ಚಿತ್ರದುರ್ಗ,ಆ.09:ಬೆಳ್ಳಂಬೆಳಗ್ಗೆ ವಾಯು ವಿಹಾರಕ್ಕೆಂದು ಹೋಗುತ್ತಿದ್ದ ಮಹಿಳೆಯ ಕೊರಳಿನಲ್ಲಿದ್ದ ಮಾಂಗಲ್ಯ ಸರವನ್ನು ಸರಗಳ್ಳರು ಎಗರಿಸಿ ಪರಾರಿಯಾಗಿರುವ ಘಟನೆ ಚಿತ್ರದುರ್ಗದ ಆದಿ ಜಾಂಬವ ಬಡಾವಣೆ ಹಳೆ ಗೃಹ ಮಂಡಳಿ ಕಚೇರಿ ಬಳಿ ನಡೆದಿದೆ.
ಮಹಿಳೆ ನಿವೇದ ಬೆಳಗ್ಗೆ ವಾಯು ವಿಹಾರಕ್ಕೆಂದು ಹೊರಟಿದ್ದ ಸಮಯದಲ್ಲಿ ಬೈಕ್ ನಲ್ಲಿ, ಹೆಲ್ಮೆಟ್ ಧರಿಸಿ ಬಂದಿದ್ದ ಸರಗಳ್ಳರು ಅಡ್ರೆಸ್ ಕೇಳುವ ನೆಪದಲ್ಲಿ ಮಾತಾಡಿಸಿ, ಮಾಂಗಲ್ಯ ಸರ ಎಗರಿಸಿಕೊಂಡು ಪರಾರಿಯಾಗಿದ್ದಾರೆ. ವಿಷಯ ತಿಳಿಸಿದ ಬಡಾವಣೆ ಠಾಣೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.





