ಚಿತ್ರದುರ್ಗ: ಹೊಸದುರ್ಗದ ಹೆಗ್ಗೆರೆಯ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆಗೆ, ಕಬ್ಬಿಣದ ರಾಡಿನಿಂದ ಹಲ್ಲೆ ಮಾಡಿ ಕಿವಿಯೊಲೆ ಕದ್ದು ಪರಾರಿಯಾಗಿರುವ ಘಟನೆ ಇಂದು ಬೆಳಗ್ಗೆ ನಡೆದಿದೆ. ಹಲ್ಲೆಗೊಳಗಾದ ಮಹಿಳೆಯನ್ನು ಅಂಬಿಕಾ 65 ವರ್ಷ ಎಂದು ಗುರುತಿಸಲಾಗಿದೆ. ಜಮೀನಿನಲ್ಲಿ ಕೆಲಸ ಮಾಡುತ್ತಿದ್ದಾಗ ಏಕಾ ಏಕಿ ಕಳ್ಳನೊಬ್ಬ ಮಹಿಳೆ ತಲೆಗೆ ಹೊಡೆಯುತ್ತಿದ್ದಂತೆ ಕೂಗಿಕೊಂಡು ಕೆಳಗೆ ಬಿದ್ದ ಮಹಿಳೆಯ ಕಿವಿಯೊಲೆ ಕಿತ್ತುಕೊಂಡು ಪರಾರಿಯಾಗಿದ್ದು, ಮಹಿಳೆ ಕೂಗಿದ್ದು ಕೇಳಿಸಿಕೊಂಡ ನೆರೆಯವರು ಬಂದು ಆಕೆಯನ್ನು ಹುಳಿಯಾರಿನ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ.ನಂತರ ತುಮಕೂರುನಂತರ ಬೆಂಗಳೂರಿನ ನಿಮ್ಹಾನ್ಸ್ ಗೆ ದಾಖಲಿಸಲಾಗಿದೆ. ಸ್ಥಳಕ್ಕೆ ಚಳ್ಳಕೆರೆ ಡಿವೈಎಸ್ಪಿ ರಾಜಣ್ಣ ಹಾಗೂ ಪೊಲೀಸ್ ಸಿಬ್ಬಂದಿ ಭೇಟಿ ನೀಡಿ ಪರಿಶೀಲಿಸಿ, ಹೊಸದುರ್ಗ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.





