Chitradurga full lockbdown

ಬಿಜೆಪಿಯಲ್ಲಿ ನಾಯಕತ್ವ ಬದಲಾವಣೆ ? ಅರುಣ್ ಸಿಂಗ್ ಸಂಚಲನ

ಜಿಲ್ಲಾ ಸುದ್ದಿ ರಾಜಕೀಯ ರಾಜ್ಯ

ಚಿತ್ರದುರ್ಗ: ರಾಜ್ಯದಲ್ಲಿ ಸಿಎಂ ಬದಲಾವಣೆಯ ವಿಚಾರ ತೀವ್ರ ಕುತೂಹಲವನ್ನು ಮೂಢಿಸಿದೆ.ಅರುಣ್ ಸಿಂಗ್ ಬಂದಿರುವ ಹಿನ್ನೆಲೆಯಲ್ಲಿ ಸಿಎಂ ಪರ ವಿರೋಧಿಗಳು ತಮ್ಮ ಹೇಳಿಕೆ ನೀಡಲು ಸಜ್ಜುಗೊಂಡಿದ್ದಾರೆ.

 

 

 

 

Chitradurga Ustuvari Arun singh visit

ಕೋರೋನಾ ಮಹಾಮಾರಿಯ ಅಟ್ಟಹಸದ ನಡುವೆಯೂ ರಾಜ್ಯದಲ್ಲಿ ಸಿಎಂ ಬದಲಾವಣೆಯ ಚರ್ಚೆಗಳು ಕೇಳಿ ಬಂದಿದ್ದವು. ಇದೀಗ ಇಂತಹ ವಿಷಯವನ್ನು ಚರ್ಚಿಸಲು ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಬೆಂಗಳೂರಿಗೆ ಆಗಮಿಸಿದ್ದು ಮೂರು ದಿನಗಳ ಕಾಲ ಉಳಿದು ಎಲ್ಲವನ್ನು ಆಲಿಸಿ ವೀಕ್ಷಿಸಲಿದ್ದಾರೆ. ಅದರಂತೆ ಇಂದು ಅರುಣ್ ಸಿಂಗ್ ಸಂಜೆ ಸಭೆ ಕರೆಯಲಿದ್ದು, ಈಗಾಗಲೆ ಸಿಎಂ ವಿರೋಧಿ ಬಣದವರು ತಮ್ಮ ಕ್ಷೇತ್ರಗಳಿಗೆ ಅನುದಾನ ನೀಡಲು ತಾರತಮ್ಯ ಮಾಡುತ್ತಿದ್ದಾರೆ. ಇದರ ಜೊತೆಗೆ ನಮ್ಮನ್ನು ಕಡೆಗಣಿಸಿದ್ದಾರೆ‌. ಎಂದು ದೂರು ನೀಡಲು ಸಿದ್ದತೆ ಮಾಡಿಕೊಂಡಿದ್ದರೆ, ಇನ್ನು ಸಿಎಂ ಆಪ್ತ ಬಣವು ಸಿಎಂ ಬಿಎಸ್ ವೈ ಪರವಾಗಿ ಕೋರೋನಾ ನಿಯಂತ್ರಣದ ವಿಚಾರದಲ್ಲಿ ಸಮರ್ಥವಾಗಿ ಕೆಲಸ ಮಾಡಿದ್ದಾರೆ. ಉತ್ತಮ ಕೆಲಸ , ಆಡಳಿತ ಮಾಡಿಕೊಂಡು ಹೋಗುತ್ತಿದ್ದಾರೆ. ಹೀಗೆ ತಮ್ಮ ನಾಯಕನ ಪರವಾಗಿ ವಿಚಾರ ಮಂಡಿಸಲು ಸಿದ್ದತೆ ಮಾಡಿಕೊಂಡಿದೆ. ಹೀಗೆ ಪರ ವಿರೋಧಿ ಬಣಗಳ ಆರೋಪ ಮತ್ತು ಪ್ರತ್ಯಾರೋಪ ಕೇಳಿ ಅರುಣ್ ಸಿಂಗ್ ಪಕ್ಷದಲ್ಲಿರುವ ಭಿನ್ನಮತ ಸರಿಪಡಿಸುತ್ತಾರೋ ಅಥವ ವಿರೋಧಿ ಬಣದ ಒತ್ತಡಕ್ಕೆ ಮಣಿಯುತ್ತಾರೋ, ಯಾವ ತೀರ್ಮಾನ ತೆಗೆದುಕೊಳ್ಳುತ್ತಾರೆ ಎಂಬುದು ಒಂದು ಕಡೆಯಾದರೆ
ಮತ್ತೊಂದೆಡೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀನ್ ನಾಯಕತ್ವ ಹಾಗೂ ಸಿಎಂ ಬದಲಾವಣೆ ಚರ್ಚೆ ಇಲ್ಲ ಇನ್ನೆರಡು ವರ್ಷಗಳ ಕಾಲ ಯಡಿಯೂರಪ್ಪ ಅವರೇ ಮುಂದುವರೆಯಲಿದ್ದಾರೆ. ಎಂದರೆ ಗ್ರಾಮೀಣಾಭಿವೃದ್ಧಿ ಸಚಿವ ಕೆ. ಎಸ್ ಈಶ್ವರಪ್ಪ ರಾಜ್ಯದಲ್ಲಿ ನಾಯಕತ್ವ ಹಾಗೂ ಸಿಎಂ ಬದಲಾದರೂ ಆಗಬಹುದು ಆದರೆ ಇದೆಲ್ಲವೂ ಹೈಕಮಾಂಡ್ ಗೆ ಬಿಟ್ಟಿದ್ದು ಎಂದು ಹೇಳಿದ್ದಾರೆ. ಇದೆಲ್ಲವನ್ನೂ ಆಲಿಸಲಿರುವ ಅರುಣ್ ಸಿಂಗ್ ನಡೆ ಯಾವ ರೀತಿ ಇರಲಿದೆ ಎಂಬುದೇ ಈಗಿನ ಕುತೂಹಲವಾಗಿದೆ.

ಸಂಯುಕ್ತವಾಣಿ

Leave a Reply

Your email address will not be published. Required fields are marked *