ಚಿತ್ರದುರ್ಗ: (ಸಂವಾ)- ಚಿತ್ರದುರ್ಗ ಮೆಡಿಕಲ್ ಕಾಲೇಜಿಗೆ ಸಿಎಂ ಯಡಿಯೂರಪ್ಪ 50 ಕೋಟಿ ರೂಪಾಯಿಗಳನ್ನು ಬಿಡುಗಡೆ ಮಾಡಿದ್ದಾರೆ ಎಂದು ಸಂಸದ ನಾರಾಯಣಸ್ವಾಮಿ ಹೇಳಿದ್ದಾರೆ.
ಅತ್ಯಂತ ಹಿಂದುಳಿದ ಜಿಲ್ಲೆ ಕೋಟೆ ನಾಡು ಚಿತ್ರದುರ್ಗಕ್ಕೆ 2013 ರಲ್ಲಿ ಮಂಜೂರಾದ ಮೆಡಿಕಲ್ ಕಾಲೇಜನ್ನು ಪುನರಾರಂಭಿಸಲು ಹಣವನ್ನು ಬಿಡುಗಡೆ ಮಾಡಿವಂತೆ ಚಿತ್ರದುರ್ಗ ಎಲ್ಲಾ ಶಾಸಕರುಗಳು, ಬಿಜೆಪಿ ಪಕ್ಷದ
ಎಲ್ಲಾ ವಿಭಾಗದ ಅಧ್ಯಕ್ಷರು ಪದಾಧಿಕಾರಿಗಳು ಮುಖಂಡರು, ನಿಯೋಗ ಹೋಗಿ ಸಿಎಂ ಯಡಿಯೂರಪ್ಪ ಅವರಿಗೆ ಒತ್ತಾಯಿಸಲಾಯಿತು. ನಮ್ಮೆಲ್ಲರ ಒತ್ತಾಯಕ್ಕೆ ಮರು ಮಾತನಾಡದೆ ಕೂಡಲೇ ಯಡಿಯೂರಪ್ಪ 50 ಕೋಟಿ ಹಣ ಮಂಜೂರು ಮಾಡಿದ್ದಾರೆ. ಮೆಡಿಕಲ್ ಕಾಲೇಜಿನ ಸ್ಥಳದ ವೀಕ್ಷಣೆಗೆ ನಾಳೆ ಆರೋಗ್ಯ ಸಚಿವ ಸುಧಾಕರ್ ಬರಲಿದ್ದಾರೆ. ಮೆಡಿಕಲ್ ಕಾಲೇಜು ಪುನರ್ ಆರಂಭಿಸಲು ಅವಕಾಶ ನೀಡಿದ ಯಡಿಯೂರಪ್ಪ ಅವರಿಗೆ ಧನ್ಯವಾದಗಳನ್ನು ಸಂಸದ ನಾರಾಯಣಸ್ವಾಮಿ ಅರ್ಪಿಸಿದ್ದಾರೆ.
ಸಂಯುಕ್ತವಾಣಿ.
ಡಿ.ಕುಮಾರಸ್ವಾಮಿ





