 22 ರವರೆಗೆ ಜಿಲ್ಲಾಡಳಿತ ಜಿಲ್ಲಾಪಂಚಾಯತ್ ಜಿಲ್ಲಾ ತೋಟಗಾರಿಕೆ ಇಲಾಖೆ ಮತ್ತು ತೋಟಗಾರಿಕೆ ಸಂಘದಿಂದ 33ನೇ ಫಲಪುಷ್ಪ ಪ್ರದರ್ಶನ ಆಯೋಜಿಸಲಾಗಿದೆ ಎಂದು ಜಿಲ್ಲಾ ಪಂಚಾಯಿತಿ ಸಿಇಓ ಡಾ. ಆಕಾಶ್ ಹೇಳಿದರು.
ಚಿತ್ರದುರ್ಗದ ತೋಟಗಾರಿಕೆ ಇಲಾಖೆ ಆವರಣದಲ್ಲಿಂದು ಪತ್ರಿಕಾ ಗೋಷ್ಠಿಯಲ್ಲಿ ಮಾತಾಡಿ,ಫಲಪುಷ್ಪ ಪ್ರದರ್ಶನದಲ್ಲಿ ಹಿಂದೂ ಮುಸ್ಲಿಂ ಭಾವೈಕ್ಯತೆ ಸಾರುವ ಶ್ರೀ ಕ್ಷೇತ್ರ ನಾಯಾಕನಹಟ್ಟಿ ತಿಪ್ಪೇರುದ್ರಸ್ವಾಮಿ ಹೊರ ಮಠ ಹಾಗೂ ಒಳಮಠ ಹಾಗು ತಿಪ್ಪೇರುದ್ರಸ್ವಾಮಿ ಕಲಾಕೃತಿಗಳ ಪ್ರದರ್ಶನ ಮಾಡಲಾಗುತ್ತಿದೆ. ಚಿತ್ರದುರ್ಗದ ಹೆಮ್ಮೆಯ ಸಾಹಿತಿಗಳು ಚಿತ್ರ ಸಂಭಾಷಣೆಕಾರರು ವಿಮರ್ಶಕರಾದ ಬಿಎಲ್ ವೇಣು ಅವರಿಗೆ ಸಲ್ಲಿದ ಗೌರವ ಸಮರ್ಪಣೆಯ ಕಲಾಕೃತಿಗಳನ್ನು ಪ್ರದರ್ಶಿಸಲಾಗುತ್ತದೆ.ಇಂಡೋನೇಶ್ಯಾದ ಕಲೆಯಾದ ಚಾನೂರ್ ಕಲಾಕೃತಿಗಳನ್ನು ಮೊಟ್ಟ ಮೊದಲ ಬಾರಿಗೆ ಪರಿಚಯಿಸುವ ನಿಟ್ಟಿನಲ್ಲಿ ಪರಿಚಯಿಸಲಾಗುತ್ತದೆ.ಇವೆಲ್ಲವುಗಳ ಜೊತೆ ಮರಳು ಕಲಾಕೃತಿಗಳು,ಜೇಣು ನೊಣ ಸಾಕಾಣಿಕೆಯಿಂದ 71 ಲಕ್ಷ ವಹಿವಾಟನ್ನು ಜಿಲ್ಲೆಯಲ್ಲಿ ಸಾಧಿಸಿದ್ದು,ಜೇಣು ನೋಣಗಳ ಪರಾಗಸ್ಪರ್ಶ ಕಲಾಕೃತಿ,ಪರಿಸರ ಪ್ರೆರಮಿಯಾಗಿ ಇಂದಿಗೂ ಸ್ಪೂರ್ತಿಯಾಗಿರುವ ಸಾಲುಮರದ ತಿಮ್ಮಕ್ಕ ಕಲಾಕೃತಿ,ಜಟಕಾ ಬಂಡಿ,ಎತ್ತಿನ ಗಾಡಿಯ ದೃಶ್ಯ,ಕೋಟೆ ನಾಡಿನ ಆಕರ್ಷಣೀಯ ವಾದ ತೂಗುಯ್ಯಾಲೆ ಕಂಬ,ಹಣ್ಣು ಮತ್ತು ತರಕಾರಿಗಳಿಂದ ವಿವಿಧ ಸ್ವರೂಪಗಳ ಕೆತ್ತನೆ ಕಲಾಕೃತಿಗಳನ್ನು ಪ್ರದರ್ಶಿಸಲಾಗುತ್ತದೆ ಎಂದರು.ಜಿಲ್ಲೆಯಲ್ಲಿ ರೈತರು ಬೆಳೆದಿರುವ ಹಣ್ಣು ತರಕಾರಿ ಹೂವುಗಳ ಹಾಗೂ 500 ಕ್ಕೂ ಹೆಚ್ಚು ಹೂವುಗಳ ಪ್ರದರ್ಶಿಲಾಗುತ್ತದೆ.ಕೋಟೆ ನಾಡಿನಲ್ಲಿ ಹೂವಿನಕುಂಡದಲ್ಲಿ ಬೆಳೆದ ಬಗೆ ಬಗೆಯ ಚಿತ್ತಾರ್ಷಕ ವರ್ಣಗಳಿಂದ ಕೂಡಿದ ಹೂವಿನ ಗಿಡಗಳನ್ನು ಬೆಳೆಯಲಾಗಿದ್ದು, ಅವುಗಳ ಪ್ರದರ್ಶನವು ಮುದ ನೀಡಲಿದೆ.ಖ್ಯಾತ ಕಲಾವಿದರಿಂದ ರಚಿತವಾದ ಅಕ್ರಾಲಿಕ್, ಜಲವರ್ಣ ಅಯಿಲ್ ಮಾಧ್ಯಮದ ಚಿತ್ರ ಕಲಾಕೃತಿಗಳು ಪ್ರದರ್ಶನಗೊಳ್ಳಲಿವೆ.ಇದರ ಜೊತೆಗೆ ಕೃತಕವಾಗಿ ಸೃಷ್ಠಿಸಿರುವ ಜಲಪಾತಗಳು,ವಿವಿಧ ಇಲಾಖೆಗಳಿಂದ ವಾ್ತು ಪ್ರದರ್ಶನದ ಮಳಿಗೆಗಳು ಶಾಲಾ ಮಕ್ಕಳಿಗೆ ವಿವಿಧ ಸ್ಪ್ರಧೆಗಳು ಸಾರ್ವಜನಿಕ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ ಎಂದು ಸಿಇಓ ಡಾ. ಆಕಾಶ್ ತಿಳಿಸಿದರು. ಈ ಸಮಯದಲ್ಲಿ ತೊಇಟಗಾರಿಕೆ ಇಲಾಖೆ ಜಂಟಿ ನಿರ್ದೆಶಕರಾದ ಶ್ರೀಮತಿ ಸವಿತಾ, ದೀಪ, ತೋಟದಯ್ಯ,ತೋಟಗಾರಿಕೆ ಸಂಘದ ಖಾಜಾಂಚಿ ನಾಗರಾಜ್ ಬೇದ್ರೆ, ಹಿರಿಯರಾದ ಜಿಎಸ್ ಉಜ್ಜಿನಪ್ಪ, ಗಿರೀಶ್ ಸುಮನ ಅಂಗಡಿ ಇದ್ದರು.






