Close Menu
Samyukta VaaniSamyukta Vaani
  • ಮುಖಪುಟ
  • ರಾಜ್ಯ
  • ಜಿಲ್ಲಾ ಸುದ್ದಿ
  • ರಾಜಕೀಯ
  • ದೇಶ
  • ಕ್ರೈಂ
  • ಸಿನೆಮಾ
  • ಕ್ರೀಡೆ
  • ಆರೋಗ್ಯ
Facebook X (Twitter) Instagram YouTube WhatsApp Telegram
Facebook X (Twitter) Instagram
Samyukta VaaniSamyukta Vaani
  • ಮುಖಪುಟ

    ಹೊಸದುರ್ಗ: ಲಂಚ ಪಡೆಯುತ್ತಿದ್ದ ಬೆಸ್ಕಾಂ ಸೆಕ್ಷನ್ ಆಫೀಸರ್ ಲೋಕಾ ಬಲೆಗೆ

    January 31, 2026

    ಸರ್ವರಿಗೂ ನ್ಯಾಯ: 18 ವಕೀಲರ ‘ನ್ಯಾಯ’ ತಂಡದಿಂದ ಸಂವಿಧಾನ ಫೆಲೋಶಿಪ್ ನ ಮೂರನೇ ಆವೃತ್ತಿ ಆರಂಭ

    January 31, 2026

    ಮೀಸಲಾತಿ ಪ್ರಮಾಣ ಹೆಚ್ಚಳಅನಿವಾರ್ಯ ;ಎಚ್.ಆಂಜನೇಯ

    January 30, 2026

    ತಮಟಕಲ್ಲು ಬಳಿ ಭೀಕರ ಅಪಘಾತ ಇಬ್ಬರು ಸಾವು

    January 11, 2026

    ಲಾರಿ ಕಾರು ನಡುವೆ ಭೀಕರ ಅಪಘಾತ ನಾಲ್ವರ ಸಾವು

    January 11, 2026
  • ರಾಜ್ಯ

    ಸರ್ವರಿಗೂ ನ್ಯಾಯ: 18 ವಕೀಲರ ‘ನ್ಯಾಯ’ ತಂಡದಿಂದ ಸಂವಿಧಾನ ಫೆಲೋಶಿಪ್ ನ ಮೂರನೇ ಆವೃತ್ತಿ ಆರಂಭ

    January 31, 2026

    ಮೀಸಲಾತಿ ಪ್ರಮಾಣ ಹೆಚ್ಚಳಅನಿವಾರ್ಯ ;ಎಚ್.ಆಂಜನೇಯ

    January 30, 2026

    ಲಾರಿ ಕಾರು ನಡುವೆ ಭೀಕರ ಅಪಘಾತ ನಾಲ್ವರ ಸಾವು

    January 11, 2026

    ವೈದ್ಯಕೀಯ ಸ್ನಾತಕೋತ್ತರ ಶಿಕ್ಷಣಕ್ಕೆ ಪ್ರವೇಶಕ್ಕೆಒಳ ಮೀಸಲು ಸೌಲಭ್ಯ ಪಡೆದ ಮೊದಲ ವಿದ್ಯಾರ್ಥಿಗಳಿಂದ ಸಿಎಂ ಗೆ ಕೃತಜ್ಞತೆ

    January 8, 2026

    ಮರ್ಯಾದೆಗೇಡು ಹತ್ಯೆ ಜಿಎಸ್ ಮಂಜುನಾಥ್ ಸಾಂತ್ವಾನ

    January 6, 2026
  • ಜಿಲ್ಲಾ ಸುದ್ದಿ
  • ರಾಜಕೀಯ
  • ದೇಶ
  • ಕ್ರೈಂ
  • ಸಿನೆಮಾ
  • ಕ್ರೀಡೆ
  • ಆರೋಗ್ಯ
  • ಮುಖಪುಟ
  • ರಾಜ್ಯ
  • ಜಿಲ್ಲಾ ಸುದ್ದಿ
  • ರಾಜಕೀಯ
  • ದೇಶ
  • ಕ್ರೈಂ
  • ಸಿನೆಮಾ
  • ಕ್ರೀಡೆ
  • ಆರೋಗ್ಯ
Samyukta VaaniSamyukta Vaani
Home»ರಾಜ್ಯ»ಬುರುಜಿನಹಟ್ಟಿ ನಿವಾಸಿಗಳಿಗೆ ಸರ್ಕಾರಿ ಸೌಲಭ್ಯ ಕಲ್ಪಿಸಿಕೊಡಲು ಶ್ರೀಗಳಿಂದ ಮನವಿ
ರಾಜ್ಯ

ಬುರುಜಿನಹಟ್ಟಿ ನಿವಾಸಿಗಳಿಗೆ ಸರ್ಕಾರಿ ಸೌಲಭ್ಯ ಕಲ್ಪಿಸಿಕೊಡಲು ಶ್ರೀಗಳಿಂದ ಮನವಿ

D KumaraswamyBy D KumaraswamySeptember 1, 2024No Comments2 Mins Read
Facebook Twitter Pinterest LinkedIn Tumblr WhatsApp VKontakte Email
Share
Facebook Twitter LinkedIn Pinterest Email

 

ಮೈಲಾರ ಲಿಂಗೇಶ್ವರಸ್ವಾಮಿ ಕೇವಲ ಕರ್ನಾಟಕದಲ್ಲಷ್ಟೆ ಅಲ್ಲ. ದಕ್ಷಿಣ ಭಾರತದ ಹಲವು ಜಿಲ್ಲೆಗಳಲ್ಲಿ ಪ್ರಸಿದ್ದಿ ಪಡೆದಿದೆ ಎಂದು ಮಾದಾರ ಚನ್ನಯ್ಯ ಗುರುಪೀಠದ ಬಸವಮೂರ್ತಿ ಸ್ವಾಮೀಜಿ ಗುಣಗಾನ ಮಾಡಿದರು.

ಮೈಲಾರ ಲಿಂಗೇಶ್ವರ ದೇವಸ್ಥಾನ ಜೀರ್ಣೋದ್ದಾರ ಅಭಿವೃದ್ದಿ ಸಮಿತಿಯಿಂದ ಬುರುಜಿನಹಟ್ಟಿ ಉಪ್ಪುನೀರು ಬಾವಿ ರಸ್ತೆಯಲ್ಲಿ ನಿರ್ಮಾಣವಾಗಿರುವ ಮೈಲಾರ ಲಿಂಗೇಶ್ವರ ಸ್ವಾಮಿ ಗಂಗಮಾಳಮ್ಮ ದೇವಿಯ ದೇವಸ್ಥಾನ ಹಾಗೂ ಸಮುದಾಯ ಭವನ ಉದ್ಘಾಟಿಸಿ ಆಶೀರ್ವಚನ ನೀಡಿದರು.

ಮೈಲಾರ ಲಿಂಗೇಶ್ವರಸ್ವಾಮಿ ದೇವಸ್ಥಾನ ಸುಂದರವಾಗಿ ನಿರ್ಮಾಣವಾಗಿರುವುದರ ಹಿಂದೆ ನಿಶಾನಿ ಕುಟುಂಬದವರ ಪರಿಶ್ರಮವಿದೆ. ಮೈಲಾರ ಕಾರ್ಣಿಕ ನಾಡಿನಾದ್ಯಂತ ಹೆಸರುವಾಸಿ. ದೋಣಿ ಸೇವೆಯಲ್ಲಿ ನಮ್ಮವರ ಪಾತ್ರ ದೊಡ್ಡದು ಎಂದು ಹೇಳಿದರು.

ಗೋವಿಂದ ಕಾರಜೋಳರವರು ಚಿತ್ರದುರ್ಗ ಕ್ಷೇತ್ರದಿಂದ ಪಾರ್ಲಿಮೆಂಟ್ ಚುನಾವಣೆಗೆ ನಿಂತು ಗೆಲ್ಲುತ್ತಾರೆಂದು ಯಾರು ನಿರೀಕ್ಷಿಸಿರಲಿಲ್ಲ. ಬಿ.ಎಸ್.ಯಡಿಯೂರಪ್ಪನವರ ಸರ್ಕಾರದಲ್ಲಿ ಉಪ ಮುಖ್ಯಮಂತ್ರಿಯಾಗಿ ಅನೇಕ ಉತ್ತಮ ಕೆಲಸಗಳನ್ನು ಮಾಡಿದ್ದಾರೆ. ಚಿತ್ರದುರ್ಗದಲ್ಲಿ ಮಾದಾರ ಚನ್ನಯ್ಯ ಮಠ ತಲೆ ಎತ್ತಲು ಸಂಸದರು ಕಾರಣ ಎಂದು ಸ್ಮರಿಸಿದರು.

 

 

ನಗರಸಭೆ ಅಧ್ಯಕ್ಷ ಸ್ಥಾನ ಹುಟ್ಟಿಕೊಂಡಿದ್ದೆ ಬುರುಜನಹಟ್ಟಿಯಿಂದ. ಎಲ್ಲಾ ಪಕ್ಷಗಳು ಇಲ್ಲಿವೆ. ಈ ಭಾಗದಲ್ಲಿ ಮನೆ ಕಟ್ಟಿಕೊಂಡಿರುವವರಿಗೆ ಇ.ಸ್ವತ್ತಾಗಲಿ, ಖಾತೆ ಹೀಗೆ ಯಾವುದೇ ಮೂಲಭೂತ ಸೌಲಭ್ಯಗಳು ಸಿಗುತ್ತಿಲ್ಲ. ಪುರಾತತ್ವ ಇಲಾಖೆಯಿಂದ ಅನೇಕ ಸಮಸ್ಯೆಗಳಿವೆ. ಹಾಗಾಗಿ ಕೇಂದ್ರ ಸರ್ಕಾರದಲ್ಲಿ ಮಾತನಾಡಿ ಬುರುಜನಹಟ್ಟಿ ನಿವಾಸಿಗಳಿಗೆ ಸೌಲಭ್ಯ ದೊರಕಿಸಿಕೊಡುವಂತೆ ಸಂಸದ ಗೋವಿಂದ ಕಾರಜೋಳರವರಲ್ಲಿ ಸ್ವಾಮೀಜಿ ಮನವಿ ಮಾಡಿದರು.

ದೇವಸ್ಥಾನದ ಸಂಸ್ಥಾಪಕರಾದ ದಿ.ನಿಶಾನಿ ಲಕ್ಷ್ಮಮ್ಮ, ದಿ.ನಿಶಾನಿ ಮಲ್ಲಪ್ಪ ಇವರುಗಳ ಭಾವಚಿತ್ರ ಅನಾವರಣಗೊಳಿಸಿ ಮಾತನಾಡಿದ ಸಂಸದ ಗೋವಿಂದ ಕಾರಜೋಳರವರು ಪುರಾತತ್ವ ಇಲಾಖೆಯ ನಿಯಮವೇನಿದೆ ಎನ್ನುವುದನ್ನು ನೋಡಿಕೊಂಡು ಬುರುಜನಹಟ್ಟಿ ನಿವಾಸಿಗಳ ಸಮಸ್ಯೆಗಳಿಗೆ ಸ್ಪಂದಿಸುತ್ತೇನೆ. ಇಲ್ಲಿಯವರೆಗೂ ಏನೇನು ದಾಖಲೆಗಳನ್ನು ಸಲ್ಲಿಸಿ ಪತ್ರ ವ್ಯವಹರಿಸಿದ್ದೀರಿ ಎನ್ನುವ ಮಾಹಿತಿ ಕೊಡಿ. ಮೈಲಾರಲಿಂಗೇಶ್ವರಸ್ವಾಮಿ ಗಂಗಮಾಳಮ್ಮ ದೇವಸ್ಥಾನ ಹಾಗೂ ಸಮುದಾಯ ಭವನ ಭವ್ಯವಾಗಿ ನಿರ್ಮಾಣವಾಗಿರುವುದು ಇಲ್ಲಿನ ನಿವಾಸಿಗಳಿಗೆ ಅನುಕೂಲವಾಗಲಿದೆ ಎಂದು ಹೇಳಿದರು.

ದೇವಸ್ಥಾನ ಕಾರ್ಯಕಾರಿ ಸಮಿತಿ ಅಧ್ಯಕ್ಷ ಜಿ.ಸಿ.ಸುರೇಶ್‍ಬಾಬು, ಪ್ರಧಾನ ಕಾರ್ಯದರ್ಶಿ ಎಂ.ನಿಶಾನಿ ಜಯಣ್ಣ, ಗೌರವಾಧ್ಯಕ್ಷ ಎಸ್.ಕೃಷ್ಣಮೂರ್ತಿ, ಉಪಾಧ್ಯಕ್ಷ ವಿಜಯಕುಮಾರ್ ಪಿ.ಎಸ್. ನಗರಸಭೆ ಅಧ್ಯಕ್ಷೆ ಸುಮಿತಾ ಈರುಳ್ಳಿರಘು, ಸದಸ್ಯೆ ಪಿ.ಕೆ.ಮೀನಾಕ್ಷಿ, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷೆ ಶಶಿಕಲಾ ಕಂದಿಕೆರೆ ಸುರೇಶ್‍ಬಾಬು ವೇದಿಕೆಯಲ್ಲಿದ್ದರು.

ನಿರ್ದೇಶಕರುಗಳಾದ ಎಂ.ಮಲ್ಲಿಕಾರ್ಜುನ್, ಚಂದ್ರಪ್ಪ, ಶಿವಕುಮಾರ್ ಪಿ.ಎಲ್. ನಿಶಾನಿ ಧನುಷ್, ಬಿ.ಎಂ.ನಾಗರಾಜ್‍ಬೇದ್ರೆ, ಉದಯರವಿ ಟಿ. ಕೆ.ಗೋಪಿನಾಥ್, ನಿಶಾನಿ ಮಾಲತೇಶ್, ಕುರುಬ ಸಮಾಜದ ಮುಖಂಡರುಗಳಾದ ಫೈಲ್ವಾನ್ ತಿಪ್ಪೇಸ್ವಾಮಿ, ಡಿ.ಕೆ.ಲೋಕೇಶಪ್ಪ ಸೇರಿದಂತೆ ಬುರುಜನಹಟ್ಟಿಯ ಮುಖಂಡರುಗಳು ಈ ಸಂದರ್ಭದಲ್ಲಿ ಹಾಜರಿದ್ದರು

Share. Facebook Twitter Pinterest LinkedIn Tumblr WhatsApp Email
Previous Articleಶಿಕ್ಷಣವಿಲ್ಲದ ಸಮುದಾಯ ಮುಂದುವರೆಯಲು ಸಾಧ್ಯವಿಲ್ಲ.
Next Article ನಾವು ಎಲ್ಲಿಯೇ ಇರಲಿ ಮೊದಲು ಮಾತೃಭಾಷೆಗೆ ಗೌರವ ಕೊಡಬೇಕು
D Kumaraswamy
  • Tumblr

Related Posts

ಸರ್ವರಿಗೂ ನ್ಯಾಯ: 18 ವಕೀಲರ ‘ನ್ಯಾಯ’ ತಂಡದಿಂದ ಸಂವಿಧಾನ ಫೆಲೋಶಿಪ್ ನ ಮೂರನೇ ಆವೃತ್ತಿ ಆರಂಭ

January 31, 2026

ಮೀಸಲಾತಿ ಪ್ರಮಾಣ ಹೆಚ್ಚಳಅನಿವಾರ್ಯ ;ಎಚ್.ಆಂಜನೇಯ

January 30, 2026

ಲಾರಿ ಕಾರು ನಡುವೆ ಭೀಕರ ಅಪಘಾತ ನಾಲ್ವರ ಸಾವು

January 11, 2026

ವೈದ್ಯಕೀಯ ಸ್ನಾತಕೋತ್ತರ ಶಿಕ್ಷಣಕ್ಕೆ ಪ್ರವೇಶಕ್ಕೆಒಳ ಮೀಸಲು ಸೌಲಭ್ಯ ಪಡೆದ ಮೊದಲ ವಿದ್ಯಾರ್ಥಿಗಳಿಂದ ಸಿಎಂ ಗೆ ಕೃತಜ್ಞತೆ

January 8, 2026
Leave A Reply Cancel Reply

Recent Posts
  • ಹೊಸದುರ್ಗ: ಲಂಚ ಪಡೆಯುತ್ತಿದ್ದ ಬೆಸ್ಕಾಂ ಸೆಕ್ಷನ್ ಆಫೀಸರ್ ಲೋಕಾ ಬಲೆಗೆ
  • ಸರ್ವರಿಗೂ ನ್ಯಾಯ: 18 ವಕೀಲರ ‘ನ್ಯಾಯ’ ತಂಡದಿಂದ ಸಂವಿಧಾನ ಫೆಲೋಶಿಪ್ ನ ಮೂರನೇ ಆವೃತ್ತಿ ಆರಂಭ
  • ಮೀಸಲಾತಿ ಪ್ರಮಾಣ ಹೆಚ್ಚಳಅನಿವಾರ್ಯ ;ಎಚ್.ಆಂಜನೇಯ
  • ತಮಟಕಲ್ಲು ಬಳಿ ಭೀಕರ ಅಪಘಾತ ಇಬ್ಬರು ಸಾವು
  • ಲಾರಿ ಕಾರು ನಡುವೆ ಭೀಕರ ಅಪಘಾತ ನಾಲ್ವರ ಸಾವು
  • ವೈದ್ಯಕೀಯ ಸ್ನಾತಕೋತ್ತರ ಶಿಕ್ಷಣಕ್ಕೆ ಪ್ರವೇಶಕ್ಕೆಒಳ ಮೀಸಲು ಸೌಲಭ್ಯ ಪಡೆದ ಮೊದಲ ವಿದ್ಯಾರ್ಥಿಗಳಿಂದ ಸಿಎಂ ಗೆ ಕೃತಜ್ಞತೆ
Categories
  • Business
  • Politics
  • ಆರೋಗ್ಯ
  • ಕ್ರೀಡೆ
  • ಕ್ರೈಂ
  • ಜಿಲ್ಲಾ ಸುದ್ದಿ
  • ದೇಶ
  • ರಾಜಕೀಯ
  • ರಾಜ್ಯ
  • ಸಿನೆಮಾ
ADVERTISEMENT
Samyukta Vaani
Facebook X (Twitter) Instagram YouTube WhatsApp
© 2026 SAMYUKTAVAANI Designed by WEBGAUGE.

Type above and press Enter to search. Press Esc to cancel.