ಚಿತ್ರದುರ್ಗ ಫೆ07(ಸಂವಾ)-ಮಾನಂಗಿ ಗ್ರಾಮದಲ್ಲಿ ರೈಲಿಗೆ ಬಿದ್ದು ವ್ಯಕ್ತಿಯೊಬ್ಬ ಆತ್ಮಹತ್ಯೆ ಮಾಡಿಕೊಂಡು ಮೃತಪಟ್ಟ ಘಟನೆ ನಡೆದಿದೆ. ಚಿತ್ರದುರ್ಗ ತಾಲ್ಲೂಕಿನ ಮಾನಂಗಿ ಗ್ರಾಮದಲ್ಲಿ ಬೆಳಗ್ಗೆ ಘಟನೆ ನಡೆದಿದ್ದು, ಮೃತನನ್ನ ಹೊಳಲ್ಕೆರೆ ತಾಲ್ಲೂಕಿನ ಹೆಚ್ ಡಿ ಪುರದ ರಂಗನಾಥ 40 ವರ್ಷಎಂದು ಗುರುತಿಸಲಾಗಿದೆ. ಮಾನಸಿಕ ಖಿನ್ನತೆಯಿಂದ ಆತ್ಮಹತ್ಯೆ ಮಾಡಿಕೊಂಡಿರುವುದಾಗು ತಿಳಿದು ಬಂದಿದೆ. ಮಾನಸಿಕ ಖಿನ್ನತೆಯಿಂದ ಬಲಳುತ್ತಿದ್ದ ಮೃತನು ಆಗಾಗ್ಗೆ ತನ್ನ ಸಹೋದರಿ ಮನೆಗೆ ಬರುತ್ತಿದ್ದ, ಇಂದು ಬಂದಿದ್ದು, ಮಾನಂಗಿ ಗ್ರಾಮದಿಂದ ಹೊಸಹಳ್ಳಿಗೆ ಹೋಗುವ ಮಾರ್ಗದ ರೈಲ್ವೇ ಬ್ರಿಡ್ಜ್ ಬಳಿ ತೆರಳಿ ಚಲಿಸುತ್ತಿದ್ದ ರೈಲಿಗೆ ತಲೆ ಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಘಟನಾ ಸ್ಥಳಕ್ಕೆ ರೈಲ್ವೇ ಪೊಲೀಸರು ಭೇಟಿ ನೀಡಿ ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.





