ಲಾರಿ ಕಾರುಗಳ ಮಧ್ಯೆ ಡಿಕ್ಕಿ ಓರ್ವ ಸಾವು ನಾಲ್ಕು ಜನರಿಗೆ ಗಾಯ
ಚಿತ್ರದುರ್ಗ, ನ04(ಸಂವಾ)-ಲಾರಿಗೆ ಎರಡು ಕಾರುಗಳು ಡಿಕ್ಕಿ ಹೊಡೆದ ಪರಿಣಾಮ ಓರ್ವ ಸಾವನ್ನಪ್ಪಿದ್ದು ಇಬ್ಬರು ಮಕ್ಕಳು ಸೇರಿದಂತೆ ನಾಲ್ಕು ಜನರಿಗೆ ಗಂಭೀರ ಗಾಯಗಳಾಗಿರುವ ಘಟನೆ ಹೊಳಲ್ಕೆರೆಯ ಹಳೇ ಹಳ್ಳಿ ಬಳಿ ನಡೆದಿದೆ.

ಚಿತ್ರದುರ್ಗ ಜಿಲ್ಲೆ ಹೊಳಲ್ಕೆರೆ ತಾಲೂಕಿನ ಹಳೆಹಳ್ಳಿ ಬಳಿ ಎರಡು ಕಾರುಗಳಲ್ಲಿ ಲಕ್ಕವಳ್ಳಿಗೆ ತೆರಳತ್ತಿದ್ದ ಒಂದೆ ಕುಟುಂಬದವರು, ಹೊಳಲ್ಕೆರೆ ಕಡೆಯಿಂದ ಚಿತ್ರದುರ್ಗದ ಕಡೆಗೆ ಬರುತ್ತಿದ್ದ ಲಾರಿ ಚಾಲಕನ ಅಜಾಗರೂಕತೆಯಿಂದ ಕಾರುಗಳು ಡಿಕ್ಕಿ ಹೊಡೆದಿವೆ.

ಅಪಘಾತದಲ್ಲಿ ಲಕ್ಕವಳ್ಳಿಯ ಶಂಭಪ್ಪ(48) ಮೃತಪಟ್ಟ ದುರ್ದೈವಿಯಾಗಿದ್ದಾರೆ. ನಾಲ್ಕು ಜನರಿಗೆ ಗಂಭೀರ ಗಾಯಗಳಾಗಿದ್ದು ಅವರನ್ನು ಹೊಳಲ್ಕೆರೆ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಕಾರುಗಲು ನುಜ್ಜುಗಜ್ಜಾಗಿವೆ. ಸ್ಥಳಕ್ಕೆ ಹೊಳಲ್ಕೆರೆ ಸಿಪಿಐ ರವೀಶ್ ಬೇಟಿ ನೀಡಿ ಪರಿಶೀಲಿಸಿ ಪ್ರರಣ ದಾಖಲಿಸಿಕೊಂಡಿದ್ದಾರೆ.
ಸಂಯುಕ್ತವಾಣಿ
ಡಿ.ಕುಮಾರಸ್ವಾಮಿ




