Close Menu
Samyukta VaaniSamyukta Vaani
  • ಮುಖಪುಟ
  • ರಾಜ್ಯ
  • ಜಿಲ್ಲಾ ಸುದ್ದಿ
  • ರಾಜಕೀಯ
  • ದೇಶ
  • ಕ್ರೈಂ
  • ಸಿನೆಮಾ
  • ಕ್ರೀಡೆ
  • ಆರೋಗ್ಯ
Facebook X (Twitter) Instagram YouTube WhatsApp Telegram
Facebook X (Twitter) Instagram
Samyukta VaaniSamyukta Vaani
  • ಮುಖಪುಟ

    ಹುಚ್ಚೆಬ್ಬಿಸುತ್ತಿರುವ 45 ಸಿನಿಮಾ ಆಫ್ರೋ ಟಪಾಂಗ್  ಸಾಂಗ್ 

    December 3, 2025

    ರಾಜ್ಯದ ಕಾಂಗ್ರೆಸ್ ಸರ್ಕಾರ ಜನವಿರೋಧಿ ಸರ್ಕಾರ: ವಿಪ ನಾಯಕ ಛಲವಾದಿ ನಾರಾಯಣಸ್ವಾಮಿ

    November 30, 2025

    ಮುರುಘಾ ಶರಣರು ನಿರ್ದೋಷಿ: ಪೋಕ್ಸೋ ಪ್ರಕರಣದ 1,2ಮತ್ತು3 ಆರೋಪಿಗಳ ಬಿಡುಗಡೆ

    November 26, 2025

    Madnix Casino No Deposit Bonus 100 Free Spins

    November 19, 2025

    Play Rummy 500 Online Uk

    November 19, 2025
  • ರಾಜ್ಯ

    ಹುಚ್ಚೆಬ್ಬಿಸುತ್ತಿರುವ 45 ಸಿನಿಮಾ ಆಫ್ರೋ ಟಪಾಂಗ್  ಸಾಂಗ್ 

    December 3, 2025

    ರಾಜ್ಯದ ಕಾಂಗ್ರೆಸ್ ಸರ್ಕಾರ ಜನವಿರೋಧಿ ಸರ್ಕಾರ: ವಿಪ ನಾಯಕ ಛಲವಾದಿ ನಾರಾಯಣಸ್ವಾಮಿ

    November 30, 2025

    ಮುರುಘಾ ಶರಣರು ನಿರ್ದೋಷಿ: ಪೋಕ್ಸೋ ಪ್ರಕರಣದ 1,2ಮತ್ತು3 ಆರೋಪಿಗಳ ಬಿಡುಗಡೆ

    November 26, 2025

    ಛಲವಿದ್ದರೆ ಏನಾದರೂ ಸಾಧಿಸಬಹದು

    November 17, 2025

    ಪ್ರತಿಭೆಯಿದ್ದರೆ ಏನ್ನಾದರೂ ಸಾಧಿಸಬಹುದು ಎನ್ನುವುದಕ್ಕೆ ಇವರೇ ಸಾಕ್ಷಿ

    November 16, 2025
  • ಜಿಲ್ಲಾ ಸುದ್ದಿ
  • ರಾಜಕೀಯ
  • ದೇಶ
  • ಕ್ರೈಂ
  • ಸಿನೆಮಾ
  • ಕ್ರೀಡೆ
  • ಆರೋಗ್ಯ
  • ಮುಖಪುಟ
  • ರಾಜ್ಯ
  • ಜಿಲ್ಲಾ ಸುದ್ದಿ
  • ರಾಜಕೀಯ
  • ದೇಶ
  • ಕ್ರೈಂ
  • ಸಿನೆಮಾ
  • ಕ್ರೀಡೆ
  • ಆರೋಗ್ಯ
Samyukta VaaniSamyukta Vaani
Home»ರಾಜ್ಯ»ಹೊಳಲ್ಕೆರೆ ಸಾಹಿತ್ಯ ಸಮ್ಮೇಳನಕ್ಕೆ ಜಾತಿ ಸೋಂಕು ಪೀಲಾಪುರ ಕಂಠೇಶರಿಂದ ದಿಕ್ಕಾರದ ಕೂಗು
ರಾಜ್ಯ

ಹೊಳಲ್ಕೆರೆ ಸಾಹಿತ್ಯ ಸಮ್ಮೇಳನಕ್ಕೆ ಜಾತಿ ಸೋಂಕು ಪೀಲಾಪುರ ಕಂಠೇಶರಿಂದ ದಿಕ್ಕಾರದ ಕೂಗು

D KumaraswamyBy D KumaraswamyMarch 25, 2025No Comments2 Mins Read
Facebook Twitter Pinterest LinkedIn Tumblr WhatsApp VKontakte Email
Share
Facebook Twitter LinkedIn Pinterest Email

 

ಹೊಳಲ್ಕೆರೆ ಸಾಹಿತ್ಯ ಸಮ್ಮೇಳನಕ್ಕೆ ಜಾತಿ ಸೋಂಕು ಪೀಲಾಪುರ ಕಂಠೇಶರಿಂದ ದಿಕ್ಕಾರದ ಕೂಗು

ಮಾ. 25 : ಹೊಳಲ್ಕೆರೆ ಯಲ್ಲಿ ದಿ 27ಮತ್ತು 28 ರಂದು ನಡೆಯಲಿರುವ ಚಿತ್ರದುಗ೯ ಜಿಲ್ಲಾ ಸಾಹಿತ್ಯ ಸಮ್ಮೇಳನ ಸ್ವಾಗತರ್ಹ ಆದರೆ, ಈ ಸಮ್ಮೇಳನದಲ್ಲಿ ಸಾಂಸ್ಕ್ರತಿಕ ರಾಯಬಾರಿಗಳೆಂದೆ ಗುರುತಿಸಲ್ಪಡುವ ಕನ್ನಡ ನಾಡು, ನುಡಿ , ನೆಲ , ಜಲ ,ಕಲೆ , ಸಂಸ್ಕೃತಿ , ಸಾಂಸ್ಕೃತಿವಾಗಿ ಶ್ರೀಮಂತ ಗೊಳಿಸಿ ,ಉಳಿಸಿ ಬೆಳೆಸಲು ತಮ್ಮ ಜೀವನದುದ್ದಕ್ಕೂ ನಿರಂತರವಾಗಿ ತಾಯಿ ಸೇವೆ ಮಾಡುತ್ತಾ ಪ್ರಗತಿಪರವಾಗಿ ಗುರುತಿಸಿ ಕೊಂಡಿರುವ ಜಿಲ್ಲೆಯ ಅನೇಕ ಕವಿಗಳು ,ಕಲಾವಿದರು ,
ಚಿಂತಕರನ್ನು ಗುರುತಿಸಿ ವೇದಿಕೆ ಕಲ್ಪಿಸಬೇಕಾಗಿದ್ದ ಜಿಲ್ಲಾಧ್ಯಕ್ಷ ಶಿವಸ್ವಾಮಿ ಸಮ್ಮೇಳನ ಆಶಯಕ್ಕೆ ವಿರೋಧ ಭಾಸವಾಗಿ ಅವೈಜ್ಞನಿಕವಾಗಿ ತಾಲ್ಲೂಕು ಅಧ್ಯಕ್ಷರುಗಳು ಸೇರಿ ಅವರಿಗೆ ಮನಸೋ ಇಚ್ಛೇಯಂತೆ ಸ್ಜಾಜಾತಿಯವರು ಬೇಕಾದವರನ್ನು ಕರೆದು ವೇದಿಕೆ ನೀಡಿದ್ದಾರೆ ಈ ಕಾರಣಕ್ಕೆ ಜಿಲ್ಲಾಧ್ಯಕ್ಷ ಶಿವಸ್ವಾಮಿಗೆ ನನ್ನ ಧಿಕ್ಕಾರ.
ನಾನು 1993 ಜನ ವಿಜ್ಞಾನಜಾಥಾ , ಭದ್ರಾ ಮೇಲ್ದಂಡೆ ಯೋಜನೆ ಜಾರಿಗೆ, ಜಾಥಾ , ಸಂಪೂರ್ಣ ಸಾಕ್ಷರತಾ ಆಂದೋಲನ ಕಾರ್ಯಕ್ರಮ, ಕನ್ನಡ ನಾಡು ಸಾಕ್ಷರ ನಾಡು ರಾಜ್ಯ ಮಟ್ಟದ ಕಾಲ್ನಡಿಗೆ ಜಾಥಾ ಕಲಾವಿದ ,ಬರಹಗಾರ ,ಹವ್ಯಾಸಿ ಪತ್ರಕರ್ತ ಅನೇಕ ಕತೆ ,ಕವನ ,ನಾಟಕ , ಲೇಖನ ಬರೆದಿದ್ದು, 75 ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳ ಸಂದರ್ಭದಲ್ಲಿ ಚಿತ್ರದುರ್ಗ ಜಿಲ್ಲಾ ದರ್ಶನ 6 ತಾಲ್ಲೂಕಿನ ಸಿಡಿಗೆ ದಾಖಲೀಕರಣ ಮಾಹಿತಿ ಗಾರನಾಗಿ ಸಾಹಿತ್ಯ ಸೇವೆ ಹೀಗೆ ಸರ್ಕಾರದ ಎಲ್ಲಾ ಇಲಾಖೆಗಳ ಯೋಜನೆಗಳ ಕಾರ್ಯಕ್ರಮ , ಆಕಾಶವಾಣಿ , ಹೋರಾಟ ಹಾಡುಗಳ ಧ್ವನಿ ಸುರುಳಿಯಲ್ಲಿ ಹಾಡಿದ್ದೇನೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಉತ್ತರ ಪ್ರದೇಶದ ಸಾರನಾಥ ,ಮಹಾರಾಷ್ಟದ ಪೂನ ,ಗಡಿ ನಾಡು ,ಹೊರನಾಡು ಉತ್ಸವಗಳು ಹೀಗೆ ಸುಮಾರು 40 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದನ್ನು ಗುರುತಿಸಿ ಜಿಲ್ಲಾಡಳಿತ 2017 ರಲ್ಲಿ ಕನ್ನಡ ರಾಜ್ಯೋತ್ಸವ ಪ್ರಶಸ್ತಿ, 2004 ರಲ್ಲಿ ಜಿಲ್ಲಾ ಯುವ ಪ್ರಶಸ್ತಿ, ಡಾ.ಪಂಡಿತ ಪುಟ್ಟ ರಾಜ ಗವಾಯಿಗಳವರ ಕೃಪ ಸತ್ಕಾರ ರಾಜ್ಯ ಪ್ರಶಸ್ತಿ ,ಸಂಘ , ಸಂಸ್ಥೆ ,ಮಠಾಧೀಶರು ಕರೆದು ನನ್ನ ಕಲೆಯನ್ನು ಮೆಚ್ಚಿ ,ಪ್ರೋತ್ಸಾಹಿಸಿ ಗೌರವಿಸಿರುವ ನಾನು ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಕಾರ್ಯದರ್ಶಿಯಾಗಿ ,ಅಬ್ದುಲ್ ನಜೀರ್ ಸಾಬ್ ರಾಜ್ಯ ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಸಂಸ್ಥೆ ಮೈಸೂರು ಇದರ ಅಡಿಯಲ್ಲಿ ರಾಜ್ಯ ಸಂಪನ್ಮೂಲ ವ್ಯಕ್ತಿಯಾಗಿ ಕನ್ನಡ ಜಾನಪದ ಪರಿಷತ್ ಜಿಲ್ಲಾ ಸಂಚಾಲಕನಾಗಿ ಜನರ ಮಧ್ಯೆ ಜನಪದ ಕಲಾವಿದನಾಗಿ ಬೀದಿ ನಾಟಕಗಳ ,ರಚನೆ ಮತ್ತು ನಿರ್ದೇಶಕ ನಾಗಿ ಸೇವೆ ಸಲ್ಲಿಸುತ್ತಿರುವ ನನಗೆ ಮತ್ತು ನನ್ನಂತ ಅನೇಕ ನಿಜ ಶರಣರು ಸೇವೆ ಸಲ್ಲಿಸುತ್ತಿದ್ದಾರೆ. ನಮ್ಮನ್ನು ನಮ್ಮ ಸೇವೆಯನ್ನು ಗಮನಿಸದೆ ಗೌಣ ಮಾಡಿ ,ಅನಾಧಾರಣೆ ಮಾಡಿ ಒಂದೆರಡು ಕಾರ್ಯಕ್ರಮ ಮಾಡಿದ ಬಾಲ ಬಡವರಿಗೆ ಅವಕಾಶ ನೀಡಿರುವ,ಜಾತಿ ಸೂತಕ ಛಾಯೆ ಮನಸ್ಥಿಯ ಶಿವಸ್ವಾಮಿಗೆ ನನ್ನ ಧಿಕ್ಕಾರವಿರಲಿ ಎಂದುಪೀಲಾಪುರ ಆರ್ ಕಂಠೇಶ್ ಆಕ್ರೋಶ ಹೊರ ಹಾಕಿದ್ದಾರೆ.

 

 

ಹೊಸದುರ್ಗ ತಾಲ್ಲೂಕು ಘಟಕದ ಅಧ್ಯಕ್ಷರ ನೇಮಕ ಸಂದರ್ಭದಲ್ಲಿ ಸಭೆ ಕರೆಯದೆ ಏಕಾಏಕಿ ಸ್ವ ಜಾತಿಯ ಪ್ರೇಮದಿಂದ ಹಾಲಿ ಅಧ್ಯಕ್ಷ ಓಂಕಾರಪ್ಪ ರನ್ನು ನೇಮಕ ಮಾಡಿದ್ದಲ್ಲದೆ, ಈಗ ಹೊಳಲ್ಕೆರೆ ತಾಲ್ಲೂಕಿನಲ್ಲಿ ನಡೆಯುತ್ತಿರುವ ಜಿಲ್ಲಾ ಸಮ್ಮೇಳನದಲ್ಲಿ ನಮ್ಮ ತಾಲ್ಲೂಕಿನ ಎಲ್ಲಾ ಜಾತಿ ಜನಾಂಗದ ಕಲಾವಿದರನ್ನು ಕಡೆಗಣಿಸಿ, ಅವರ ಜಾತಿಯವರಿಗೆ ಅವಕಾಶ ನೀಡಿ ಸ್ವಜಾತಿ ಪ್ರೇಮ ಮೆರೆದಿದ್ದಲ್ಲದೆ ,
ಇದನ್ನು ಪ್ರಶ್ನೆ ಮಾಡಿ ಅಸಮಧಾನ ತೋರಿ ತಾಲ್ಲೂಕು ಸಾಹಿತ್ಯ ಗ್ರೂಪ್ ಗೆ ಜಾನಪದ ಕಲಾವಿದ ಪೀಲಾಪುರ ಕಂಠೇಶ್ ಹಂಚಿದ್ದನ್ನು ನಾನು ಜಿಲ್ಲಾ ಸಾಹಿತ್ಯ ಗ್ರೂಪ್ ಗೆ ಶೇರ್ ಮಾಡಿರುವುದನ್ನು ಪ್ರಶ್ನೆ ಮಾಡಿ ಡಿಲಿಟ್ ಮಾಡುವಂತೆ ಧಮಕಿಹಾಕಿ ನಿಮ್ಮ ಮೇಲೆ ದೂರು ದಾಖಲಿಸುವುದಾಗಿ ಬೆದರಿಕೆ ಒಡ್ಡಿದ್ದಾರೆ.
ಮತ್ತೆ ಮುಂದುವರೆದು ಇದು ನಿಮ್ಮ ತಾಲ್ಲೂಕು ಅಧ್ಯಕ್ಷ ರು ಕೊಟ್ಟಿರುವ ಪಟ್ಟಿ ಪರಿಗಣಿಸಿದ್ದೇವೆ ನನ್ನದೇನು ತಪ್ಪಿಲ್ಲ ಎಂದು ಅಸಾಯಕತೆ ವ್ಯಕ್ತ ಪಡಿಸುತ್ತಿದ್ದಾರೆಂದು ಹೊಸದುರ್ಗದ ಕಲಾವಿದ ಚಂದ್ರು ಆರೋಪಿಸಿದ್ದಾರೆ.

ಚಂದ್ರು ಕಲಾವಿದ ಹೊಸದುರ್ಗ ತಾಲ್ಲೂಕು.

Share. Facebook Twitter Pinterest LinkedIn Tumblr WhatsApp Email
Previous Articleತಂಬಾಕು ನಿಯಂತ್ರಣ ಕಾರ್ಯಾಚರಣೆ ನಿಗಧಿತ ಗುರಿ ಪೂರ್ಣಗೊಳಿಸಿ
Next Article ರಸಗೊಬ್ಬರ ಕೊರತೆ ಉಂಟಾಗದಂತೆ ಕ್ರಮ ವಹಿಸಿ- ಡಿ.ಸಿ. ವೆಂಕಟೇಶ್ ಸೂಚನೆ
D Kumaraswamy
  • Tumblr

Related Posts

ಹುಚ್ಚೆಬ್ಬಿಸುತ್ತಿರುವ 45 ಸಿನಿಮಾ ಆಫ್ರೋ ಟಪಾಂಗ್  ಸಾಂಗ್ 

December 3, 2025

ರಾಜ್ಯದ ಕಾಂಗ್ರೆಸ್ ಸರ್ಕಾರ ಜನವಿರೋಧಿ ಸರ್ಕಾರ: ವಿಪ ನಾಯಕ ಛಲವಾದಿ ನಾರಾಯಣಸ್ವಾಮಿ

November 30, 2025

ಮುರುಘಾ ಶರಣರು ನಿರ್ದೋಷಿ: ಪೋಕ್ಸೋ ಪ್ರಕರಣದ 1,2ಮತ್ತು3 ಆರೋಪಿಗಳ ಬಿಡುಗಡೆ

November 26, 2025

ಛಲವಿದ್ದರೆ ಏನಾದರೂ ಸಾಧಿಸಬಹದು

November 17, 2025
Leave A Reply Cancel Reply

Recent Posts
  • ಹುಚ್ಚೆಬ್ಬಿಸುತ್ತಿರುವ 45 ಸಿನಿಮಾ ಆಫ್ರೋ ಟಪಾಂಗ್  ಸಾಂಗ್ 
  • ರಾಜ್ಯದ ಕಾಂಗ್ರೆಸ್ ಸರ್ಕಾರ ಜನವಿರೋಧಿ ಸರ್ಕಾರ: ವಿಪ ನಾಯಕ ಛಲವಾದಿ ನಾರಾಯಣಸ್ವಾಮಿ
  • ಮುರುಘಾ ಶರಣರು ನಿರ್ದೋಷಿ: ಪೋಕ್ಸೋ ಪ್ರಕರಣದ 1,2ಮತ್ತು3 ಆರೋಪಿಗಳ ಬಿಡುಗಡೆ
  • Madnix Casino No Deposit Bonus 100 Free Spins
  • Play Rummy 500 Online Uk
  • Skrill Casino 5 Pounds
Categories
  • Business
  • Politics
  • ಆರೋಗ್ಯ
  • ಕ್ರೀಡೆ
  • ಕ್ರೈಂ
  • ಜಿಲ್ಲಾ ಸುದ್ದಿ
  • ದೇಶ
  • ರಾಜಕೀಯ
  • ರಾಜ್ಯ
  • ಸಿನೆಮಾ
ADVERTISEMENT
Samyukta Vaani
Facebook X (Twitter) Instagram YouTube WhatsApp
© 2025 SAMYUKTAVAANI Designed by WEBGAUGE.

Type above and press Enter to search. Press Esc to cancel.