ಮುಖ್ಯ ಮಂತ್ರಿ ಪದಕ‌‌ ಪಡೆದ ಅಗ್ನಿಶಾಮಕ ಸಿಬ್ಬಂದಿ

ಜಿಲ್ಲಾ ಸುದ್ದಿ

ಡಿ.ಟಿ. ಮರುಳಸಿದ್ದಪ್ಪ ಮತ್ತು ಸಿದ್ದಪ್ಪ ರಾಮಪ್ಪ ಉಪ್ಪಾರ ಅವರಿಗೆ ಮುಖ್ಯಮಂತ್ರಿ ಪದಕ

ಚಿತ್ರದುರ್ಗ : ಜಿಲ್ಲೆಯ ಹೊಳಲ್ಕೆರೆ ಅಗ್ನಿಶಾಮಕ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪ್ರಮುಖ ಅಗ್ನಿಶಾಮಕರಾದ ಡಿ.ಟಿ. ಮರುಳಸಿದ್ದಪ್ಪ ಮತ್ತು ಅಗ್ನಿಶಾಮಕ ಚಾಲಕರಾದ ಸಿದ್ದಪ್ಪ ರಾಮಪ್ಪ ಉಪ್ಪಾರ ಅವರಿಗೆ ಮುಖ್ಯಮಂತ್ರಿ ಪದಕ ಲಭಿಸಿದೆ.

 

 

 

Chitradurga chief minister medal
ಡಿ.ಟಿ. ಮರುಳಸಿದ್ದಪ್ಪ ಮತ್ತು ಸಿದ್ದಪ್ಪ ರಾಮಪ್ಪ ಉಪ್ಪಾರ ಅವರು ಅಗ್ನಿ ಕರೆ, ವಿಶೇಷ ಕರೆ ಹಾಗೂ ಇನ್ನಿತರೆ ಚಟುವಟಿಕೆಗಳಲ್ಲಿ ಪ್ರಾಣದ ಹಂಗು ತೊರೆದು ಸಾರ್ವಜನಿಕರ ಆಸ್ತಿ-ಪಾಸ್ತಿ ಮತ್ತು ಪ್ರಾಣ ರಕ್ಷಣೆ ಮಾಡಿ ಉತ್ತಮ ಕಾರ್ಯನಿರ್ವಹಿಸಿದ ಸಲುವಾಗಿ 2019ನೇ ಸಾಲಿನ ಮುಖ್ಯ ಮಂತ್ರಿಗಳ ಪದಕಕ್ಕೆ ಭಾಜನರಾಗಿರುತ್ತಾರೆ.
ಡಿ.ಟಿ. ಮರುಳಸಿದ್ದಪ್ಪ ಅವರು ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲ್ಲೂಕಿನ ದಂಡಿಗನಹಳ್ಳಿ ಗ್ರಾಮದವರಾಗಿದ್ದಾರೆ. ಸಿದ್ದಪ್ಪ ರಾಮಪ್ಪ ಉಪ್ಪಾರ ಅವರು ಧಾರವಾಡ ಜಿಲ್ಲೆಯೆ ನವಲುಗುಂದ ತಾಲ್ಲೂಕು ಜಾವೂರು ಗ್ರಾಮದವರಾಗಿದ್ದಾರೆ.
ಮುಖ್ಯಮಂತ್ರಿಗಳ ಪದಕ ಪುರಸ್ಕಂತರಾದ ಡಿ.ಟಿ. ಮರುಳಸಿದ್ದಪ್ಪ ಮತ್ತು ಸಿದ್ದಪ್ಪ ರಾಮಪ್ಪ ಉಪ್ಪಾರ ಇವರಿಗೆ ದೊರೆತ ಅತ್ಯುನ್ನತ ಗೌರವಕ್ಕೆ ದಾವಣಗೆರೆ ವಲಯದ ಪ್ರಾದೇಶೀಕ ಅಗ್ನಿಶಾಮಕ ಅಧಿಕಾರಿಯವರು ಮತ್ತು ಚಿತ್ರದುರ್ಗ ಜಿಲ್ಲೆಯ ಅಗ್ನಿಶಾಮಕ ಅಧಿಕಾರಿಯವರು ಹಾಗೂ ದಾವಣಗೆರೆ ವಲಯದ ಎಲ್ಲಾ ಅಗ್ನಿಶಾಮಕ ಠಾಣೆಯ ಅಧಿಕಾರಿ ಮತ್ತು ಸಿಬ್ಬಂದಿಗಳು ಅಭಿನಂದನೆ ಸಲ್ಲಿಸಿರುತ್ತಾರೆ.

ಸಂಯುಕ್ತವಾಣಿ

Leave a Reply

Your email address will not be published. Required fields are marked *