ಚಿತ್ರದುರ್ಗ: ನಗರದಲ್ಲಿ ಆರು ಜನ ಬಾಂಗ್ಲಾ ನುಸುಳುಕೋರರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಚಿತ್ರದುರ್ಗದ ಡಿವೈಎಸ್ಪಿ ದಿನಕರ್ ನೇತೃತ್ವದಲ್ಲಿ ನಗರದ ಗಾರ್ಮೆಂಟ್ಸ್ ಗಳ ಮೇಲೆ ದಾಳಿ ನಡೆಸಿದ್ದು, ಬಾಂಗ್ಲಾ ವಾಸಿಗಳನ್ನು ವಶಕ್ಕೆ ಪಡೆದಿದ್ದಾರೆ. ಕೋಟೆ ಠಾಣೆ ಪೊಲೀಸರು 11 ಜನರನ್ನು ಹಾಗು ಗ್ರಾಮಾಂತರ ಠಾಣೆ ಪೊಲೀಸರು 4 ಜನರನ್ನು ವಶಕ್ಕೆ ಪಡೆದಿದ್ದಾರೆ. ಅವರಲ್ಲಿ 6 ಜನರು ಬಾಂಗ್ಲಾ ವಾಸಿಗಳೆಂದು ದೃಢಪಟ್ಟಿದೆ. ಶೇಕ್ರ್ ಸೈಪುರ್ ರೆಹಮಾನ್, ಸುಮನ್ ಹುಸೇನ್ ಆಲಿ,ಮಜರ್ಹುಲ್,ಅಜೀಜ್ ವುಲ್ ಶೇಕ್, ಮುಹಮದ್ ಶಕೀಬ್ ಸಿಕ್ದರ್ ಮತ್ತು ಸನಾವರ್ ಹುಸೇನ್ ಎಂದು ಗುರುತಿಸಿದ್ದು, ಅವರ ಬಾಂಗ್ಲಾ ಆಧಾರ್ ಕಾರ್ಡ್ ಗಳು ಪತ್ತೆಯಾಗಿವೆ.ಇವರು ಬಾಂಗ್ಲಾದೇಶದಿಂದ ನುಸುಳಿರುವುದು ದೃಢಪಟ್ಟಿದೆ.ಇನ್ನು ನುಸುಳುಕೋರರ ವಿಚಾರಣೆಯು ಎಸ್ಪಿ ರಂಜಿತ್ ಕುಮಾರ್ ಬಂಡಾರು ನೇತೃತ್ವದಲ್ಲಿ ನಡೆಯುತ್ತಿದ್ದು, ನುಸುಳುಕೋರರು ಶಿವಮೊಗ್ಗ ದಾವಣಗೆರೆ ಮತ್ತು ಇತರೆ ಕಡೆಗಳಲ್ಲಿ ಇದ್ದಾರೆಂಬ ಮಾಹಿತಿ ಲಭ್ಯವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.