ಶಾಸಕ ಎಂ. ಚಂದ್ರಪ್ಪ ಹೆಸರು ಬರೆದಿಟ್ಟು, ಎಸ್ಡಿಎ ನೌಕರ ಆತ್ಮಹತ್ಯೆ..!
ಗ್ರಾಮ ಪಂಚಾಯತಿಯ ದ್ವಿತೀಯ ದರ್ಜೆ ನೌಕರರೊಬ್ಬ ಹೊಳಲ್ಕೆರೆ ಶಾಸಕ ಎಂ ಚಂದ್ರಪ್ಪ ಅವರ ಹೆಸರು ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡ ಘಟನೆ ಹೊಸದುರ್ಗ ತಾಲೂಕಿನ ಜಾನಕಲ್ಲು ಗ್ರಾಮದಲ್ಲಿ ನಡೆದಿದೆ.
ಇನ್ನು ಮೃತ ವ್ಯಕ್ತಿಯನ್ನು ಉಪ್ಪರಿಗೆನಹಳ್ಳಿ ಗ್ರಾಮ ಪಂಚಾಯತಿಯ ಎಸ್ ಡಿ ಎ ನೌಕರ ತಿಪ್ಪೇಸ್ವಾಮಿ ಎಂದು ತಿಳಿದು ಬಂದಿದೆ.
ಮೃತ ತಿಪ್ಪೇಸ್ವಾಮಿಯು ತನ್ನ ಆತ್ಮಹತ್ಯೆಗೂ ಮುನ್ನ ಡೆತ್ ನೋಟ್ ಬರೆದಿಟ್ಟಿದ್ದಾರೆ. ಈ ಡೆತ್ ನೋಟ್ ನಲ್ಲಿ ಹೊಳಲ್ಕೆರೆ ಶಾಸಕ ಎಂ ಚಂದ್ರಪ್ಪ ಹೆಸರು ಬರೆದಿಟ್ಟು ಸಾವಿಗೀಡು ಆಗಿದ್ದಾನೆ.
ಪತ್ರದಲ್ಲಿ ಈರೀತಿ ಉಲ್ಲೇಖಿಸಿದ್ದು, “ನಾನು ಉಪ್ಪರಿಗೆನಹಳ್ಳಿ ಗ್ರಾಮ ಪಂಚಾಯತಿಯಲ್ಲಿ ದ್ವಿತೀಯ ದರ್ಜೆ ಸಹಾಯಕನಾಗಿ ಕೆಲಸ ನಿರ್ವಹಿಸುತ್ತಿದ್ದೆನೆ. ನಾನು ಸಾಯಲು ಕಾರಣವೇನೆಂದರೆ ಪಂಚಾಯತಿಯಲ್ಲಿ ಬಹಳ ಕಿರುಕುಳ ಕೊಡುತ್ತಿದ್ದರು. ದಿನಾಂಕ 3 /8/ 2023 ರಂದು ಶಾಸಕ ಎಂ ಚಂದ್ರಣ್ಣನವರು ನನ್ನನ್ನು ಅಮಾನತು ಮಾಡುತ್ತೇನೆ ಎಂದು ಬೆದರಿಕೆ ಹಾಕಿದ್ದರು ಮತ್ತು ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ರವಿ ಅವರು ಬರೀ ಎಸ್ಸಿ ಜನಾಂಗದಲ್ಲಿ ಕೆಲಸ ಮಾಡಿ ಕೊಡು ಎಂದು ಪಿಡಿಒ ಅವರನ್ನು ಹಿಂಸೆ ಕೊಡುತ್ತಿದ್ದರು ಮತ್ತು ಉಪ್ಪರಿಗೆನಹಳ್ಳಿ ಎಸ್ಸಿ
ಜನಾಂಗದವರು ಅಂದರೆ ಮೋಹನ್ ಕುಮಾರ್ ಮತ್ತು ಸ್ನೇಹಿತರು ಸುಮಾರು 20ರಿಂದ 30 ಜನ ಹೆಸರು ಗೊತ್ತಿಲ್ಲ. ಮೋಹನ್ ಮತ್ತು ಮೂರ್ತಿ ಉಗ್ರಪ್ಪ , ರಾಜಣ್ಣ ಇವರು ಖಾತೆಯನ್ನು ಮಾಡಿಸಿಕೊಂಡಿರುತ್ತಾರೆ. ಹೀಗೆ ಪತ್ರದಲ್ಲಿ ಕಾರಣಗಳನ್ನ ಆತ್ಮಹತ್ಯೆ ಪತ್ರದಲ್ಲಿ ಬರೆದು ಹೊಸದುರ್ಗ ತಾಲೂಕಿನ ಜಾನುಕಲ್ಲು ಗ್ರಾಮದ ಮಗಳ ಮನೆಯಲ್ಲಿ ವಿಷ ಸೇವಿಸಿದ ದ್ವಿತೀಯ ದರ್ಜೆ ನೌಕರರ ತಿಪ್ಪೇಸ್ವಾಮಿ ಮೃತಪಟ್ಟಿದ್ದಾನೆ.
ತನಿಖೆ ನಂತರ ಹೆಚ್ಚಿನ ಮಾಹಿತಿ ತಿಳಿದು ಬರಬೇಕಿದೆ.





