Author: D Kumaraswamy

ಹೊಸದುರ್ಗ: ಲಂಚ ಪಡೆಯುತ್ತಿದ್ದ ಬೆಸ್ಕಾಂ ಸೆಕ್ಷನ್ ಆಫೀಸರ್ ಲೋಕಾ ಬಲೆಗೆ ವಿದ್ಯುತ್ ಟ್ರಾನ್ಸಫಾರ್ಮರ್ ಬದಲಾಯಿಸಿಕೊಡಲು ನಾಲ್ಕು ಸಾವಿರ ಲಂಚ ಕೇಳಿದ ಬೆಸ್ಕಾಂ ಸೆಕ್ಷನ್ ಆಫೀಸ ರ್ ಲೋಕಾಯುಕ್ತ ಬಲೆಗೆ ಬಿದ್ದಿರುವ ಘಟನೆಯೊಂದು ಹೊಸದುರ್ಗದ ಮಾಡದಕೆರೆಯಲ್ಲಿಂದು ನಡೆದಿದೆ. ಸೆಕ್ಷನ್ ಆಫೀಸರ್ ಮಧು, ಮಾಡದಕೆರೆ ನಾಗಯ್ಯನಹಟ್ಟಿ ಗ್ರಾಮದ ರಾಮಚಂದ್ರಪ್ಪ ತನ್ನ ಜಮೀನು ಸೇರಿ, ಸುತ್ತಲ ರೈತರು ಟ್ರಾನ್ಸ್ ಫಾರ್ಮರ್ ಹಾಕಿಕೊಂಡು ಬಳಸುತ್ತಿದ್ದರು. ಆದರೆ ಕಳೆದ ಒಂದು ವಾರದ ಹಿಂದೆ ಸುಟ್ಟು ಹೋಗಿದ್ದು, ಅದನ್ನು ಬದಲಿಸಿಕೊಡುವಂತೆ ಸೆಕ್ಷನ್ ಆಫೀಸರ್ ಮಧು ಅವರನ್ನು ಕೇಳಿದ್ದಾರೆ. ಮಧು ಬದಲಿಸಿಕೊಡಲು ನಾಲ್ಕು ಸಾವಿರ ಲಂಚ ಕೇಳಿದ್ದು, ರಾಮಚಂದ್ರಪ್ಪ ಲೋಕಾಯಿಕ್ತರಿಗೆ ದೂರು ನೀಡಿದ್ದಾರೆ.ಇಂದು ಲಂಚದ ಹಣ ಮೂರು ಸಾವಿರ ಪಡೆಯುವಾಗ ಲೋಕಾ ದಾಳಿ ನಡೆಸಿದ್ದು, ರೆಡ್ ಹ್ಯಾಂಡ್ ಆಗಿ ಸಿಕ್ಕಿ‌ಬಿದ್ದಿದ್ದಾರೆ.ಲೋಕಾಯುಕ್ತ ಪೊಲೀಸರು‌ ಬಂಧಿಸಿ‌ಮುಂದಿನ ತನಿಖೆ ಕೈಗೊಂಡಿದ್ದಾರೆ.

Read More

ಸರ್ವರಿಗೂ ನ್ಯಾಯ: 18 ವಕೀಲರ ‘ನ್ಯಾಯ’ ತಂಡದಿಂದ ಸಂವಿಧಾನ ಫೆಲೋಶಿಪ್ ನ ಮೂರನೇ ಆವೃತ್ತಿ ಆರಂಭ ಬೆಂಗಳೂರು: ನ್ಯಾಯ ಪಡೆಯುವ ಅವಕಾಶ ಹೆಚ್ಚಿಸುವ ಮತ್ತು ಕಾನೂನು ವ್ಯವಸ್ಥೆಯ ಕೊನೆಯ ಮೈಲಿಗಲ್ಲಿನ ಅಂತರವನ್ನು ನಿವಾರಿಸುವ ನಿಟ್ಟಿನಲ್ಲಿ ‘ನ್ಯಾಯ’ (ಸಂಸ್ಥೆ) ಅದರ ಪ್ರಮುಖ ಭಾಗವಾದ ಸಂವಿಧಾನ್ ಫೆಲೋಶಿಪ್ ನ 3ನೇ ಆವೃತ್ತಿ ಆರಂಭಿಸಿದೆ. ಇದಕ್ಕಾಗಿ 18 ವಕೀಲರ ತಂಡವನ್ನು ನಿಯೋಜಿಸಿದೆ. ಮೂರನೇ ಆವೃತ್ತಿಯಲ್ಲಿ ಬೆಂಗಳೂರು, ಬೆಳಗಾವಿ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ದಕ್ಷಿಣ ಕನ್ನಡ, ದಾವಣಗೆರೆ, ಧಾರವಾಡ, ಹಾಸನ, ಉತ್ತರ ಕನ್ನಡ (ಕಾರವಾರ), ಕೊಪ್ಪಳ, ರಾಯಚೂರು, ಕಲ್ಬುರ್ಗಿಯಲ್ಲಿ ನುರಿತ ವಕೀಲರು ಕಾನೂನು ನೆರವು ನೀಡಲಿದ್ದಾರೆ. ಕಾನೂನು ಮಾಹಿತಿಯ ಕೊರತೆ, ಸೀಮಿತ ಸಂಪನ್ಮೂಲಗಳು ಮತ್ತು ಅಂಚಿನಲ್ಲಿರುವ ಸಮುದಾಯಗಳ ಮೇಲೆ ಅಸಮಾನವಾಗಿ ಪರಿಣಾಮ ಬೀರುವ ವ್ಯವಸ್ಥಿತ ಅಸಮಾನತೆಗಳಂತಹ ಅಡೆತಡೆಗಳಿಂದಾಗಿ ನ್ಯಾಯ ಪಡೆಯಲು ಅನೇಕರಿಗೆ ಇನ್ನೂ ಕಷ್ಟವಾಗಿದೆ. ಸಂವಿಧಾನ್ ಫೆಲೋಶಿಪ್ ಮೂಲಕ, ಮಹಿಳೆಯರು, ಮಕ್ಕಳು, ಲಿಂಗತ್ವ ಅಲ್ಪಸಂಖ್ಯಾತರು ಮತ್ತು ಇತರ ತಳಮಟ್ಟದ ಸಮುದಾಯಗಳಿಗೆ ನ್ಯಾಯವನ್ನು ವಿಸ್ತರಿಸಲು ಕೆಲಸ ಮಾಡುವ ಕಾನೂನು ವೃತ್ತಿಪರರನ್ನು…

Read More

ಮೀಸಲಾತಿ ಪ್ರಮಾಣ ಹೆಚ್ಚಳಅನಿವಾರ್ಯ ;ಎಚ್.ಆಂಜನೇಯ ಕೇಂದ್ರ ಸರ್ಕಾರದ ಮೇಲೆ ಬಿಜೆಪಿಗರು ಒತ್ತಡ ತರಬೇಕು ಕೋರ್ಟ್‍ಗೆ ರಾಜ್ಯ ಸರ್ಕಾರ ಮನವರಿಕೆ ಮಾಡಿಕೊಡಬೇಕು ಚಿತ್ರದುರ್ಗ, ಜ.30:ಆರ್ಥಿಕವಾಗಿ ದುರ್ಬಲ ವರ್ಗದವರಿಗೆ ಕೇಂದ್ರ ಸರ್ಕಾರ ಶೇ.10 ಮೀಸಲಾತಿ ಕೇವಲ 48 ಗಂಟೆಗಳಲ್ಲಿ ಅನುಷ್ಠಾನಕ್ಕೆ ತಂದಿದ್ದು, ಮೂವತ್ತು ವರ್ಷ ಹೋರಾಟ ನಡೆಸಿದ ಎಸ್ಸಿ-ಎಸ್ಟಿ ಜನರ ಬದುಕಿನ ಉನ್ನತಿಗಾಗಿ ಮೀಸಲಾತಿ ಪ್ರಮಾಣ ಹೆಚ್ಚಳಕ್ಕೆ ತಕ್ಷಣ ಕ್ರಮಕೈಗೊಳ್ಳಬೇಕೆಂದು ಮಾಜಿ ಸಚಿವ ಎಚ್.ಆಂಜನೇಯ ಆಗ್ರಹಿಸಿದ್ದಾರೆ. ನಗರದ ಪ್ರವಾಸಿ ಮಂದಿರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರಾಜ್ಯ ಸರ್ಕಾರ ಮತ್ತು ಮುಖ್ಯಮಂತ್ರಿ ಪರಿಶಿಷ್ಟ ಜಾತಿಯಲ್ಲಿ ಒಳಮೀಸಲಾತಿ ಜಾರಿಗೊಳಿಸುವ ಮೂಲಕ ತನ್ನ ಬದ್ಧತೆ ಪ್ರದರ್ಶಿಸಿದೆ. ಆದರೆ, ಬಿಜೆಪಿ ಸರ್ಕಾರದ ಅವಧಿಯಲ್ಲಿ ಮೀಸಲಾತಿ ಪ್ರಮಾಣ ಶೇ.56ಕ್ಕೆ ಹೆಚ್ಚಳ ಮಾಡಿದ್ದು, ಈ ಸಂಬಂಧ ಕೆಲವರು ತಕಾರರು ಅರ್ಜಿ ಸಲ್ಲಿಸಿದ್ದು ಕೋರ್ಟ್ ತೀರ್ಪು ಹೊರಬೀಳಬೇಕಾಗಿದೆ ಎಂದರು. ಒಂದು ವೇಳೆ ಕೋರ್ಟ್ ತೀರ್ಪು ವ್ಯತಿರಿಕ್ತವಾಗಿ ಹೊರಬಿದ್ದರೇ ಎಸ್ಸಿ-2, ಎಸ್‍ಟಿ-4ರಷ್ಟು ಮೀಸಲಾತಿ ಪ್ರಮಾಣ ಕಳೆದುಕೊಳ್ಳಬೇಕಾಗುತ್ತದೆ. ಆದ್ದರಿಂದ ಬಿಜೆಪಿ ಮುಖಂಡರು, ಸಂಸದರು, ಶಾಸಕರು ಎಲ್ಲರೂ ಸೇರಿ…

Read More

ಚಿತ್ರದುರ್ಗ,ಜ11:ಲಾರಿಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಸ್ಥಳದಲ್ಲಿಯೇ ಮೃತಪಟ್ಟ ಘಟನೆ ನಗರದ ಹೊರವಲಯದ ತಮಟುಕಲ್ಲು ಬ್ರಿಡ್ಜ್ ಬಳಿ ಶನಿವಾರ ತಡರಾತ್ರಿ ನಡೆದಿದೆ. ಮೃತರ ಹೆಸರು ತಿಳಿದು ಬಂದಿಲ್ಲ, ಮಹಾರಾಷ್ಟ್ರದಿಂದ ಬೆಂಗಳೂರಿಗೆ ಹೊರಟಿದ್ದ ಇನ್ನೋವಾ ಕಾರಿನಲ್ಲಿದ್ದ ಪ್ರಯಾಣಿಕರು, ಗಾಯಗೊಂಡಿದ್ದ ಮೂವರನ್ನು ಚಿತ್ರದುರ್ಗ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.ಗ್ರಾಮಾಂತರ ಠಾಣೆ ಸಿಪಿಐ ಬಾಲಚಂದ್ರನಾಯ್ಕ್ ಸ್ಥಳಕ್ಕೆ ಭೇಟಿ‌ನೀಡಿ ಪರಿಶೀಲಿಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.

Read More

ಲಾರಿ ಮತ್ತು ಕಾರಿನ‌ ನಡುವೆ ಮುಖಾ ಮುಖಿ ಡಿಕ್ಕಿಯಾಗಿ ನಾಲ್ವರು ಸ್ಥಳದಲ್ಲಿಯೇ ಸಾವನ್ನಪ್ಪಿರುವ ಘಟನೆ ಶನಿವಾರ ತಡರಾತ್ರಿ ಹಿರಿಯೂರಿನ ಹಿಂಡಸಕಟ್ಟೆ ಬಳಿ ನಡೆದಿದೆ. ಮೃತರನ್ನು ನಂಜಯ್ಯನ ಕೊಟ್ಟಿಗೆ ಗ್ರಾಮದ ನಂಜುಂಡಿ,ವಿಶ್ವನಾಥ್ ರಾಹುಲ್ ಮತ್ತು ಯಶ್ವಂತ್ ಎಂದು ಗುರುತಿಸಲಾಗಿದೆ. ಲಾರಿ‌ಡಿಕ್ಕಿ ಹೊಡೆದ ರಭಸಕ್ಕೆ ಕಾರು ನುಜ್ಜುಗಜ್ಜಾಗಿದೆ. ಗ್ರಾಮಾಂತರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Read More

ವೈದ್ಯಕೀಯ ಸ್ನಾತಕೋತ್ತರ ಶಿಕ್ಷಣಕ್ಕೆ ಪ್ರವೇಶಕ್ಕೆಒಳ ಮೀಸಲು ಸೌಲಭ್ಯ ಪಡೆದ ಮೊದಲ ವಿದ್ಯಾರ್ಥಿಗಳಿಂದ ಸಿಎಂ ಗೆ ಕೃತಜ್ಞತೆ ಬೆಂಗಳೂರು: ಒಳಮೀಸಲಾತಿ ಜಾರಿ ಬಳಿಕ ಮೊದಲ ಬಾರಿಗೆ ಅದರ ಸೌಲಭ್ಯವನ್ನು ಪಡೆದ ಹೆಗ್ಗಳಿಕೆಗೆ ಪಾತ್ರರಾದ ವೈದ್ಯಕೀಯ ಸ್ನಾತಕೋತ್ತರ ಉನ್ನತ (ಎಂಎಸ್, ಎಂಡಿ) ಶಿಕ್ಷಣಕ್ಕೆ ಪ್ರವೇಶ ಪಡೆದ ವಿದ್ಯಾರ್ಥಿಗಳ ನಿಯೋಗ ಮಾಜಿ ಸಚಿವ ಎಚ್.ಆಂಜನೇಯ ನೇತೃತ್ವದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಸಂಭ್ರಮಿಸಿತು. ಸಿಎಂ ನಿವಾಸ ಕಾವೇರಿಗೆ ಗುರುವಾರ ಭೇಟಿ ನೀಡಿ ಸಿದ್ದರಾಮಯ್ಯ ಅವರಿಗೆ ಸಿಹಿ ತಿನ್ನಿಸಿ, ಬೃಹತ್ ಹೂವಿನ ಹಾರ, ಹೂವಿನ ಗುಚ್ಛ ಕೊಟ್ಟು ಕೃತಜ್ಞತೆ ಸಲ್ಲಿಸಿದರು. ಮಾದಿಗ ಸಮುದಾಯಕ್ಕೆ ಉನ್ನತ ಶಿಕ್ಷಣ ಗಗನಕುಸಮವಾಗಿತ್ತು. ಅದರಲ್ಲೂ ಎಂಎಸ್, ಎಂಡಿ ಪ್ರವೇಶ ಪಡೆಯಲು ಸಾಧ್ಯವೇ ಇರಲಿಲ್ಲ. ಆದರೆ, ಒಳಮೀಸಲಾತಿ ಜಾರಿ ಬಳಿಕ ನೀಟ್ ಪರೀಕ್ಷೆ ಬರೆದ ಮಾದಿಗ ಸಮುದಾಯದ ವಿದ್ಯಾರ್ಥಿಗಳೆಲ್ಲರಿಗೂ ಮೊದಲಬಾರಿಗೆ ಪ್ರವೇಶ ಸಿಕ್ಕಿದೆ ಎಂದು ಸಂತಸ ಹಂಚಿಕೊಂಡರು. ಮಕ್ಕಳು, ಮೂಳೆ, ನರರೋಗ ಸೇರಿ ಬಹಳ ಬೇಡಿಕೆ ಇರುವ ವಿಭಾಗಗಳೇ ನಮಗೆ ದೊರೆತಿವೆ. ಇದೆಲ್ಲ…

Read More

ಹುಬ್ಬಳ್ಳಿ, 05: ಇನಾಂ ವೀರಾಪುರದ ಮಾನ್ಯಾಳ ಮರ್ಯಾದೆ ಹತ್ಯೆಗೇಡಾದ ಹಿನ್ನೆಲೆಯಲ್ಲಿ ಸ್ವಗ್ರಾಮಕ್ಕೆ ಅಸದಿಜಾಂಬವ ಅಭಿವೃದ್ಧಿ ನಿಗಮದ ಅಧ್ಯಕ್ಷ ಜಿಎಸ್ ಮಂಜುನಾಥ್ ಹಾಗೂ ಅಧಿಕಾರಿಗಳು ಸೋಮವಾರ ಭೇಟಿ ನೀಡಿ ಪೋಷಕರಿಗೆ ಸಾಂತ್ವಾನ ಹೇಳಿದರು. ಅಭಿವೃದ್ದಿ ನಿಗಮದಿಂದ ಪೋಷಕರಿಗೆ ಸಹಾಯ ಮಾಡುವುದಾಗಿ ತಿಳಿಸಿದ್ದಾರೆ. ಈ ಸಮಯದಲ್ಲಿ ಅದಿ ಜಾಂಬವ ಅಭಿವೃದ್ದಿ ನಿಗಮದ ವ್ಯವಸ್ಥಾಪಕ ಬಿಟಿ‌ ಮಂಜುನಾಥ್ ಹಾಗು ಹುಬ್ಬಳ್ಳಿ ಜಿಲ್ಲಾ ನಿಗಮದ ಅಧಿಕಾರಿ ವರ್ಗ ಹಾಗು ಪೊಲೀಸ್ ಅಧಿಕಾರಿಗಳು ಉಪಸ್ಥಿತರಿದ್ದರು.

Read More

ನನ್ನಮೇಲಿನ ಆರೋಪ ಸಾಬೀತಾದರೆ ರಾಜಕೀಯ ನಿವೃತ್ತಿಯಾಗುತ್ತೇನೆ: ಶಾಸಕ ಡಾ. ಎಂ. ಚಂದ್ರಪ್ಪ ಚಿತ್ರದುರ್ಗ ಡಿ. 20: ನನ್ನ 35 ವರ್ಷದ ರಾಜಕೀಯ ಜೀವನದಲ್ಲಿ ಒಂದು ಕಪ್ಪು ಚುಕ್ಕೆ ಇಲ್ಲದಂತೆ ಜನ ಸೇವೆಯನ್ನೆ ಗುರಿಯಾಗಿಸಿಕೊಂಡು ಕೆಲಸ ಮಾಡುತ್ತಾ ಬಂದಿದ್ದೇನೆ. ಅಕ್ರಮ ಗಣಿಗಾರಿಕೆ, ಭೂಕಬಳಿಕೆ, ಒತ್ತುವರಿ ಯಾವುದೇ ಕೆಲಸ ನಾನು ಮಾಡಿಲ್ಲ ಇದರಲ್ಲಿ ಯಾವುದಾದರೊಂದು ಮಾಡಿರುವುದಾಗಿ ಯಾರಾದರೂ ಒಬ್ಬರು ಸಾಕ್ಷಿಯನ್ನು ಹೇಳಿದರೆ, ಅಥವ ಮಾಜಿ ಸಚಿವರು ಇದನನ್ನು ಸಾಬೀತುಪಡಿಸಿದರೆ ನಾನು ರಾಜಕೀಯದಿಂದಲೇ ನಿವೃತ್ತಿ ಹೊಂದುವುದಾಗಿ ಹೊಳಲ್ಕೆರೆ ಕ್ಷೇತ್ರದ ಶಾಸಕ ಡಾ.ಎಂ.ಚಂದ್ರಪ್ಪ ಸವಾಲ್ ಹಾಕಿದ್ದಾರೆ. ಚಿತ್ರದುರ್ಗ ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತಾಡಿ, ರಾಜಕೀಯದಲ್ಲಿ ನನ್ನ ತೇಜೋವಧೆ ಮಾಡುವುದಕ್ಕಾಗಿ ಕೆಲವರು ನನ್ನ ಮೇಲೆ ಇಲ್ಲದ ಆರೋಪಗಳನ್ನು ಮಾಡುತ್ತಿದ್ದಾರೆ.ಆರೋಪಕ್ಕು ಅದು ಸರಿಯಿದೆಯೇ ಎಂದು ಪರೀಶಿಲನೆ ಮಾಡಬೇಕೆಂದು ಮಾಜಿ ಸಚಿವ ಅಂಜನೇಯನ ಮೇಲೆ ಹರಿಹಾಯ್ದರು. ಹೊಳಲ್ಕೆರೆಯಲ್ಲಿ ನನ್ನ ಮಗನ ಹೆಸರಿನಲ್ಲಿ ದಲಿತರ ಭೂಮಿ ಖರೀದಿಸಲಾಗಿದೆ ಎಂದು ಆರೋಪವನ್ನು ಹೊರಿಸಲಾಗಿದೆ. ಆದರೆ ನಾನು ಜಮೀನನ್ನು ಖರೀದಿ ಮಾಡಿದ್ದು, ಆ…

Read More

ಸರ್ಕಾರಿ ಗುಡ್ಡಕ್ಕೆ ಶಾಸಕ ಕನ್ನ; ಹೊಳಲ್ಕೆರೆ ಶಾಸಕ ಚಂದ್ರಪ್ಪ ವಿರುದ್ಧ ಆಂಜನೇಯ ಗಂಭೀರ ಆರೋಪ ಚಿತ್ರದುರ್ಗ:ಡಿ.19: ಸರ್ಕಾರಿ ಜಾಗ, ದಲಿತ ಭೂಮಿ ಕಬಳಕಿ ಮಾಡುತ್ತಿರುವ ಹೊಳಲ್ಕೆರೆ ಶಾಸಕ ಎಂ.ಚಂದ್ರಪ್ಪ ಗಳಿಸಿರುವ ಅಕ್ರಮ ಆಸ್ತಿ ಕುರಿತು ಸಮಗ್ರ ತನಿಖೆ ನಡೆಸುವಂತೆ ಮಾಜಿ ಸಚಿವ ಹೆಚ್.ಆಂಜನೇಯ ಆಗ್ರಹಿಸಿದರು. ನಗರದ ಪ್ರವಾಸಿ ಮಂದಿರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹೊಳಲ್ಕೆರೆಯಲ್ಲಿ ಈ ಹಿಂದೆ ಸತ್ತವರ ಆಸ್ತಿ ಕಬಳಿಸಲು ನಡೆಸಿದ್ದ ಪ್ರಯತ್ನವನ್ನು ಬಹಿರಂಗಗೊಳಿಸುತ್ತಿದ್ದಂತೆ ಕದ್ದುಮುಚ್ಚಿ ಹೋಗಿ ಅವರಿಗೆ ಆಸ್ತಿಯನ್ನು ಮರು ನೋಂದಣಿ ಮಾಡಿಸಿಕೊಟ್ಟಿದ್ದ ಚಂದ್ರಪ್ಪ, ಈಗ ದಲಿತರ ಭೂಮಿ ಮೇಲೆ ಕೆಂಗಣ್ಣು ಹಾಕಿದ್ದಾರೆ ಎಂದು ದೂರಿದರು. ಕ್ಷೇತ್ರದಲ್ಲಿ ದಲಿತರ ಭೂಮಿಯನ್ನು ಬೇರೊಬ್ಬರ ಹೆಸರಿಗೆ ಮಾಡಿಸಿ, ಅದನ್ನು ತನ್ನ ಕುಟುಂಬದ ಹೆಸರಿಗೆ ನೋಂದಣಿ ಮಾಡಿಸಿಕೊಳ್ಳುವ ಷಡ್ಯಂತರ ನಿರಂತವಾಗಿ ನಡೆಯುತ್ತಿದೆ. ಈ ಕಾರ್ಯಕ್ಕೆ ಜಿಲ್ಲಾ, ತಾಲ್ಲೂಕು ಆಡಳಿತ ಬೆಂಬಲವಾಗಿ ನಿಂತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಎಸ್ಸಿ ಮೀಸಲಾತಿ ಸೌಲಭ್ಯದಡಿ ಜನಪ್ರತಿನಿಧಿ ಆಗಿರುವ, ಅನೇಕ ಸೌಲಭ್ಯ ಪಡೆದಿರುವ ಚಂದ್ರಪ್ಪ, ದಲಿತರ ಭೂಮಿ…

Read More

ಹತ್ತು ವರ್ಷದ ಬಾಲಕಿ ಮೇಲೆ ಅತ್ಯಾಚಾರ ಇಬ್ಬರ ಬಂಧನ ಚಿತ್ರದುರ್ಗ,ಡಿ.13 : ಒಂದು ವರ್ಷದಿಂದ ನಿರಂತರ 10 ವರ್ಷದ ಬಾಲಕಿ‌ ಮೇಲೆ ಇಬ್ಬರು ಕಾಮುಕರಿಬ್ಬರು ಅತ್ಯಾಚಾರ ನಡೆಸಿರುವ,ಘಟನೆ ಚಿತ್ರದುರ್ಗ ಜಿಲ್ಲೆ ಹಿರಿಯೂರಿನ ವಡ್ಡನಹಳ್ಳಿ ಗ್ರಾಮದಲ್ಲಿಂದು ಬೆಳಕಿಗೆ ಬಂದಿದೆ.4ನೇ ತರಗತಿ ಬಾಲಕಿ ಮೇಲೆ ಪ್ರಭುದೇವ ಮತ್ತು ಗುರು ಮೂರ್ತಿ ಪದೆ ಪದೆ ಅತ್ಯಾಚಾರ ನಡೆಸಿದ್ದು,ಯಾರಿಗೂ ಹೇಳದಂತೆ ಬೆದರಿಕೆ ಹಾಕಿದ್ದಾರೆ.ಬಾಲಕಿ ಶಾಲಾ ಶಿಕ್ಷಕಿ ಬಳಿ ಹೇಳಿಕೊಂಡಿದ್ದು,ಅವರು ಬಾಲಕಿ ಪೋಷಕರಿಗೆ ವಿಷಯ ತಿಳಿಸಿದ್ದಾರೆ‌.ಹಿರಿಯೂರು ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಾಗಿದ್ದು,ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ.

Read More