ಲವ್ ಜೀಹದ್ ಗೀಡಾದ ಯುವತಿ ಚಿಕಿತ್ಸೆಗೆ ಸಹಾಯ ಹಸ್ತ ಚಾಚಿದ ಭೋವಿಶ್ರೀಗಳು
ಬಾಗಲಕೋಟ ಜಿಲ್ಲಾ ಹುನಗುಂದ ತಾಲ್ಲೂಕು ಗೂಡುರೂ ಗ್ರಾಮದ 22 ವರ್ಷದ ನೇತ್ರಾವತಿ ವಿ ಗೂಡೂರು ಎಂಬ ಯುವತಿಯ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಲವ್ ಜೀಹಾದ್ ಕೃತ್ಯದಿಂದ ಯುವತಿಯ ಜೀವನ್ಮರಣ ಹೋರಾಟದಲ್ಲಿ ವೈದ್ಯಕೀಯ ಚಿಕಿತ್ಸೆ ಅತ್ಯಗತ್ಯವಾಗಿದೆ.ಯುವತಿ ಅನಾಥಳಾಗಿದ್ದು, ಈ ಬಗ್ಗೆ ಅಶೋಕ ಲಿಂಬಾವಳಿ ಭೋವಿ ಗುರುಪೀಠದ ಜಗದ್ಗುರುಗಳ ಜೊತೆ ಚರ್ಚಿಸಿದ ಹಿನ್ನೆಲೆಯಲ್ಲಿ ಜಗದ್ಗುರು ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ, ಯುವತಿಯ ಚಿಕಿತ್ಸೆಗೆ 1 ಲಕ್ಷ ರೂಪಾಯಿ ಸಹಾಯ ಹಸ್ತ ನೀಡಿದ್ದಾರೆ.*
ತಾತ್ಕಾಲಿಕ ಆಶ್ರಯದಲ್ಲಿರುವ ಇಳಕಲ್ ಮಹಿಳಾ ಸಾಂತ್ವನ ಕೇಂದ್ರಕ್ಕೆ ತೆರಳಿ, ಚೆಕ್ ಹಸ್ತಾಂತರಿಸುವ ಸಂದರ್ಭದಲ್ಲಿ ತಂಗಡಗಿಯ ಹಡಪದ ಅಪ್ಪಣ್ಣ ಗುರುಪೀಠದ ಜಗದ್ಗುರು ಅನ್ನದಾನ ಭಾರತಿ ಅಪ್ಪಣ್ಣ ಮಹಾಸ್ವಾಮಿಗಳು,
ತೆಲಸಂಗ ಕುಂಬಾರ ಗುರುಪೀಠದ ಜಗದ್ಗುರು ಕುಂಬಾರ ಗುಂಡಯ್ಯ ಮಹಾಸ್ವಾಮಿಗಳು, ಶಿಕಾರಿಪುರ ವಿರಕ್ತಮಠ ಶ್ರೀ ಚನ್ನಬಸವ ಮಹಾಸ್ವಾಮಿಗಳು, ಭಾರತೀಯ ರೈಲ್ವೆ ಪ್ರಾಧಿಕಾರದ ಸದಸ್ಯ ಅಶೋಕ ಲಿಂಬಾವಳಿ, ಭಾಜಪ ಪರಿಶಿಷ್ಟ ಜಾತಿಯ ರಾಜ್ಯ ಕಾರ್ಯದರ್ಶಿ ತುಮಕೂರಿನ ಓಂಕಾರೇಶ್ವರ, ಬಾಗಲಕೋಟ ವಕೀಲ ಕುಮಾರಸ್ವಾಮಿ ಹಿರೇಮಠ, ಹನುಮಂತ ತುಂಬದ, ಬಸವರಾಜ ಒಡೆಯರಾಜ, ರಾಘವೇಂದ್ರ ಚಿಂಚಲಿ ಹಾಗೂ ಭೋವಿ ಸಮಾಜದ ಇನ್ನಿತರರ ಮುಖಂಡರು ಸಾಕ್ಷೀಕರಿಸಿದರು.





