ಚಿತ್ರದುರ್ಗ,ಫೆ 14: ತಾಲೂಕಿನ ಚಿತ್ರಳ್ಳಿ ಗೇಟ್ ಪೊಲೀಸ್ರು ಭರ್ಜರಿ ಕಾರ್ಯಾಚರಣೆ ನಡೆಸಿ ಶ್ರೀಗಂಧದ ಮರಗಳ ಕಳ್ಳತನದ ಆರೋಪಿಗಳನ್ನು ಹಿಡಿದು ಎಡೆಮುರಿ ಕಟ್ಟಿದ್ದಾರೆ.
ಆರೋಪಿತರಿಂದ 2 ಬೈಕ್, ಸುಮಾರು 5 ಲಕ್ಷ ಮೌಲ್ಯದ 77 ಕೆ.ಜಿ ಶ್ರೀಗಂಧ ಮರದ ತುಂಡುಗಳ ವಶಪಡಿಸಿಕೊಂಡಿದ್ದಾರೆ
ಹೊಳಲ್ಕೆರೆ ತಾಲೂಕಿನ ಹಲವು ಗ್ರಾಮಗಳಲ್ಲಿ ಶ್ರೀಗಂಧ ಮರಗಳ,ಕಳ್ಳತನ ಪ್ರಕರಣಗಳು ನಡೆದಿದ್ದವು.ಇದರಿಂದ ಚಿತ್ರಹಳ್ಳಿ ಪೊಲೀಸರು ವಿಶೇಷ ತಂಡವನ್ನು ರಚಿಸಲಾಗಿತ್ತು. ವಿಶೇಷ ತಂಡವು ಹೊಳಲ್ಕೆರೆ ತಾಲೂಕಿನ ಹೆಚ್.ಡಿ.ಪುರ ಗ್ರಾಮದ ಸಮೀಪದ ಬಾರೆಕಟ್ಟೆ ಕ್ರಾಸ್ ಬಳಿ ಆರೋಪಿಗಳು ಬೈಕಿನಲ್ಲಿ ಕಾರದಪುಡಿ, ಬೈಕ್ ಚೈನ್ ಕಬ್ಬಿಣದ ಮಚ್ಚು ಎರಡು ಕಬ್ಬಿಣದ ಸಲಾಕೆ ಹಾಗೂ ಒಂದು ಹಗ್ಗ ಜೊತೆಗೆ ಸುಮಾರು ಎಂಟು ಕೆ.ಜಿ ಶ್ರೀಗಂಧದ ಮರದ ತುಂಡುಗಳನ್ನಿಟ್ಟುಕೊಂಡಿದ್ದು ಆರೋಪಿಗಳಾದ ಭೂತಪ್ಪ, ರವೀಂದ್ರ, ರಾಜೇಂದ್ರ, ಮಂಜುನಾಥ್, ಚಮನ್ ಸಾಬ್ ಎಲ್ಲರೂ ಸೇರಿ ದರೋಡೆ ಮಾಡಲು ಪೂರ್ವ ಸಿದ್ಧತೆಯನ್ನು ನಡೆಸಿದ್ರು ಇದರ ಖಚಿತ ಮಾಹಿತಿ ಪಡೆದ ಪೊಲೀಸರು ದರೋಡೆಕೋರರನ್ನು ಬಂದಿಸಿ ಪ್ರಕರಣವನ್ನು ದಾಖಲಿಸಿದ್ದಾರೆ.
ಪ್ರಕರಣವನ್ನು ಭೇದಿಸಿದ ಚಿತ್ರಹಳ್ಳಿ ಪೊಲೀಸರಿಗೆ ಚಿತ್ರದುರ್ಗ ಪೊಲೀಸ್ ವರಿಷ್ಠಾಧಿಕಾರಿ ರಂಜಿತ್ ಕುಮಾರ್ ಬಂಡಾರು ಅವರು ಹಾಗೂ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಕುಮಾರಸ್ವಾಮಿ ಅವರು ಅಭಿನಂದಿಸಿದ್ದಾರೆ.





