ಹೊಸದುರ್ಗ: ಬೈಕ್ ಕಳ್ಳರಿಬ್ಬರ ಬಂಧನ11 ಬೈಕ್ ಗಳು ವಶ
ಹೊಸದುರ್ಗ,ಆ26: ನಗರದ ಪೊಲೀಸರು 7ಲಕ್ಷ ಮೌಲ್ಯದ 11 ದ್ವಿಚಕ್ರ ವಾಹನ ಕಳ್ಳರನ್ನು ಬಂಧಿಸಿದ್ದಾರೆ. ಬಂಧಿತರನ್ನು ದಾದಾಪೀರ್ ಮತ್ತು ನಬಿವುಲ್ಲಾ ಎಂದು ಗುರುತಿಸಲಾಗಿದೆ. ಬಂಧಿತರು ಹೊಸದುರ್ಗ,ಚಿತ್ರದುರ್ಗ, ಹಿರಿಯೂರು, ಚಳ್ಳಕೆರೆ, ಇಷ್ಟೆ ಅಲ್ಲದೆ ದಾವಣಗೆರೆಯ ಕೆಜಿಟಿ ನಗರದಲ್ಲಿ ಕೂಡ ಬೈಕ್ ಗಳನ್ನು ಕದ್ದಿದ್ದಾರೆ. ಬಂಧಿತರಿಂದ ಬೈಕ್ ಗಳನ್ನು ವಶಕ್ಕೆ ಪಡೆದುಕೊಳ್ಲಲಾಗಿದೆ. ಈ ಕಾರ್ಯವನ್ನು ಎಸ್ಪಿ ರಂಜಿತ್ ಕುಮಾರ್ ಬಂಡಾರು ಶ್ಲಾಘಿಸಿದ್ದಾರೆ.