ಚಿತ್ರದುರ್ಗ,ಏ07 : ಚಳ್ಳಕೆರೆ ಟೋಲ್‍ಗೇಟ್ ಸಮೀಪವಿರುವ ದೇವರಾಜ್ ಅರಸ್ ಶಿಕ್ಷಣ ಸಂಸ್ಥೆ ವೆಂಕಟೇಶ್ವರ ಶಿಕ್ಷಣ ಮಹಾವಿದ್ಯಾಲಯದಲ್ಲಿ ಸತ್ಯ ಎಜುಕೇರ್ ಕಾಂಪಿಟೆನ್ಸಿ
ಟ್ರಸ್ಟ್ ವತಿಯಿಂದ ಟೀಚಿಂಗ್ ಪ್ರೊಫೆಷನಲ್ ರೆಡಿನೆನ್ಸ್ ಎಂಬ ವಿಷಯ ಕುರಿತು ಬಿ.ಇ.ಡಿ. ವಿದ್ಯಾರ್ಥಿಗಳಿಗೆ ಎರಡು ದಿನಗಳ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ.
ದೇವರಾಜ್ ಅರಸ್ ಶಿಕ್ಷಣ ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಂ.ಸಿ.ರಘುಚಂದನ್ ಕಾರ್ಯಾಗಾರ ಉದ್ಗಾಟಿಸಿ ಮಾತನಾಡುತ್ತ ಇಂದಿನ ದಿನಮಾನಗಳಲ್ಲಿ ಕೇವಲ ತರಬೇತಿಯಿಂದ ಉತ್ತಮ ಶಿಕ್ಷಕರುಗಳಾಗಲು ಸಾಧ್ಯವಿಲ್ಲ. ಕೌಶಲ್ಯಾಧಾರಿತ ತರಬೇತಿಯಿಂದ ಮಾತ್ರ ಮಕ್ಕಳ ಮನಸ್ಸಿಗೆ ನಾಟುವ ರೀತಿಯಲ್ಲಿ ಬೋಧಿಸಲು ಅತ್ಯುತ್ತಮ ಶಿಕ್ಷಕರುಗಳಾಗಬಹುದೆಂದು ಬಿ.ಇ.ಡಿ. ಪ್ರಶಿಕ್ಷಣಾರ್ಥಿಗಳು ತಿಳಿಸಿದರು.
ವೆಂಕಟೇಶ್ವರ ಶಿಕ್ಷಣ ಮಹಾವಿದ್ಯಾಲಯದ ಪ್ರಾಚಾರ್ಯರಾದ ಡಾ.ಬಿ.ಸಿ.ಅನಂತರಾಮು ಮಾತನಾಡಿ 21 ನೇ ಶತಮಾನಕ್ಕೆ ತಕ್ಕಂತೆ ಶಿಕ್ಷಕರುಗಳು ತಯಾರಾಗಬೇಕು. ಈ ನಿಟ್ಟಿನಲ್ಲಿ ಬೋಧನೆ, ಕೌಶಲ್ಯ, ಸಂಸ್ಕಾರ, ಜ್ಞಾನ ಮುಖ್ಯ. ಯಾವುದೇ ವೃತ್ತಿಯಲ್ಲಾಗಲಿ ಬದ್ದತೆಯಿದ್ದಾಗ ಮಾತ್ರ ಯಶಸ್ಸು ಕಾಣಲು ಸಾಧ್ಯ ಎಂದು ಹೇಳಿದರು.





