Close Menu
Samyukta VaaniSamyukta Vaani
  • ಮುಖಪುಟ
  • ರಾಜ್ಯ
  • ಜಿಲ್ಲಾ ಸುದ್ದಿ
  • ರಾಜಕೀಯ
  • ದೇಶ
  • ಕ್ರೈಂ
  • ಸಿನೆಮಾ
  • ಕ್ರೀಡೆ
  • ಆರೋಗ್ಯ
Facebook X (Twitter) Instagram YouTube WhatsApp Telegram
Facebook X (Twitter) Instagram
Samyukta VaaniSamyukta Vaani
  • ಮುಖಪುಟ

    ಹೊಸದುರ್ಗ: ಲಂಚ ಪಡೆಯುತ್ತಿದ್ದ ಬೆಸ್ಕಾಂ ಸೆಕ್ಷನ್ ಆಫೀಸರ್ ಲೋಕಾ ಬಲೆಗೆ

    January 31, 2026

    ಸರ್ವರಿಗೂ ನ್ಯಾಯ: 18 ವಕೀಲರ ‘ನ್ಯಾಯ’ ತಂಡದಿಂದ ಸಂವಿಧಾನ ಫೆಲೋಶಿಪ್ ನ ಮೂರನೇ ಆವೃತ್ತಿ ಆರಂಭ

    January 31, 2026

    ಮೀಸಲಾತಿ ಪ್ರಮಾಣ ಹೆಚ್ಚಳಅನಿವಾರ್ಯ ;ಎಚ್.ಆಂಜನೇಯ

    January 30, 2026

    ತಮಟಕಲ್ಲು ಬಳಿ ಭೀಕರ ಅಪಘಾತ ಇಬ್ಬರು ಸಾವು

    January 11, 2026

    ಲಾರಿ ಕಾರು ನಡುವೆ ಭೀಕರ ಅಪಘಾತ ನಾಲ್ವರ ಸಾವು

    January 11, 2026
  • ರಾಜ್ಯ

    ಸರ್ವರಿಗೂ ನ್ಯಾಯ: 18 ವಕೀಲರ ‘ನ್ಯಾಯ’ ತಂಡದಿಂದ ಸಂವಿಧಾನ ಫೆಲೋಶಿಪ್ ನ ಮೂರನೇ ಆವೃತ್ತಿ ಆರಂಭ

    January 31, 2026

    ಮೀಸಲಾತಿ ಪ್ರಮಾಣ ಹೆಚ್ಚಳಅನಿವಾರ್ಯ ;ಎಚ್.ಆಂಜನೇಯ

    January 30, 2026

    ಲಾರಿ ಕಾರು ನಡುವೆ ಭೀಕರ ಅಪಘಾತ ನಾಲ್ವರ ಸಾವು

    January 11, 2026

    ವೈದ್ಯಕೀಯ ಸ್ನಾತಕೋತ್ತರ ಶಿಕ್ಷಣಕ್ಕೆ ಪ್ರವೇಶಕ್ಕೆಒಳ ಮೀಸಲು ಸೌಲಭ್ಯ ಪಡೆದ ಮೊದಲ ವಿದ್ಯಾರ್ಥಿಗಳಿಂದ ಸಿಎಂ ಗೆ ಕೃತಜ್ಞತೆ

    January 8, 2026

    ಮರ್ಯಾದೆಗೇಡು ಹತ್ಯೆ ಜಿಎಸ್ ಮಂಜುನಾಥ್ ಸಾಂತ್ವಾನ

    January 6, 2026
  • ಜಿಲ್ಲಾ ಸುದ್ದಿ
  • ರಾಜಕೀಯ
  • ದೇಶ
  • ಕ್ರೈಂ
  • ಸಿನೆಮಾ
  • ಕ್ರೀಡೆ
  • ಆರೋಗ್ಯ
  • ಮುಖಪುಟ
  • ರಾಜ್ಯ
  • ಜಿಲ್ಲಾ ಸುದ್ದಿ
  • ರಾಜಕೀಯ
  • ದೇಶ
  • ಕ್ರೈಂ
  • ಸಿನೆಮಾ
  • ಕ್ರೀಡೆ
  • ಆರೋಗ್ಯ
Samyukta VaaniSamyukta Vaani
Home»ಜಿಲ್ಲಾ ಸುದ್ದಿ»ಬಸವಣ್ಣನ ಆಶಯ ಸದಾ ಪ್ರಸ್ತುತ: ಹೆಚ್. ಆಂಜನೇಯ
ಜಿಲ್ಲಾ ಸುದ್ದಿ

ಬಸವಣ್ಣನ ಆಶಯ ಸದಾ ಪ್ರಸ್ತುತ: ಹೆಚ್. ಆಂಜನೇಯ

D KumaraswamyBy D KumaraswamyMay 14, 2021No Comments1 Min Read
Facebook Twitter Pinterest LinkedIn Tumblr WhatsApp VKontakte Email
Chitradurga pakshabeda maretu development work madi
Share
Facebook Twitter LinkedIn Pinterest Email

 

 

ಚಿತ್ರದುರ್ಗ: ಜಾತಿ ವ್ಯವಸ್ಥೆ ನಾಶಗೊಂಡು, ಸಮ ಸಮಾಜ ನಿರ್ಮಾಣಗೊಂಡರೇ ಬಸವಣ್ಣನ ಜಯಂತಿಗೆ ಅರ್ಥಪೂರ್ಣತೆ ಬರಲಿದೆ ಎಂದು ಮಾಜಿ ಸಚಿವ ಎಚ್.ಆಂಜನೇಯ ಹೇಳಿದರು.

 

 

Chitradurga basavanna na ashaya sada prastuta
ಸೀಬಾರ ಸಮೀಪದಲ್ಲಿರುವ ತಮ್ಮ ಕಚೇರಿಯಲ್ಲಿ ತಾಲೂಕು ಕಾಂಗ್ರೆಸ್ ಎಸ್ಸಿ ಘಟಕದ ಶುಕ್ರವಾರ ಆಯೋಜಿಸಿದ್ದ ಜಯಂತ್ಯುತ್ಸವದಲ್ಲಿ ಬಸವಣ್ಣನ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿ, ಅನುಭವ ಮಂಟಪದ ಪರಿಕಲ್ಪನೆಯಲ್ಲಿಯೇ ಅಂಬೇಡ್ಕರ್ ರಚಿಸಿದ ಸಂವಿಧಾನ ಇರುವುದು ವಿಶೇಷ ಎಂದರು.
ಜಾತ್ಯಾತೀತ ಸಮಾಜ ನಿರ್ಮಾಣದ ಶಿಲ್ಪಿ ಬಸವಣ್ಣನ ಆಶಯ, ಆದರ್ಶಗಳು ಇಂದಿಗೂ ಪ್ರಸ್ತುತವಾಗಿವೆ. ಈ ಕಾರಣಕ್ಕೆ ನಮ್ಮಂತ ಶೋಷಿತ ವರ್ಗದವರು ರಾಜಕೀಯದಲ್ಲಿ ಉನ್ನತ ಸ್ಥಾನಮಾನ ಗಳಿಸಲು ಸಾಧ್ಯವಾಗಿದೆ ಎಂದು ಹೇಳಿದರು.
ಬುದ್ಧ, ಬಸವ, ಅಂಬೇಡ್ಕರ್, ಗಾಂಧಿ, ಪೈಗಂಬರ್, ಏಸು, ಸ್ವಾಮಿ ವಿವೇಕಾನಂದ ಸೇರಿ ಅನೇಕ ಮಹನೀಯರ ಆದರ್ಶಗಳು ಜಯಂತ್ಯುತ್ಸವಗಳನ್ನು ಹಬ್ಬದ ರೀತಿ ಎಲ್ಲರೂ ಒಗ್ಗೂಡಿ ಆಚರಿಸುವ ವಾತಾವರಣ ನಿರ್ಮಾಣವಾಗಬೇಕು. ಇವರೆಲ್ಲರ ಸಿದ್ಧಾಂತಗಳು ಅನುಷ್ಟಾನಕ್ಕೆ ತರುವ ಹೊಣೆಗಾರಿಕೆ ನಮ್ಮೆಲ್ಲರದ್ದು ಆಗಿದೆ. ಈ ಮೂಲಕ ಸಮ ಸಮಾಜ ನಿರ್ಮಾಣಕ್ಕೆ ಶ್ರಮಿಸಬೇಕು ಎಂದು ತಿಳಿಸಿದರು.
ಬಸವಣ್ಣನ ಚಿಂತನೆ ಫಲ ಇಂದು ಹೆಣ್ಣು ಮಕ್ಕಳು ಸಾಧನೆಯತ್ತ ಮುಖ ಮಾಡಲು ಸಾಧ್ಯವಾಗಿದೆ. ಶೋಷಿತ ವರ್ಗ ಮುಖ್ಯವಾಹಿನಿಗೆ ಬರಲು ಸಹಕಾರಿ ಆಗಿದೆ ಎಂದರು.
ಅಂಧಶ್ರದ್ಧೆ, ಮೌಢ್ಯಾಚಾರಣೆ, ಅಸಮಾನತೆ ವಿರುದ್ಧ ನಿರಂತರ ಹೋರಾಟ ನಡೆಸಿ, ವೈಜ್ಞಾನಿಕ ಸಮಾಜ ನಿರ್ಮಾಣದ ಕನಸು ಕಂಡಿದ್ದ ಬಸವಣ್ಣನ ಆದರ್ಶಗಳನ್ನು ಇಂದಿನ ಧರ್ಮಾಧಿಕಾರಿಗಳು, ಪ್ರಜ್ಞಾವಂತರು, ಚಿಂತಕರು ಅನುಷ್ಠಾನಕ್ಕೆ ತರುವ ಪ್ರಯತ್ನ ನಡೆಸುತ್ತಿದ್ದು, ಇದಕ್ಕೆ ಸರ್ವರ ಸಹಕಾರ ಅಗತ್ಯ ಎಂದು ಹೇಳಿದರು.
ಅರುಂಧತಿ ಆಂಜನೇಯ ಮಾತನಾಡಿ, ದಾರ್ಶಜನಿಕರು, ಸಾಧಕರನ್ನು ಜಾತಿ ಸಂಕೋಲೆಯಿಂದ ಹೊರ ತರುವ ಯುವ ಪೀಳಿಕೆಯ ದೊಡ್ಡ ಜವಾಬ್ದಾರಿ ಆಗಿದೆ ಎಂದರು.
ಕರೊನಾ ಮಾರ್ಗಸೂಚಿಯನ್ವಯ ಸರಳವಾಗಿ ಜಯಂತಿ ಆಚರಿಸಲಾಯಿತು. ವಿಜಯಮ್ಮ ಆಂಜನೇಯ, ಕಾಂಗ್ರೆಸ್ ಎಸ್ಸಿ ಘಟಕದ ತಾಲೂಕಾಧ್ಯಕ್ಷ ಅನಿಲ್ ಕೋಟಿ, ಪ್ರದೀಪ್, ರಂಗಸ್ವಾಮಿ, ವಿರುಪಾಕ್ಷಪ್ಪ, ರೇಖಾ ಇದ್ದರು.

ಸಂಯುಕ್ತವಾಣಿ

Share. Facebook Twitter Pinterest LinkedIn Tumblr WhatsApp Email
Previous Articleಕಾಂಗ್ರೆಸ್ ಪಕ್ಷದಿಂದ ನೂರು ಕೋಟಿ ಹಣ. ಘೋಷಣೆ ಯಾಕೆ
Next Article ಜಿಲ್ಲಾ ಉಸ್ತುವಾರಿ ಸಚಿವರ ಜಿಲ್ಲೆಯ ಕೋವಿಡ್ ಆಸ್ಪತ್ರೆ ಬಣ್ಣ ಬಯಲು
D Kumaraswamy
  • Tumblr

Related Posts

ಆಹಾರ ದಾನ ಸಮಾಜ ಸೇವೆ ಸಂಕೇತ:ಶ್ರೀ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ

June 25, 2025

ದೇವರಾಜ್ ಅರಸ್ ಶಿಕ್ಷಣ ಸಂಸ್ಥೆಗೆ ಅತ್ಯುತ್ತಮ ಫಲಿತಾಂಶ : ಅಭಿನಂದಿಸಿದ ಆಡಳಿತ ವರ್ಗ

May 14, 2025

ಮಲ್ಟಿ ಕ್ಯೂಸಿನ್ ಕುಕ್ ಅಭ್ಯರ್ಥಿಗಳಿಂದ ಮರು ಅರ್ಜಿ ಆಹ್ವಾನ

March 20, 2025

ಸಕಾಲ ಜಿಲ್ಲಾ ಮಾಹಿತಿ ತಂತ್ರಜ್ಞಾನ ಸಮಾಲೋಚಕರ ಹುದ್ದೆಗೆ ಅರ್ಜಿ ಆಹ್ವಾನ

March 20, 2025
Leave A Reply Cancel Reply

Recent Posts
  • ಹೊಸದುರ್ಗ: ಲಂಚ ಪಡೆಯುತ್ತಿದ್ದ ಬೆಸ್ಕಾಂ ಸೆಕ್ಷನ್ ಆಫೀಸರ್ ಲೋಕಾ ಬಲೆಗೆ
  • ಸರ್ವರಿಗೂ ನ್ಯಾಯ: 18 ವಕೀಲರ ‘ನ್ಯಾಯ’ ತಂಡದಿಂದ ಸಂವಿಧಾನ ಫೆಲೋಶಿಪ್ ನ ಮೂರನೇ ಆವೃತ್ತಿ ಆರಂಭ
  • ಮೀಸಲಾತಿ ಪ್ರಮಾಣ ಹೆಚ್ಚಳಅನಿವಾರ್ಯ ;ಎಚ್.ಆಂಜನೇಯ
  • ತಮಟಕಲ್ಲು ಬಳಿ ಭೀಕರ ಅಪಘಾತ ಇಬ್ಬರು ಸಾವು
  • ಲಾರಿ ಕಾರು ನಡುವೆ ಭೀಕರ ಅಪಘಾತ ನಾಲ್ವರ ಸಾವು
  • ವೈದ್ಯಕೀಯ ಸ್ನಾತಕೋತ್ತರ ಶಿಕ್ಷಣಕ್ಕೆ ಪ್ರವೇಶಕ್ಕೆಒಳ ಮೀಸಲು ಸೌಲಭ್ಯ ಪಡೆದ ಮೊದಲ ವಿದ್ಯಾರ್ಥಿಗಳಿಂದ ಸಿಎಂ ಗೆ ಕೃತಜ್ಞತೆ
Categories
  • Business
  • Politics
  • ಆರೋಗ್ಯ
  • ಕ್ರೀಡೆ
  • ಕ್ರೈಂ
  • ಜಿಲ್ಲಾ ಸುದ್ದಿ
  • ದೇಶ
  • ರಾಜಕೀಯ
  • ರಾಜ್ಯ
  • ಸಿನೆಮಾ
ADVERTISEMENT
Samyukta Vaani
Facebook X (Twitter) Instagram YouTube WhatsApp
© 2026 SAMYUKTAVAANI Designed by WEBGAUGE.

Type above and press Enter to search. Press Esc to cancel.