ಚಿತ್ರದುರ್ಗ, ಸರಣಿ ಅಪಘಾತದಲ್ಲಿ ಮೂರು ಜನರು ಮೃತರಾಗಿದ್ದು ಇಬ್ಬರು ಗಂಭೀರವಾಗಿ ಗಾಯಗೊಂಡ ಇರುವ ಘಟನೆ ಹಿರಿಯೂರಿನ ಕೆ ಆರ್ ಹಳ್ಳಿ ಗೇಟ್ ಬಳಿ ನಡೆದಿದೆ.

ಮೃತರನ್ನು ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲೂಕಿನ ಹೊಸದುರ್ಗದ ನಿವಾಸಿ ನೇಮಿರಾಜ್ (58) ಮಹಿಳೆ ನಂದಾ(53)ರಂಗ(35)ಎಂದು ಗುರುತಿಸಲಾಗಿದೆ. ಟಾಟಾ ಸಫಾರಿ ಡಿವೈಡರ್ ದಾಟಿ ಕ್ಯಾಂಟರ್ ಗೆ ಡಿಕ್ಕಿ ಹಿಡೆದ ಬಳಿಕ ಚಿತ್ರದುರ್ಗ ಮಾರ್ಗವಾಗಿ ಬೆಂಗಳೂರಿಗೆ ತೆರಳುತ್ತಿದ್ದ ಇಟಿಯೋಸ್ ಕಾರಿಗೆ ಡಿಕ್ಕಿಯಾಗಿದೆ.
ಗಾಯಗೊಂಡ ಇಬ್ಬರನ್ನು ಹಿರಿಯೂರು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಹಿರಿಯೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸಂಯುಕ್ತವಾಣಿ





