ಚಿತ್ರದುರ್ಗ: ಸಾರಿಗೆ ನೌಕರರನ್ನು ಮುಷ್ಕರ ಮಾಡುವಂತೆ ಪ್ರಚೋದಿಸಿ ಸಾರ್ವಜನಿಕ ಆಸ್ತಪಾಸ್ತಿ ನಷ್ಟ ಮಾಡುವಂತೆ ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ಮಾಡಿದ್ದಷ್ಟೆ ಅಲ್ಲದೆ ಮಾಜಿ ಸಿಎಂ ಕುಮಾರಸ್ವಾಮಿ ವಿರುದ್ಧ ಲಘುವಾಗಿ ಮಾತಾನಾಡಿರುವುದನ್ನು ಹಾಲಿ ಸಿಎಂ ಬಿಎಸ್ ಯಡಿಯೂರಪ್ಪ ಖಂಡಿಸಿದ್ದಾರೆ.

ಮುಷ್ಕರದಲ್ಲಿ ನೇತೃತ್ವ ವಹಿಸಿಕೊಂಡಿರುವ ರೈತ ಸಂಘದ ಮುಖಂಡ ಕೋಡಿ ಹಳ್ಳಿ ಚಂದ್ರ ಶೇಖರ್ ನೌಕರರನ್ನು ಪ್ರಚೋದಿಸಿದ್ದಾರೆ. ಇದರಿಂದ ಮುಷ್ಕರ ತೀವ್ರವಾಗಿದ್ದು ಸಾರ್ವಜನಿಕ ಆಸ್ತಿಪಾಸ್ತಿ ನಷ್ಟವಾಗಿದೆ.

ಇದಕ್ಕೆ ಕೋಡಿ ಹಳ್ಳಿ ಚಂದ್ರ ಶೇಖರ್ ಕಾರಣ ಕರ್ತರಾಗಿದ್ದಾರೆ ಎಂದು ಗಂಭೀರವಾಗಿ ಆರೋಪವನ್ನು ಸಿಎಂ ಯಡಿಯೂರಪ್ಪ ಮಾಡಿದ್ದಾರೆ.

ಅಷ್ಟೆ ಅಲ್ಲದೆ ಮಾಜಿ ಸಿಎಂ ಎಚ್ಡಿ ಕುಮಾರಸ್ವಾಮಿ ಅವರ ಬಗ್ಗೆಯೂ ಅತ್ಯಂತ ಲಘುವಾಗಿಯೂ ಮಾತನಾಡಿರುವುದು ಖಂಡನೀಯ ಎಂದು ಯಡಿಯೂರಪ್ಪ ಹೇಳುವ ಮೂಲಕ ಬಿಎಸ ವೈ ಇಂದು ಎಚ್ಡಿ ಕುಮಾರಸ್ವಾಮಿ ಬೆನ್ನಿಗೆ ನಿಂತಿದ್ದಾರೆ.
ಸಂಯುಕ್ತವಾಣಿ




