ಎಸ್ ಎಸ್ ಎಲ್‌ಸಿ ಫಲಿತಾಂಶದಲ್ಲಿ ಚಳ್ಳಕೆರೆ ಪ್ರಥಮ‌ ಸ್ಥಾನ ಶಾಸಕ ರಘು ಮೂರ್ತಿ ಸಂತಸ

ಜಿಲ್ಲಾ ಸುದ್ದಿ

 ರಾಜ್ಯಕ್ಕೆ  ಎಸ್ ಎಸ್ಎಲ್ ಸಿ ಫಲಿತಾಂಶದಲ್ಲಿ ನಮ್ಮ ಜಿಲ್ಲೆ  ಪ್ರಥಮ ಸ್ಥಾನ ಪಡೆದಿದ್ದ ಸಂತಸ ತಂದಿದ್ದು ನಮ್ಮ ಜಿಲ್ಲೆಯಲ್ಲಿ ಚಳ್ಳಕೆರೆ ತಾಲೂಕು ಮೊದಲನೇ ಸ್ಥಾನ ಪಡೆದಿರುವುದು ನನಗೆ  ಸಂತೋಷವನ್ನು ಇಮ್ಮಡಿಗೊಳಿಸಿದೆ ಎಂದು ಶಾಸಕ ಟಿ.ರಘುಮೂರ್ತಿ ಮೆಚ್ಚುಗೆ ವ್ಯಕ್ತಪಡಿಸಿದರು.

 

 

ನಗರದ ತುರುವನೂರು ರಸ್ತೆಯ ಶಾಸಕರ  ನಿವಾಸದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆಯ ಸಿಬ್ಬಂದಿಗಳಿಂದ ಸನ್ಮಾನ ಸ್ವೀಕರಿಸಿ ಮಾತನಾಡಿದರು.
ಚಿತ್ರದುರ್ಗ ಜಿಲ್ಲೆ ನಮಗೆ ಈ ಬಾರಿ   ರಾಜ್ಯದಲ್ಲಿ ಪ್ರಥಮ ಸ್ಥಾನ ಪಡೆಯುವ ಮೂಲಕ ರಾಜ್ಯದ ಚಿತ್ರದುರ್ಗ ಕಡೆ ತಿರುಗಿ ನೋಡುವಂತೆ ಮಾಡಿದ್ದಾರೆ. 96.8 ಸರಾಸರಿ ಫಲಿತಾಂಶವನ್ನು  ಪಡೆದಿದೆ. ನನ್ನ ಕ್ಷೇತ್ರವಾದ  ಚಳ್ಳಕೆರೆ  ತಾಲೂಕಿನಲ್ಲಿ   98.20 ಸರಾಸರಿ ಫಲಿತಾಂಶವನ್ನು ಪಡೆದಿರುವುದು ನನಗೆ ತೃಪ್ತಿ ತಂದಿದೆ‌. ನಾನು ಕ್ಷೇತ್ರ ಶಿಕ್ಷಣಧಿಕಾರಿಗಳಾದ ಸುರೇಶ್ ಮತ್ತು ತಂಡಕ್ಕೆ ಹೇಳಿದ್ದೆ ಈ ಬಾರಿ ಕಳೆದ ಬಾರಿಯಂತೆ ಉತ್ತಮ ಫಲಿತಾಂಶ ಬರಬೇಕು ಎಂದು ತಿಳಿಸಿದ್ದೆ ಅದರಂತೆ ಎಲ್ಲಾ ಶಿಕ್ಷಕರ ಶ್ರಮ ಮತ್ತು ಮಕ್ಕಳ ಶ್ರಮದಿಂದ ಅತ್ಯತ್ತಮ ಫಲಿತಾಂಶ ಬಂದಿದೆ ಎಂದರು.
ಚಳ್ಳಕೆರೆ ಕ್ಷೇತ್ರದ  101 ಶಾಲೆಗಳ ಮುಖ್ಯ ಶಿಕ್ಷಕರಿಗೆ ಅಭಿನಂದನೆ ಕಾರ್ಯಕ್ರಮ‌ ಸಹ‌ ಮುಂದಿನ ದಿನದಲ್ಲಿ ಮಾಡಲಾಗುತ್ತದೆ. ಪೋಷಕರು ನೂರಾರು ಸಮಸ್ಯೆಗಳನ್ನು ಹೊಂದಿದ್ದರು ಸಹ ಮಕ್ಕಳ ಭವಿಷ್ಯಕ್ಕಾಗಿ ತನ್ನೆಲ್ಲ ಆಸೆ ಆಕಾಂಕ್ಷೆಗಳನ್ನು ಬದಿಗಿಟ್ಟು ಮಕ್ಕಳ ವಿಧ್ಯಾಭ್ಯಾಸ ಮಾಡಿಸುತ್ತಾರೆ. ಮಕ್ಕಳು ತಂದೆ ತಾಯಿಯ ಕನಸನ್ನು ನನಸು ಮಾಡುವ ಕಡೆ ಹೆಜ್ಜೆ ಹಾಕಿದರೆ ಕಷ್ಟಕ್ಕೆ ಪ್ರತಿಫಲ ಸಿಗುತ್ತದೆ.  ಚಳ್ಳಕೆರೆ ತಾಲೂಕು ಸ್ವಾಭಿಮಾನದ ನಾಡು. ಇಲ್ಲಿ ಯಾವುದಕ್ಕೂ ಕಡಿಮೆ ಇಲ್ಲ. ಅದಕ್ಕೆ ಶಿಕ್ಷಣ ಕ್ಷೇತ್ರದಲ್ಲಿ ಪಡೆದಿರು ಫಲಿತಾಂಶ ಸಾಕ್ಷಿಯಾಗಿದೆ.
ಎಸ್ ಎಸ್ಎಲ್ ಸಿ ಪರೀಕ್ಷೆ ಜೀವನದ ಒಂದು ಅತಿ ಮುಖ್ಯವಾದ ಘಟ್ಟವಾಗಿದ್ದು ಇದರ ನಂತರ ಉತ್ತಮ ಆಯ್ಕೆಗಳ ಮಾಡಿಕೊಂಡು ಬದುಕು ಕಟ್ಟಿಕೊಳ್ಳಬೇಕು. ಒಂದು ಮಗು ಮತ್ತೊಂದು ಮಗುವಿಗಿಂತ ಭಿನ್ನವಾದ ಬುದ್ದಿಶಕ್ತಿ ಹೊಂದಿರುತ್ತಾರೆ. ಆದ್ದರಿಂದ ಮಕ್ಕಳಿಗೆ ಪೋಷಕರು ಬಲವಂತವಾಗಿ ವಿಷಯಗಳನ್ನು ಕೊಡಿಸದೇ ತಮ್ಮ. ಇಷ್ಟದ ಆಸಕ್ತಿ ವಿಷಯದ ಅಧ್ಯಯನಕ್ಕೆ ಒತ್ತು ಕೊಟ್ಟರೆ ಜೀವನದಲ್ಲಿ ಯಶಸ್ಸು ಪಡೆಯಲು ಸಹಕಾರಿಯಾಗುತ್ತದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ  ಡಿಡಿಪಿಐ  ರವಿಶಂಕರ್ ರೆಡ್ಡಿ,  ಚಳ್ಳಕೆರೆ ಬಿಇಓ‌ ಸುರೇಶ್, ಹಿರಿಯೂರು ಬಿಇಓ ನಾಗಭೂಷಣ್ , ಡಯಟ್ ಹಿರಿಯ ಉಪನ್ಯಾಸಕ ಸಿ.ಎ.ವೆಂಕಟೇಶ್ ಇದ್ದರು.

Leave a Reply

Your email address will not be published. Required fields are marked *