ಚಿತ್ರದುರ್ಗ,ಮಾ.11: ಹೊಳಲ್ಕೆರೆ ಪೊಲೀಸ್ ವೃತ್ತ ನಿರೀಕ್ಷಕರ ಕಚೇರಿ ವ್ಯಾಪ್ತಿಯಲ್ಲಿ ವಿವಿಧ ಪ್ರಕರಣಗಳಡಿ 4 ಜನ ಕಾಣೆಯಾದ ಕುರಿತು ಪ್ರತ್ಯೇಕ ದೂರುಗಳು ದಾಖಲಾಗಿವೆ.
2023 ಜನವರಿ 24 ರಂದು ತಾಳಿಕಟ್ಟೆ ಗ್ರಾಮದ ರಮೇಶಪ್ಪ ತಂದೆ ಈಶ್ವರಪ್ಪ (38) ಕಾಣೆಯಾದ ಕುರಿತು ದೂರು ದಾಖಲಾಗಿದೆ. ರಮೇಶಪ್ಪ 5 ಅಡಿ ಎತ್ತರ, ದುಂಡು ಮುಖ, ಧೃಡಕಾಯ, ಎಣ್ಣೆಗೆಂಪು ಮೈ ಬಣ್ಣ ಹೊಂದಿದ್ದಾರೆ.
2023 ಮಾರ್ಚ್ 16 ರಂದು ದುಮ್ಮಿ ಗ್ರಾಮದ ಸ್ವಾಮಿ.ಡಿ.ಆರ್ ತಂದೆ ರುದ್ರಪ್ಪ (48) ಕಾಣೆಯಾದ ಕುರಿತು ದೂರು ದಾಖಲಾಗಿದೆ. ಸ್ವಾಮಿ.ಡಿ.ಆರ್ 5.5 ಅಡಿ ಎತ್ತರ, ಕೋಲು ಮುಖ, ಸಾಧಾರಣ ಮೈಕಟ್ಟು, ಗೋಧಿ ಮೈ ಬಣ್ಣ ಹೊಂದಿದ್ದಾರೆ. ಮನೆಯಿಂದ ತೆರೆಳುವಾಗ ಬಿಳಿ ಬಣ್ಣದ ಅಂಗಿ, ಸಿಮೆಂಟ್ ಬಣ್ಣದ ಪಂಚೆ ಧರಿಸಿರುತ್ತಾರೆ.
2023 ಮೇ 16 ರಂದು ಶಿವಮೊಗ್ಗ ಜಿಲ್ಲೆಯ ನವುಲೆ ಗ್ರಾಮದ ಸವಳಂಗ ರಸ್ತೆ ಹೊಸೂರು ಬಡಾವಣೆಯ ಪ್ರಕಾಶ್ ತಂದೆ ನರಸಿಂಹಪ್ಪ (36) ಕಾಣೆಯಾದ ಕುರಿತು ದೂರು ದಾಖಲಾಗಿದೆ. ಪ್ರಕಾಶ್ 5 ಅಡಿ ಎತ್ತರ, ದಂಡು ಮುಖ, ಸಾಧಾರಣ ಮೈಕಟ್ಟು, ಧೃಡಕಾಯ ಶರೀರ ಎಣ್ಣೆ ಮೈಗೆಂಪು ಬಣ್ಣ ಹೊಂದಿದ್ದಾರೆ. ಮನೆಯಿಂದ ತೆರಳುವಾಗ ಬಿಳಿ ಬಣ್ಣದ ಅಂಗಿ, ಕಪ್ಪು ಬಣ್ಣದ ಪ್ಯಾಂಟ್ ಧರಿಸಿರುತ್ತಾರೆ.
2023 ನವೆಂಬರ್ 11 ರಂದು ದಾವಣಗೆರೆ ಜಿಲ್ಲೆಯ ನ್ಯಾಮತಿ ತಾಲ್ಲೂಕಿನ ದೊಡ್ಡತ್ತಿನಹಳ್ಳಿ ಗ್ರಾಮದ ಲಲಿತಮ್ಮ ಗಂಡ ವೀರಭದ್ರಪ್ಪ (70) ಕಾಣೆಯಾದ ಕುರಿತು ದೂರು ದಾಖಲಾಗಿದೆ. ಲಿಲತಮ್ಮ 5.2 ಅಡಿ ಎತ್ತರ, ದುಂಡು ಮುಖ, ಸಾಧಾರಣ ಮೈ ಕಟ್ಟು, ತಲೆಯಲ್ಲಿ 8 ಇಂಚು ಬಳಿ ಕೂದಲು, ಗೋದಿ ಮೈ ಬಣ್ಣ ಹೊಂದಿದ್ದಾರೆ. ಮನೆಯಿಂದ ಹೊಗುವಾಗ ಕೆಂಪು ಬಣ್ಣದ ಗೀರು ಸೀರೆ, ಹಸಿರು ಬಣ್ಣದ ಜಾಕೀಟು ಧರಿಸಿರುತ್ತಾರೆ.
ಕಾಣೆಯಾದವರೆಲ್ಲರೂ ಕನ್ನಡ ಭಾಷೆ ಮಾತನಾಡುತ್ತಾರೆ. ಇವರುಗಳ ಸುಳಿವು ದೊರೆತರೆ, ಹೊಳಲ್ಕೆರೆ ಪೊಲೀಸ್ ಠಾಣೆ ದೂರವಾಣಿ ಸಂಖ್ಯೆ 08191-275233, 9480803151, ಹೊಳೆಲ್ಕೆರೆ ವೃತ್ತ ನಿರೀಕ್ಷರ ಕಚೇರಿ ದೂರವಾಣಿ ಸಂಖ್ಯೆ 08197-275376, 9480803135, ಪೊಲೀಸ್ ಉಪಾಧೀಕ್ಷಕರ ಕಚೇರಿ ದೂರವಾಣಿ ಸಂಖ್ಯೆ 08194-222430, ಹಾಗೂ ಜಿಲ್ಲಾ ಕಂಟ್ರೋಲ್ ರೂಂ ಸಂಖ್ಯೆ 08194-222782 ಕರೆ ಮಾಡುವಂತೆ ಪ್ರಕಟಣೆಯಲ್ಲಿ ತಿಳಿಸಿದೆ.





