Author: D Kumaraswamy

ಮಾದಿಗರ ತಟ್ಟೆಗೆ ಕೈ ಹಾಕದಂತೆ ಕಾನೂನು ರೂಪಿಸಿ,ಕೇಂದ್ರ ಸರ್ಕಾರ ಮಧ್ಯಪ್ರವೇಶ ಅಗತ್ಯ: ಮಾಜಿ ಸಚಿವ ಹೆಚ್. ಆಂಜನೇಯ ಚಿತ್ರದುರ್ಗ:ಡಿ.12:ಒಳಮೀಸಲಾತಿ ಜಾರಿ ಬಳಿಕವೂ ಕೆಲ ಗೊಂದಲಗಳು ಇದ್ದು, ಅವುಗಳನ್ನು ನಿವಾರಿಸಲು ರಾಜ್ಯ ಸರ್ಕಾರ ಕಠಿಣ ಕ್ರಮಕೈಗೊಳ್ಳಬೇಕೆಂದು ಮಾಜಿ ಸಚಿವ ಎಚ್.ಆಂಜನೇಯ ಒತ್ತಾಯಿಸಿದರು. ನಗರದ ಪ್ರವಾಸಿ ಮಂದಿರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಈಗಾಗಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಒಳಮೀಸಲಾತಿ ಜಾರಿಗೊಳಿಸಿ, ಕಾಯ್ದೆ ರೂಪಿಸಲು ಮುಂದಾಗಿರುವುದು ಸ್ವಾಗತರ್ಹ ಆದರೆ, ಬಡ್ತಿ, ಎಸ್‍ಸಿಎಸ್‍ಪಿ, ಟಿಎಸ್‍ಪಿ ಯೋಜನೆಗೂ ಅನ್ವಯಿಸುವ ರೀತಿ ನೀತಿ ರೂಪಿಸಬೇಕೆಂದು ಆಗ್ರಹಿಸಿದರು. ಎ ಗುಂಪಿನಲ್ಲಿರುವ ಮಾದಿಗರು ಪೈಪೋಟಿ ನೀಡುವಲ್ಲಿ ದುರ್ಬಲರೆಂಬ ಕಾರಣಕ್ಕೆ ತಮಿಳುನಾಡಿನಿಂದ ವಲಸೆ ಬಂದ ಪರಿಯಾ ಹಾಗೂ ಎಕೆ, ಎಡಿಯಲ್ಲಿರುವ ಮೂಲ ಜಾತಿ ಮಾದಿಗರಲ್ಲದವರು ಕೂಡ ಎ ವರ್ಗಕ್ಕೆ ನುಸುಳುವ ಪ್ರಯತ್ನ ಮಾಡುತ್ತಿದ್ದಾರೆ. ಕೆಲವೆಡೆ ಈ ಕೃತ್ಯ ಈಗಾಗಲೇ ಆಗಿದೆ ಎಂಬ ಆರೋಪ ಇದೆ. ಇದಕ್ಕೆ ಶಾಶ್ವತ ತಡೆ ಹಾಕಲು ಕಠಿಣ ಕಾನೂನು ರೂಪಿಸಬೇಕೆಂದು ಹೇಳಿದರು. ಒಳಮೀಸಲಾತಿಯಲ್ಲಿ ಎ, ಬಿ, ಸಿ ಗುಂಪುಗಳನ್ನಾಗಿಸಿದ್ದು, ಶಿಕ್ಷಣ,…

Read More

ಹುಚ್ಚೆಬ್ಬಿಸುತ್ತಿರುವ 45 ಸಿನಿಮಾ ಆಫ್ರೋ ಟಪಾಂಗ್  ಸಾಂಗ್ ಬಹುನಿರೀಕ್ಷಿತ ಪ್ಯಾನ್ ಇಂಡಿಯಾ ಸಿನಿಮಾ ’45’ರ ಪ್ರಮೋಷನಲ್ ಹಾಡು ‘AFRO ಟಪಾಂಗ್‌’ ಭಾರತದಲ್ಲಿ ಟ್ರೆಂಡಿಂಗ್ ಟಾಪ್ ಹಾಡು ಎನಿಸಿದೆ. ಸೋಶಿಯಲ್‌ ಮೀಡಿಯಾದಲ್ಲಿ ದಾಖಲೆ ಮಟ್ಟದ ವೀಕ್ಷಣೆಯನ್ನು ‘AFRO ಟಪಾಂಗ್‌’ ಹಾಡು ಪಡೆದಿದೆ. ಇದು ಭಾರತದಲ್ಲಿ ಕನ್ನಡ, ತಮಿಳು, ತೆಲುಗು, ಮಲಯಾಳಂ ಮತ್ತು ಹಿಂದಿ ಸೇರಿದಂತೆ ಪಂಚ ಭಾಷೆಗಳಲ್ಲೂ ಟಾಪ್ ಟ್ರೆಂಡಿಂಗ್ ಸಾಂಗ್ ಆಗಿದೆ. ಈ ಹಾಡು ಜಾಗತಿಕವಾಗಿ 28.5 ಮಿಲಿಯನ್ ವೀಕ್ಷಣೆಗಳೊಂದಿಗೆ ಹೊಸ ಮೈಲಿಗಲ್ಲನ್ನು ಸಾಧಿಸಿದೆ. ರಿಯಲ್ ಸ್ಟಾರ್ ಉಪೇಂದ್ರ, ಕರುನಾಡ ಚಕ್ರವರ್ತಿ ಶಿವರಾಜ್‌ ಕುಮಾರ್‌ ಮತ್ತು ರಾಜ್‌ ಬಿ ಶೆಟ್ಟಿ ಒಟ್ಟಾಗಿ ನಟಿಸಿರುವ 45 ಚಿತ್ರ ಡಿಸೆಂಬರ್ 25ರಂದು ಬಿಡುಗಡೆ ಆಗಲಿದೆ. ಈ ವರ್ಷದ ಕೊನೆಯ ನಿರೀಕ್ಷಿತ ಸಿನಿಮಾದ ಟ್ರೈಲರ್ ಶೀಘ್ರ ಬಿಡುಗಡೆ ಆಗಲಿದೆ. ನಿರ್ಮಾಪಕ ರಮೇಶ್‌ ರೆಡ್ಡಿ ಅವರ 45 ಚಿತ್ರದ ಬಜೆಟ್ ₹100 ಕೋಟಿ ಎಂದು ಅಂದಾಜಿಸಲಾಗಿದೆ. ಹಾಡಿನ ಭರ್ಜರಿ ಯಶಸ್ಸು ಚಿತ್ರದ ಬಿಡುಗಡೆಗೆ ಭದ್ರ ಬುನಾದಿ ಹಾಕಿದೆ.…

Read More

ಚಿತ್ರದುರ್ಗ ನ. 30:ರಾಜ್ಯದಲ್ಲಿ ರೈತರ ಸಮಸ್ಯೆಗಳು ಹೆಚ್ಚಾಗುತ್ತಿದೆ. ಈ ಹಿಂದಿನ ಸರ್ಕಾರದ ಮುಖ್ಯ ಮಂತ್ರಿಗಳು ಲಭ್ಯವಿರುವ ಅನುದಾನದಲ್ಲಿಯೇ ಸ್ಥಳೀಯ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳುತ್ತಿದ್ದರು. ಆದರೆ ಇಂದು ರಾಜ್ಯದಲ್ಲಿ ಅಭಿವೃದ್ಧಿ ಕಾರ್ಯಗಳು ಕುಂಠಿತಗೊಂಡಿವೆ. ಈ ನಡುವೆ ಅಧಿಕಾರ ಹಂಚಿಕೆ ವಿಷಯದಲ್ಲಿ ಜನರ ದಿಕ್ಕನ್ನು ತಪ್ಪಿಸಲು ಆಡಳಿತ ನಡೆಸು ವವರು ಕಿತ್ತಾಡುತ್ತಿದ್ದಾರೆ ಇದನ್ನು ನಾಡಿನ ಜನರು ಗಮನಿಸುತ್ತಿದ್ದಾರೆ. ಮುಂದಿನ ದಿನಗಳಲ್ಲಿ ತಕ್ಕ ಉತ್ತರ ನೀಡಲಿದ್ದಾರೆ ಎಂದು ವಿಧಾನ ಪರಿಷತ್ತಿನ ವಿರೋಧಪಕ್ಷದ ನಾಯಕರಾದ ಛಲವಾದಿ ನಾರಾಯಣಸ್ವಾಮಿ ತಿಳಿಸಿದ್ದಾರೆ. ಚಿತ್ರದುರ್ಗದದಲ್ಲಿ ಭಾನುವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿ, ಈಗಿನ ಸರ್ಕಾರದ ಆಡಳಿತ ವೈಖರಿ ಭಿನ್ನವಾಗಿದೆ. ಪಕ್ಷದವರು ಕಾನೂನು ಬಾಹಿರವಾಗಿ ಅಧಿಕಾರ ಚಲಾಯಿಸುವ ಮೂಲಕ ಅನ್ಯಾಯ, ಅಕ್ರಮದ ವಿರುದ್ಧ ಹೋರಾಡುವ ಬೇರೆ ಪಕ್ಷದವರನ್ನು ಅಧಿಕಾರಿಗಳನ್ನು ನಡೆಸಿಕೊಳ್ಳುತ್ತಿರುವ ರೀತಿ ಮುಂದೆ ಆಡಳಿತ ನಡೆಸುವವರಿಗೆ, ಅಧಿಕಾರದಲ್ಲಿರುವವರಿಗೆ ಪಾಠ ಹೇಳಿಕೊಡುವಂತಿದೆ. ಈ ಬ್ರೇಕ್ ಫಾಸ್ಟ್ ಮೀಟಿಂಗ್‍ನಲ್ಲಿ ಇಡ್ಲಿ, ದೋಸೆ, ಉಪ್ಪಿಟ್ಟು ಬಿಟ್ಟು ಬೇರೇನೂ ಆಗಲ್ಲ, ಸಿಎಂ ಪದವಿ ಸಿದ್ದರಾಮಯ್ಯ ಅವರಿಗೆ ಎರಡೂವರೆ ವರ್ಷ ಎಂದು ಮಾತುಕತೆಯಾಗಿದೆ ಎಂದು…

Read More

ಮುರುಘಾ ಶರಣರು ನಿರ್ದೋಷಿ: ಪೋಕ್ಸೋ ಪ್ರಕರಣದ 1,2ಮತ್ತು3 ಆರೋಪಿಗಳ ಬಿಡುಗಡೆ ಚಿತ್ರದುರ್ಗ,ನ26: ಮುರುಘಾ ಮಠದ ಮುರುಘಾ ಶರಣರು ಸೇರಿದಂತೆ ಇಬ್ಬರಿಗೆ ಇಂದು ಬಿಡುಗಡೆ ಭಾಗ್ಯ ದೊರೆತಿದ್ದು, ಪೋಕ್ಸೋ ಪ್ರಕರಣದಿಂದ ನಿರ್ದೋಷಿಯಾಗಿದ್ದಾರೆ.ಕಳೆದ ಮೂರು ವರ್ಷಗಳ ಹಿಂದೆ ಪೋಕ್ಸೊ ಪ್ರಕರಣದಲ್ಲಿ ಮುರುಘಾ ಶರಣರು, ಪರಮಶಿವಯ್ಯ ಹಾಗು ಹಾಸ್ಟೆಲ್ ವಾರ್ಡನ್ ರಶ್ಮಿ ಮೂರು ಜನರು ಸಿಲುಕಿದ್ದರು. ಮೂರು ವರ್ಷಗಳಿಂದ ನ್ಯಾಯಾಲಯದಲ್ಲಿ ಪ್ರಕರಣ ನಡೆದಿತ್ತು. ನಂತರ ಜಾಮೀನಿನ ಮೇಲೆ ಹೊರಗೆ ಬಂದ ಮುರುಘಾ ಶರಣರಿಗೆ ನ್ಯಾಯಾಲಯವು ಚಿತ್ರದುರ್ಗ ಜಿಲ್ಲೆಗೆ ಬರುವುದನ್ನು ನಿರ್ಬಂಧಿಸಿತ್ತು. ಅಂದಿನಿಂದ ಮುರುಘಾ ಶರಣರು ದಾವಣಗೆರೆ ಜಿಲ್ಲೆಯ ಶಿವಯೋಗಿ ಮಂದಿರದಲ್ಲಿ ವಾಸ್ತವ್ಯ ಹೂಡಿದ್ದರು. ಪ್ರಕರಣದ ವಿಚಾರಣೆಗೆ ಅಲ್ಲಿಂದಲೇ ನ್ಯಾಯಾಲಯಕ್ಕೆ ಹಾಜರಾಗುತ್ತಿದ್ದರು. ಎರಡೂ ಕಡೆಯ ವಾದ ಪ್ರತಿ ವಾದಗಳನ್ನು ಆಲಿಸಿದ್ದ 2ನೇ ಅಪರ ಮತ್ತು ಜಿಲ್ಲಾ ನ್ಯಾಯಾಯದ ನ್ಯಾಯಾಧೀಶರು, ಕಳೆದ 10 ರಂದು ಮುರುಘಾ ಶರಣರು ಮತ್ತು ಇಬ್ಬರಿಗೆ ಸಂಬಂಧಿಸಿದಂತೆ ತೀರ್ಪಿನ ಆದೇಶವನ್ನು ಬುಧವಾರಕ್ಕೆ ಮುಂದೂಡಿದ್ದರು. ಇಂದು ಬೆಳಗ್ಗೆಯೇ ತೀರ್ಪಿಗಾಗಿ ಕಾಯ್ದು ಆಗಮಿಸಿದ್ದ ಮುರುಘಾ ಶರಣರು,…

Read More

ಜೀವನದಲ್ಲಿ ಆಸೆ , ಆಕಾಂಕ್ಷೆ , ಶ್ರದ್ಧೆ , ಗುರಿ , ಅದೃಷ್ಟವಿದ್ದರೆ ಖಂಡಿತ ಉನ್ನತ ಮಟ್ಟಕ್ಕೆ ಸಾಗಬಹುದು ಎಂಬುದಕ್ಕೆ ನಿದರ್ಶನವಾಗಿರುವ ವ್ಯಕ್ತಿಭಾರತೀಯ ವೈದ್ಯರು, ನಟರು, ಲೇಖಕರು, ಮ್ಯಾರಥಾನ್ ರನ್ನರ್, ಸಾಂಸ್ಕೃತಿಕ ರಾಯಭಾರಿಯಾಗಿದ ಡಾ. ಲೀಲಾ ಮೋಹನ್ ಪಿ.ವಿ.ಆರ್. ಮೂಲತಃ ಬೆಂಗಳೂರಿನವರಾಗಿದ್ದು , ಎಂ.ಬಿ.ಬಿ.ಎಸ್ ಮತ್ತು ಎಂ.ಡಿ ಪದವಿಗಳನ್ನು ಪೂರ್ಣಗೊಳಿಸಿದ ನಂತರ ಬೆಂಗಳೂರಿನ ಪ್ರಮುಖ ಆಸ್ಪತ್ರೆಗಳಲ್ಲಿ ವೈದ್ಯಕೀಯ ಸೇವೆಯನ್ನು ಆರಂಭಿಸಿ ಸುಮಾರು 18 ವರ್ಷಗಳಿಗಿಂತ ಹೆಚ್ಚು ಅನುಭವದೊಂದಿಗೆ ಫ್ಯಾಮಿಲಿ ಮೆಡಿಸಿನ್, ಪೀಡಿಯಾಟ್ರಿಕ್ಸ್ , ಪಬ್ಲಿಕ್ ಹೆಲ್ತ್, ಲೈಫ್‌ಸ್ಟೈಲ್ ಮೆಡಿಸಿನ್ ಕ್ಷೇತ್ರಗಳಲ್ಲಿ ಪರಿಣತಿ ಹೊಂದಿದ್ದು , ಅದರಲ್ಲೂ ಪೇನ್ ಕಿಲ್ಲರ್‌ಗಳ ಬದಲು ನ್ಯೂಟ್ರಾಸ್ಯೂಟಿಕಲ್ಸ್ ಮೂಲಕ ನೋವು ನಿರ್ವಹಣೆಗೆ ಆದ್ಯತೆ ನೀಡುವ ವೈದ್ಯರಾಗಿ ಹೆಚ್ಚು ಪರಿಚಿತರು. ಇನ್ನು ಸರ್ಜಾಪುರ ಬಳಿ ಇರುವ ರೇನ್‌ಬೋ ಆಸ್ಪತ್ರೆ , ಮದರ್‌ಹುಡ್ ಆಸ್ಪತ್ರೆ ಹಾಗೂ ಮಣಿಪಾಲ್ ಆಸ್ಪತ್ರೆಯಲ್ಲಿ ಪರಾಮರ್ಶಕ ವೈದ್ಯರಾಗಿ ಸೇವೆ ಸಲ್ಲಿಸುತ್ತಿದ್ದು, ಹೆಚ್‌ ಎಸ್‌ ಆರ್ ಲೇಔಟ್‌ನಲ್ಲಿ ಪಡಿತೇಮ್ ಹೆಲ್ತ್ ಕೇರ್ ಎಂಬ ಡೇ ಕೇರ್ ವೈದ್ಯಕೀಯ…

Read More

ಜೀವನದಲ್ಲಿ ಆಸೆ , ಆಕಾಂಕ್ಷೆ , ಶ್ರದ್ಧೆ , ಗುರಿ , ಅದೃಷ್ಟವಿದ್ದರೆ ಖಂಡಿತ ಉನ್ನತ ಮಟ್ಟಕ್ಕೆ ಸಾಗಬಹುದು ಎಂಬುದಕ್ಕೆ ನಿದರ್ಶನವಾಗಿರುವ ವ್ಯಕ್ತಿಭಾರತೀಯ ವೈದ್ಯರು, ನಟರು, ಲೇಖಕರು, ಮ್ಯಾರಥಾನ್ ರನ್ನರ್, ಸಾಂಸ್ಕೃತಿಕ ರಾಯಭಾರಿಯಾಗಿದ ಡಾ. ಲೀಲಾ ಮೋಹನ್ ಪಿ.ವಿ.ಆರ್. ಮೂಲತಃ ಬೆಂಗಳೂರಿನವರಾಗಿದ್ದು , ಎಂ.ಬಿ.ಬಿ.ಎಸ್ ಮತ್ತು ಎಂ.ಡಿ ಪದವಿಗಳನ್ನು ಪೂರ್ಣಗೊಳಿಸಿದ ನಂತರ ಬೆಂಗಳೂರಿನ ಪ್ರಮುಖ ಆಸ್ಪತ್ರೆಗಳಲ್ಲಿ ವೈದ್ಯಕೀಯ ಸೇವೆಯನ್ನು ಆರಂಭಿಸಿ ಸುಮಾರು 18 ವರ್ಷಗಳಿಗಿಂತ ಹೆಚ್ಚು ಅನುಭವದೊಂದಿಗೆ ಫ್ಯಾಮಿಲಿ ಮೆಡಿಸಿನ್, ಪೀಡಿಯಾಟ್ರಿಕ್ಸ್ , ಪಬ್ಲಿಕ್ ಹೆಲ್ತ್, ಲೈಫ್‌ಸ್ಟೈಲ್ ಮೆಡಿಸಿನ್ ಕ್ಷೇತ್ರಗಳಲ್ಲಿ ಪರಿಣತಿ ಹೊಂದಿದ್ದು , ಅದರಲ್ಲೂ ಪೇನ್ ಕಿಲ್ಲರ್‌ಗಳ ಬದಲು ನ್ಯೂಟ್ರಾಸ್ಯೂಟಿಕಲ್ಸ್ ಮೂಲಕ ನೋವು ನಿರ್ವಹಣೆಗೆ ಆದ್ಯತೆ ನೀಡುವ ವೈದ್ಯರಾಗಿ ಹೆಚ್ಚು ಪರಿಚಿತರು. ಇನ್ನು ಸರ್ಜಾಪುರ ಬಳಿ ಇರುವ ರೇನ್‌ಬೋ ಆಸ್ಪತ್ರೆ , ಮದರ್‌ಹುಡ್ ಆಸ್ಪತ್ರೆ ಹಾಗೂ ಮಣಿಪಾಲ್ ಆಸ್ಪತ್ರೆಯಲ್ಲಿ ಪರಾಮರ್ಶಕ ವೈದ್ಯರಾಗಿ ಸೇವೆ ಸಲ್ಲಿಸುತ್ತಿದ್ದು, ಹೆಚ್‌ ಎಸ್‌ ಆರ್ ಲೇಔಟ್‌ನಲ್ಲಿ ಪಡಿತೇಮ್ ಹೆಲ್ತ್ ಕೇರ್ ಎಂಬ ಡೇ ಕೇರ್ ವೈದ್ಯಕೀಯ…

Read More

ಚಿತ್ರದುರ್ಗ : ಪ್ರಜಾಸತ್ತಾತ್ಮಕ, ಅಸಮಾನತೆ ವ್ಯವಸ್ಥೆಯಲ್ಲಿ ಕಠಿಣ ಪರಿಶ್ರಮದಿಂದ ಮಾತ್ರ ನಿಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಲು ಸಾಧ್ಯ ಎಂದು ಕೊಪ್ಪಳ ವಿಶ್ವವಿದ್ಯಾನಿಲಯದ ಉಪ ಕುಲಪತಿ ಡಾ.ಬಿ.ಕೆ.ರವಿ ಪದವಿ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.ದೇವರಾಜ್ ಅರಸ್ ಶಿಕ್ಷಣ ಸಂಸ್ಥೆಯ ವಿವಿಧ ಅಂಗ ಸಂಸ್ಥೆಗಳಲ್ಲಿ 2024-25 ನೇ ಸಾಲಿನಲ್ಲಿ ಪದವಿ ಪಡೆದಿರುವ 600 ವಿದ್ಯಾರ್ಥಿಗಳಿಗೆ ಪರಿಣಿತ್-2025 ಪದವಿ ಪ್ರದಾನ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.ಸಾಮಾಜಿಕ ವ್ಯವಸ್ಥೆ, ಶ್ರೇಣಿಕೃತ ವರ್ಗ ಸಂಘರ್ಷದ ಹೋರಾಟದಲ್ಲಿ ಸಮ ಸಮಾಜದ ಬೀಜ ಬಿತ್ತಿದ ರಾಜ್ಯದ ಮುಖ್ಯಮಂತ್ರಿಯಾಗಿದ್ದ ಡಿ.ದೇವರಾಜ ಅರಸುರವರ ಹೆಸರಿನಲ್ಲಿ ಶಾಸಕ ಡಾ.ಎಂ.ಚಂದ್ರಪ್ಪನವರು ದೇವರಾಜ್ ಅರಸ್ ಶಿಕ್ಷಣ ಸಂಸ್ಥೆ ಕಟ್ಟಿ ಬೆಳೆಸಿರುವುದರ ಹಿಂದೆ ಅಪಾರ ಪರಿಶ್ರಮವಿದೆ. ಪ್ರತಿಭೆಗಳನ್ನು ಬೆನ್ನು ತಟ್ಟುವ ಕೆಲಸ ಈ ಸಂಸ್ಥೆ ಮಾಡುತ್ತಿದೆ ಎಂದು ಪ್ರಶಂಶಿಸಿದರು.ಬಯಲು ಸೀಮೆ ಚಿತ್ರದುರ್ಗದಲ್ಲಿ ಶೋಷಿತ ಬಡತನದ ಬೇಗೆಯಲ್ಲಿ ಬೇಯುವ ವರ್ಗವೆ ಜಾಸ್ತಿ. ಅದಕ್ಕಾಗಿ ಇಲ್ಲಿನ ಮಕ್ಕಳಿಗೆ ಗುಣ ಮಟ್ಟದ ಶಿಕ್ಷಣ ನೀಡಬೇಕೆಂಬ ಮಹದಾಸೆಯಿಂದ ದೇವರಾಜ್ ಅರಸ್ ಶಿಕ್ಷಣ ಸಂಸ್ಥೆ ಕಟ್ಟುವುದರ ಜೊತೆಗೆ ಜನಪ್ರಿಯ ಶಾಸಕರಾಗಿ ಡಾ.ಎಂ.ಚಂದ್ರಪ್ಪ…

Read More

ಜಾತಿಪ್ರಮಾಣ ಪತ್ರ ವಿತರಣೆಗೆ ಇದ್ದ ಅಡ್ಡಿ ಆತಂಕ ದೂರ; ತಂತ್ರಾಂಶ ಕಾರ್ಯಾರಂಭ : ಮಾಜಿ ಸಚಿವ ಎಚ್.ಆಂಜನೇಯ ಹೇಳಿಕೆ ಚಿತ್ರದುರ್ಗ:ನ.12: ಒಳಮೀಸಲಾತಿ ವಿಷಯದಲ್ಲಿ ಕೆಲವರು ಸುಳ್ಳು ಸುದ್ದಿ ಹರಡಿಸುತ್ತಿದ್ದು, ಇದಕ್ಕೆಲ್ಲ ಸಿಎಂ ಸಿದ್ದರಾಮಯ್ಯ ತೆರೆ ಎಳೆದಿದ್ದಾರೆ ಎಂದು ಮಾಜಿ ಸಚಿವ ಎಚ್.ಆಂಜನೇಯ ಹೇಳಿದರು. ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಒಳಮೀಸಲಾತಿ ಬಳಿಕ ಜಾತಿಪ್ರಮಾಣ ಪತ್ರ ವಿತರಣೆಗೆ ಇದ್ದ ಅಡ್ಡಿ ಆತಂಕಗಳು ದೂರಗೊಂಡಿವೆ. ಈಗಾಗಲೇ ತಂತ್ರಾಂಶ ಕಾರ್ಯಾರಂಭಗೊಂಡಿದೆ ಎಂದರು. ನಾನು ಆದಿಕರ್ನಾಟಕ ಜಾತಿಸೂಚಕ ಗುಂಪಿಗೆ ಸೇರಿದ್ದು ಮಾದಿಗ ಜಾತಿಯವನಾಗಿದ್ದು, ಈ ಸಂಬಂಧ ಹೊಳಲ್ಕೆರೆ ತಹಸೀಲ್ದಾರ್ ಅವರಿಂದ ಜಾತಿಪ್ರಮಾಣ ಪತ್ರ ಪಡೆದಿದ್ದೇನೆ. ಈ ಮೂಲಕ ಅಧಿಕೃತವಾಗಿ ಪ್ರಮಾಣ ಪತ್ರ ವಿತರಣೆ ಕಾರ್ಯ ಆರಂಭಗೊಂಡಿದೆ ಎಂದು ತಿಳಿಸಿದರು. ಒಳಮೀಸಲಾತಿ ಜಾರಿ ಬಳಿಕ ಬಹುದೊಡ್ಡ ಸವಾಲು ನಮ್ಮ ಮುಂದಿದೆ.ನುಸುಳುಕೋರರು ಎ ಗುಂಪಿಗೆ ಪ್ರವೇಶ ಮಾಡದಂತೆ ಜಾಗ್ರತೆ ವಹಿಸಬೇಕಾಗಿದೆ. ತಹಸೀಲ್ದಾರ್, ಜಿಲ್ಲಾಧಿಕಾರಿಗಳು ಜಾತಿ, ಸಿಂಧುತ್ವ ಪ್ರಮಾಣ ಪತ್ರ ವಿತರಣೆ ಸಂದರ್ಭ ವಂಶವೃಕ್ಷ, ಜಾತಿಯ ಮೂಲ ಪತ್ತೆ ಹಚ್ಚಬೇಕು ಎಂದರು.…

Read More

ಹೊಳಲ್ಕೆರೆ,ನ03:: ಮೂರನೆ ಬಾರಿಗೆ ನರೇಂದ್ರಮೋದಿ ದೇಶದ ಪ್ರಧಾನಿಯಾಗಿದ್ದಾರೆ. ಒಬ್ಬ ಮುಸಲ್ಮಾನನಿಗೂ ಕೆಟ್ಟದ್ದು ಮಾಡಿ ತೊಂದರೆ ಕೊಟ್ಟಿಲ್ಲ. ಬೇರೆಯವರ ಮರಳು ಮಾತನ್ನು ನಂಬಬೇಡಿ. ನೀಯತ್ತಿಟ್ಟುಕೊಳ್ಳಿ ಎಂದು ಶಾಸಕ ಡಾ.ಎಂ.ಚಂದ್ರಪ್ಪ ಸುಲ್ತಾನಿಪುರ ಗ್ರಾಮಸ್ಥರಿಗೆ ತಿಳಿಸಿದರು. ಭರಮಸಾಗರ ಹೋಬಳಿ ಸುಲ್ತಾನಿಪುರ ಗ್ರಾಮದಲ್ಲಿ 33 ಲಕ್ಷ ರೂ.ವೆಚ್ಚದಲ್ಲಿ ನೂತನ ಸಿ.ಸಿ.ರಸ್ತೆ ಕಾಮಗಾರಿಗೆ ಸೋಮವಾರ ಭೂಮಿ ಪೂಜೆ ಸಲ್ಲಿಸಿ ಮಾತನಾಡಿದರು. ಸಾರ್ವಜನಿಕರ ಕಷ್ಟ-ಸುಖ ಅರ್ಥಮಾಡಿಕೊಂಡು ಪ್ರತಿಯೊಬ್ಬರು ನನ್ನಂತೆ ಮನುಷ್ಯರು ಎನ್ನುವ ಮನುಷ್ಯತ್ವವಿಟ್ಟುಕೊಂಡು ಕೆಲಸ ಮಾಡುವ ರಾಜಕಾರಣಿ ನಾನು. ಅಧಿಕಾರ ಬಹಳ ದಿನ ಇರಲ್ಲ. ಇದ್ದಾಗ ಜನರಿಗೆ ಒಳ್ಳೆಯದು ಮಾಡಬೇಕೆನ್ನುವುದಷ್ಟೆ ನನಗೆ ಗೊತ್ತಿರುವುದು. ಉಪಕಾರ ಪಡೆದು ಅನುಕೂಲ ಮಾಡಿಕೊಂಡು ದ್ರೋಹ ಮಾಡುವುದಿದೆಯೆಲ್ಲಾ ಅದಕ್ಕಿಂತ ದೊಡ್ಡ ಮೋಸ ಬೇರೆಯಿಲ್ಲ. ಗಂಗಾ ಕಲ್ಯಾಣ ಸೇರಿದಂತೆ ನೂರಾರು ಯೋಜನೆಗಳಿವೆ. ಪ್ರಯೋಜನ ಪಡೆದುಕೊಂಡು ಉತ್ತಮ ಜೀವನ ಕಂಡುಕೊಳ್ಳಿ ಎಂದು ಹೇಳಿದರು. ಸರ್ಕಾರಿ ಶಾಲೆಗೆ ಬರುವ ಬಡ ಮಕ್ಕಳಿಗೆ ಸ್ವಂತ ಖರ್ಚಿನಿಂದ ಬಸ್‍ಗಳನ್ನು ಬಿಟ್ಟಿದ್ದೇನೆ. ಪ್ರತಿ ಗ್ರಾಮಗಳಿಗೂ ಸಿ.ಸಿ.ರಸ್ತೆ, ಶುದ್ದ ಕುಡಿಯುವ ನೀರು ಪೂರೈಸಲಾಗುವುದು. ಮನುಷ್ಯತ್ವವಿಟ್ಟುಕೊಂಡು ಕೆಲಸ…

Read More

ಮತದಾನ ಹಕ್ಕು ರಕ್ಷಣೆ ಕಾಂಗ್ರೆಸ್ ಹೊಣೆ ಹೊಳಲ್ಕೆರೆ,ನ02: ಪ್ರಜಾಪ್ರಭುತ್ವದಲ್ಲಿ ಸಂವಿಧಾನ ನೀಡಿರುವ ಮತದಾನದ ಹಕ್ಕಿಗೆ ಪ್ರಸ್ತುತ ದೇಶದಲ್ಲಿ ಕಂಟಕ ಎದುರಾಗಿದ್ದು, ಎಲ್ಲೆಡೆಯೂ ಮತಗಳ್ಳತನ ಮಾಡಲಾಗುತ್ತಿದೆ ಎಂದು ಮಾಜಿ ಸಚಿವ ಎಚ್.ಆಂಜನೇಯ ಆರೋಪಿಸಿದರು. ಕಾಂಗ್ರೆಸ್ ಪಕ್ಷದಿಂದ ಗ್ರಾಮದಲ್ಲಿ ಭಾನುವಾರ ಆಯೋಜಿಸಿದ್ದ ವೋಟ್ ಚೌರ್ ಗದ್ದಿ ಜೋಡ್ ಮತಗಳ್ಳತನ ವಿರುದ್ಧ ಸಹಿ ಸಂಗ್ರಹಣೆ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿ, ಮತದಾನ ಸರ್ವರ ಹಕ್ಕು. ಆದರೆ, ಜಾತಿ-ಧರ್ಮ ಆಧಾರಿತವಾಗಿ ಮತದಾರರ ಪಟ್ಟಿಯಿಂದ ಹೆಸರುಗಳನ್ನು ತೆಗೆಯುವುದು, ನಕಲಿ ಹೆಸರು ಸೇರ್ಪಡೆ ಮೂಲಕ ಚುನಾವಣೆಯಲ್ಲಿ ಗೆಲ್ಲಲು ಷಡ್ಯಂತರ ನಡೆಸಲಾಗುತ್ತಿದೆ ಎಂದು ದೂರಿದರು. ಸಂವಿಧಾನ ವಿರೋಧಿ ಹಾಗೂ ಅಕ್ರಮ ನಡೆ ಮೂಲಕ ದೇಶದಲ್ಲಿ ಪ್ರಜಾಪ್ರಭುತ್ವದ ಕಗ್ಗೊಲೆ ನಡೆಯುತ್ತಿದೆ. 10 ವರ್ಷಕ್ಕೂ ಹೆಚ್ಚು ಕಾಲದಿಂದ ಗುಪ್ತವಾಗಿ ನಡೆಸುತ್ತಿಕೊಂಡು ಬರುತ್ತಿರುವ, ಈ ದುಷ್ಕೃತ್ಯವನ್ನು ಬೆಳಕಿಗೆ ತಂದ ಕೀರ್ತಿ ರಾಹುಲ್ ಗಾಂಧಿಗೆ ಸಲ್ಲುತ್ತದೆ ಎಂದರು. ಸಂವಿಧಾನ ಹಾಗೂ ಮತದಾರರ ಹಕ್ಕು ರಕ್ಷಣೆಗೆ ಟೊಂಕ ಕಟ್ಟಿ ದೇಶಾದ್ಯಂತ ಸಂಚರಿಸುತ್ತಿರುವ ರಾಹುಲ್ ಗಾಂಧಿ ಪ್ರಜಾಪ್ರಭುತ್ವದ ನಿಜವಾದ…

Read More