ಹೊಸದುರ್ಗ: ಗ್ರಾಮ ಪಂಚಾಯಿತಿ ಸದಸ್ಯರ ಕುಟುಂಬದ ನರೇಗಾದ ಕೂಲಿ ಹಣ ನೀಡಲು ಲಂಚದ ಬೇಡಿಕೆ ಇಟ್ಟಿದ್ದ ಪಿಡಿಓ ಹಾಗೂ ಕಂಪ್ಯೂಟರ್ ಆಪರೇಟರ್ ಇಬ್ಬರು ಜೈಲು ಪಾಲಾದ ಘಟನೆ ನಡೆದಿದೆ.
ಹೊಸದುರ್ಗದ ಜಾನಕಲ್ ಗ್ರಾಮ ಪಂಚಾಯಿತಿಯಲ್ಲಿ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಲ್ಲಿ ಮಾಡಿದ್ದ ಕೂಲಿ ಹಣವನ್ನು ಫಲಾನುಭವಿಗಳ ಬ್ಯಾಂಕ್ ಖಾತೆಗೆ ಜಮಾ ಮಾಡಲು ಲಂಚದ ಬೇಡಿಕೆಯನ್ನು ಜಾಕಲ್ ಗ್ರಾಮ ಪಂಚಾಯಿತಿ ಪಿಡಿಓ ಶ್ರೀನಿವಾಸ್ ಹಾಗೂ ಕಂಪ್ಯೂಟರ್ ಆಪರೇಟರ್ ಚನ್ನಬಸಪ್ಪ ಅವರುಗಳು ಇಟ್ಟಿದ್ದ ಹಿನ್ನೆಲೆಯಲ್ಲಿ ಲೋಕಾಯುಕ್ತಕ್ಕೆ ಫಲಾನುಭವಿಗಳು ದೂರು ನೀಡಿದ್ದರು, ಲೋಕಾಯುಕ್ತ ಅಧಿಕಾರಿಗಳು ಬಲೆ ಬೀಸಿದ್ದು, ಬಲೆಗೆ ಪಿಡಿಓ ಹಾಗೂ ಕಂಪ್ಯೂಟರ್ ಬಿದ್ದಿದ್ದು, ಇಬ್ಬರು ಕಂಬಿ ಹಿಂದೆ ಸೇರಿದ್ದಾರೆ.





