ಹೊಳಲ್ಕೆರೆ,ನ03:: ಮೂರನೆ ಬಾರಿಗೆ ನರೇಂದ್ರಮೋದಿ ದೇಶದ ಪ್ರಧಾನಿಯಾಗಿದ್ದಾರೆ. ಒಬ್ಬ ಮುಸಲ್ಮಾನನಿಗೂ ಕೆಟ್ಟದ್ದು ಮಾಡಿ ತೊಂದರೆ ಕೊಟ್ಟಿಲ್ಲ. ಬೇರೆಯವರ ಮರಳು ಮಾತನ್ನು ನಂಬಬೇಡಿ. ನೀಯತ್ತಿಟ್ಟುಕೊಳ್ಳಿ ಎಂದು ಶಾಸಕ ಡಾ.ಎಂ.ಚಂದ್ರಪ್ಪ ಸುಲ್ತಾನಿಪುರ ಗ್ರಾಮಸ್ಥರಿಗೆ ತಿಳಿಸಿದರು.
ಭರಮಸಾಗರ ಹೋಬಳಿ ಸುಲ್ತಾನಿಪುರ ಗ್ರಾಮದಲ್ಲಿ 33 ಲಕ್ಷ ರೂ.ವೆಚ್ಚದಲ್ಲಿ ನೂತನ ಸಿ.ಸಿ.ರಸ್ತೆ ಕಾಮಗಾರಿಗೆ ಸೋಮವಾರ ಭೂಮಿ ಪೂಜೆ ಸಲ್ಲಿಸಿ ಮಾತನಾಡಿದರು.
ಸಾರ್ವಜನಿಕರ ಕಷ್ಟ-ಸುಖ ಅರ್ಥಮಾಡಿಕೊಂಡು ಪ್ರತಿಯೊಬ್ಬರು ನನ್ನಂತೆ ಮನುಷ್ಯರು ಎನ್ನುವ ಮನುಷ್ಯತ್ವವಿಟ್ಟುಕೊಂಡು ಕೆಲಸ ಮಾಡುವ ರಾಜಕಾರಣಿ ನಾನು. ಅಧಿಕಾರ ಬಹಳ ದಿನ ಇರಲ್ಲ. ಇದ್ದಾಗ ಜನರಿಗೆ ಒಳ್ಳೆಯದು ಮಾಡಬೇಕೆನ್ನುವುದಷ್ಟೆ ನನಗೆ ಗೊತ್ತಿರುವುದು. ಉಪಕಾರ ಪಡೆದು ಅನುಕೂಲ ಮಾಡಿಕೊಂಡು ದ್ರೋಹ ಮಾಡುವುದಿದೆಯೆಲ್ಲಾ ಅದಕ್ಕಿಂತ ದೊಡ್ಡ ಮೋಸ ಬೇರೆಯಿಲ್ಲ. ಗಂಗಾ ಕಲ್ಯಾಣ ಸೇರಿದಂತೆ ನೂರಾರು ಯೋಜನೆಗಳಿವೆ. ಪ್ರಯೋಜನ ಪಡೆದುಕೊಂಡು ಉತ್ತಮ ಜೀವನ ಕಂಡುಕೊಳ್ಳಿ ಎಂದು ಹೇಳಿದರು.
ಸರ್ಕಾರಿ ಶಾಲೆಗೆ ಬರುವ ಬಡ ಮಕ್ಕಳಿಗೆ ಸ್ವಂತ ಖರ್ಚಿನಿಂದ ಬಸ್‍ಗಳನ್ನು ಬಿಟ್ಟಿದ್ದೇನೆ. ಪ್ರತಿ ಗ್ರಾಮಗಳಿಗೂ ಸಿ.ಸಿ.ರಸ್ತೆ, ಶುದ್ದ ಕುಡಿಯುವ ನೀರು ಪೂರೈಸಲಾಗುವುದು.
ಮನುಷ್ಯತ್ವವಿಟ್ಟುಕೊಂಡು ಕೆಲಸ ಮಾಡುವ ಎಂಎಲ್‍ಎ. ನಾನು ಎನ್ನುವುದನ್ನು ನೀವುಗಳು ಅರ್ಥಮಾಡಿಕೊಳ್ಳಬೇಕು. 660 ಕೋಟಿ ರೂ.ಗಳನ್ನು ಖರ್ಚು ಮಾಡಿ ಈ ಭಾಗದ ಎಲ್ಲಾ ಕೆರೆಗಳಿಗೆ ನೀರು ತುಂಬಿಸಲಾಗುವುದು. ಅಜ್ಜಪ್ಪನಹಳ್ಳಿ ಬಳಿ ವಿದ್ಯುತ್ ಪವರ್ ಸ್ಟೇಷನ್ ಕಟ್ಟಿಸುತ್ತಿದ್ದೇನೆ. 250 ಕೋಟಿ ರೂ.ವೆಚ್ಚದಲ್ಲಿ ಪಕ್ಕದ ಊರಿನಲ್ಲಿ ವಿದ್ಯುತ್ ಪವರ್ ಸ್ಟೇಷನ್ ನಿರ್ಮಾಣವಾಗುತ್ತಿದೆ. ರೈತರಿಗೆ ವಿದ್ಯುತ್, ನೀರು ಕೊಡಬೇಕೆಂಬುದು ನನ್ನ ಉದ್ದೇಶ ಎಂದರು.
ಭರಮಸಾಗರ ಬಿಜೆಪಿ. ಮಂಡಲ ಮಾಜಿ ಅಧ್ಯಕ್ಷ ಶೈಲೇಶ್, ನಾಗರಾಜ್, ಬುಡನ್, ಸಿದ್ದಲಿಂಗಣ್ಣ, ಹುಸೇನ್‍ಸಾಬ್ ಹಾಗೂ ಗ್ರಾಮದ ಪ್ರಮುಖರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.





