ಚಿತ್ರದುರ್ಗ: ನಾನು ಸಂಸದನಾಗಿರುವಾಗಲೇ
ವಾಣಿ ವಿಲಾಸ ಸಾಗರಕ್ಕೆ ನೀರು ಬಂದಿತ್ತು.ಅದರೆ ನಾವು ನೀರು ತಂದಿದ್ದು ಎಂದು ಹೇಳಿಕೊಂಡ ಬಿಜೆಪಿ ಸಂಸದರು ಈಗ ದಾವಣಗೆರೆ ತುಮಕೂರು ನೇರ ರೈಲ್ವೇ ಮಾರ್ಗವನ್ನು ತರಲಿ ಎಂದು ಮಾಜಿ ಸಂಸದ ಬಿ.ಎನ್. ಚಂದ್ರಪ್ಪ ಹಾಲಿ ಸಂಸದ ನಾರಾಯಣಸ್ವಾಮಿಗೆ ಹೆಸರು ಹೇಳದಲೇ ಪರೋಕ್ಷವಾಗಿ ಸವಾಲೆಸೆದರು.

ಕೋಟೆ ನಾಡು ಚಿತ್ರದುರ್ಗಕ್ಕೆ ದಾವಣಗೆರೆ ತುಮಕೂರು ನೇರ ರೈಲ್ವೇ ಮಾರ್ಗವೂ ತುಂಬಾ ಅವಶ್ಯಕತೆ ಇದೆ. ನಾನು ಸಂಸದನಾದಾಗ. ನೂರಾರು ಭಾರಿ ಸಭೆಯನ್ನು ಮಾಡಿದ್ದೆವೆ. ಆದರೆ ಇದುವರೆಗೂ ರೈಲ್ವೇ ಹಾಗೂ ರೆವೆನ್ಯೂ ಇಲಾಖೆ ಅಧಿಕಾರಿಗಳೊಂದಿಗೆ ಒಂದು ಸಭೆಯೂ ದಾವಣಗೆರೆ ಹಾಗೂ ಚಿತ್ರದುರ್ಗ ಸಂಸದರಿಂದ ನಡೆದಿಲ್ಲ. ಇನ್ನು ಮುನಿಯಪ್ಪ ಅವರು ರೈಲ್ವೇ ಮಂತ್ರಿಗಳಾಗಿದ್ದಾಗ ರಾಜ್ಯದಲ್ಲಿ ಯಡಿಯೂರಪ್ಪ ಸಿಎಂ ಆಗಿದ್ದು, ಆಗ ಇಬ್ಬರು ಐವತ್ತು ಐವತ್ತು ಎಂದು ಒಡಂಬಡಿಕೆಯಾಗಿತ್ತು. ಅದರಂತೆ ಯಡಿಯೂರಪ್ಪ ಅವರು ಕೆಲಸ ಮಾಡಬೇಕು. ಅವರ ಮೇಲೆ ಹೆಚ್ಚಿನ ಜವಾಬ್ದಾರಿ ಇದೆ. ಈಗಲೂ ಯಡಿಯೂರಪ್ಪ ಸಿಎಂ ಆಗಿದ್ದಾರೆ. ಬೋರ್ಡ್ ನಿಗಮ ಕಾರ್ಪೋರೇಷನ್ ಎಂದು ದುಂದು ವೆಚ್ಚ ಮಾಡುತ್ತಿದ್ದಾರೆ. ಇಲ್ಲಿ ಯಾವುದೇ ಅಭಿವೃದ್ದಿ ಕೆಲಸಗಳು ಆಗುತ್ತಿಲ್ಲ. ಅವರಿಗೆ ಬದ್ದತೆ ಇದ್ದರೆ ಈ ಕಾರ್ಯವನ್ನು ಕೈಗೆತ್ತಿಕೊಳ್ಳಲಿ ಇದರಿಂದ ಬೆಂಗಳೂರಿನ ಪ್ರಯಾಣ ನಮಗೆ ೨೦೦ ಕಿಲೋ ಮೀಟರ್ ಉಳಿತಾಯವಾಗುತ್ತದೆ. ವಾಣಿ ವಿಲಾಸ ಸಾಗರಕ್ಕೆ ಸಿದ್ದರಾಮಯ್ಯ ಇದ್ದಾಗ ನೀರು ಬಂತು ಆಗ ನಾವು ತಂದಿದ್ದೇವೆ ಎಂದು ಹೇಳಿಕೊಂಡವರು ಈಗ ರೈಲ್ವೇ ಮಾರ್ಗವನ್ನೂ ತರಲಿ ಇದರಿಂದ ಜಿಲ್ಲೆಯ ಅಭಿವೃದ್ದಿಗೆ ಕೂಡ ಸಹಕಾರಿಯಾಗುತ್ತದೆ. ರೈಲ್ವೇ ಮಾರ್ಗವನ್ನು ತಂದು ನಾನು ತಂದೆ ಎಂದು ಹೇಳಿಕೊಳ್ಳಲಿ. ಇದುವರೆಗೂ ಒಂದು ಮಾತನ್ನು ಆಡುತ್ತಿಲ್ಲ. ಸಂಸದರು ಕೂಡಲೇ ರೈಲ್ವೇ ಯೋಜನೆ ತರಲುಮುಂದಾಗಬೇಕು ಎಂದು ಮಾಜಿ ಸಂಸದ ಚಂದ್ರಪ್ಪ ಒತ್ತಾಯಿಸಿದರು
ಸಂಯುಕ್ತವಾಣಿ




