ಚಿತ್ರದುರ್ಗ: ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆಫಲಕಾರಿಯಾಗದೆ ಕೊನೆಯುಸಿರೆಳೆದವರ ಮೃತ ದೇಹಗಳನ್ನು ಬೆಳಗಾದರೂ ಸ್ಥಳಾಂತರಿಸದ ವದ್ಯರು ಹಾಗೂ ಸಿಬ್ಬಂದಿ ಮೇಲೆ ಕೂಡಲೇ ಶಿಸ್ತು ಕ್ರಮ ಜರುಗಿಸುವಂತೆ ಜಿಲ್ಲಾಧಿಕಾರಿ ಗೆ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಮಂಜುನಾಥ್ ಆದೇಶ ನೀಡಿದರು.

ಕಳೆದ ಒಂದು ದಿನದ ಹಿಂದೆ ಸೋಂಕಿತ ವಕೀಲರೊಬ್ಬರು ಸೋಂಕಿತ ವಾರ್ಡಿನಿಂದ ವಿಡಿಯೋ ಮಾಡಿ ಮೃತ ದೇಹಗಳನ್ನು ಸ್ಥಳಾಂತರಿಸದೇ ಇರುವುದನ್ನು ಬಯಲಿಗೆಳೆದಿದ್ದರು. ಇದರ ಹಿನ್ನೆಲೆಯಲ್ಲಿ ಇಂದು ಚಿತ್ರದುರ್ಗ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಮಂಜುನಾಥ್ ಪ್ರಸಾದ್ ಕೋವಿಡ್ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲಿಸಿದರು. ನಂತರ ಸಭೆಯಲ್ಲಿ ಮಾತನಾಡುತ್ತಾ, ಕೋವಿಡ್ ನಿರ್ಹವಣೆಯ ಬಗ್ಗೆ ಮತ್ತಷ್ಟು ಮಾಹಿತಿ ಪಡೆಯುತ್ತಾ ಮೃತ ದೇಹಗಳನ್ನು ರಾತ್ರಿಯಿಂದ ಬೆಳಗಿನವರೆಗೂ ಸ್ಥಳಾಂತರಿಸದೆ ಇರುವುದರಿಂದ ಬೇಸರ ವ್ಯಕ್ತಪಡಿಸುತ್ತಾ, ನಿರ್ಲಕ್ಷ ವಹಿಸಿದ ವೈದ್ಯರು ಹಾಗೂ ಸಿಬ್ಬಂದಿ ಮೇಲೆ ಶಿಸ್ರಿನ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಕವಿತಾ ಮನ್ನಿಕೇರಿಗೆ ಆದೇಶ ನೀಡಿದರು.
ಸಂಯುಕ್ತವಾಣಿ





