ಚಿತ್ರದುರ್ಗ: ಅರ್ಬನ್ ಇಂಡಿಯಾ ವಸ್ತು ಪ್ರದರ್ಶನ ಮತ್ತು ಮಾರಾಟ ಮೇಳವು ಹೋಟೆಲ್ ದುರ್ಗದ ಸಿರಿಯಲ್ಲಿ ನವೆಂಬರ್ 28 ರಂದು ನಡೆಯಲಿದೆ.
ಮಾರಾಟ ಮೇಳದಲ್ಲಿ ವಿವಿಧ ರಾಜ್ಯಗಳ ಸೀರೆಗಳು, ಕರಕುಶಲ ಹಾಗೂ ಅಲಂಕಾರಿಕ ವಸ್ತುಗಳು, ಗ್ರಾಮೋದ್ಯೋಗ ಉತ್ಪನ್ನಗಳ ಪ್ರದರ್ಶನ ಹಾಗೂ ಪ್ರಸಿದ್ಧ ಬ್ರಾಂಡ್‌ಗಳ ವಸ್ತುಗಳು ಇಲ್ಲಿ ದೊರೆಯಲಿವೆ. ವಾರಣಾಸಿಯಲ್ಲಿ ಕೈಮಗ್ಗದಿಂದ ನೇಯ್ದು ತರಲಾದ ಬನಾರಸ್ ಸಿಲ್ಕ್ ಹಾಗೂ ಕಾಟನ್ ಸೀರೆಗಳು, ಫ್ಯಾಷನ್ ಡಿಸೈನ್ ರನ ಫ್ಯಾನ್ಸಿ ಸೀರೆ ರೂ. 1,100 ರಿಂದ 28 ಸಾವಿರ ರೂ.ವರೆಗಿನ ಉತ್ಪನ್ನಗಳು ಇಲ್ಲಿ ಲಭ್ಯವಿರುತ್ತದೆ. ಹಾಗೂ ಸಿಲ್ಕ್ ಸೀರೆಗಳು, ಬೆಳ್ಳಿ ಹಾಗೂ ವಿವಿಧ ಹರಳುಗಳಿಂದ ಸಿದ್ದಗೊಂಡ ಆಭರಣಗಳು, ಬೆಂಗಳೂರಿನ ಡಿಸೈನರ್ ಕುರ್ತೀಸ್, ಹತ್ತಿ ಸೂಪರ್ ಗಾತ್ರದ ಬೆಡ್‌ಶೀಟ್‌ಗಳು,ಡಿಸೈನರ್ ಕೈಚೀಲಗಳು, ಸೌಂದರ್ಯ ವರ್ಧಕ ಸಾಧನಗಳು, ಬ್ರಾಂಡೆಡ್ ಮಕ್ಕಳ ಉಡುಪುಗಳು ಸಹ ಇಲ್ಲಿ ದೊರೆಯುತ್ತವೆ.
ಕೇವಲ ಒಂದು ದಿನದ ವಸ್ತು ಪ್ರದರ್ಶನ ಮತ್ತು ಮಾರಾಟ ಮೇಳವಾಗಿರುವುದರಿಂದ ಈ ಸುವರ್ಣ ಅವಕಾಶವನ್ನು ಚಿತ್ರದುರ್ಗದ ಜನತೆ ಸದುಪಯೋಗ ಪಡಿಸಿಕೊಳ್ಳಲು ಸಂಸ್ಥೆ ತಿಳಿಸಿದೆ.