ಚಿತ್ರದುರ್ಗ : ಸಚಿವ ಶ್ರೀರಾಮುಲು ಉಸ್ತುವಾರಿ ಜಿಲ್ಲೆಯ ಕೋವಿಡ್ ಆಸ್ಪತ್ರೆಯ ಬಣ್ಣ ಬಯಲು ಮಾಡಿದ ಸೋಂಕಿತ ವಕೀಲರಿಂದ ಸರ್ಕಾರ ಹಾಗೂ ಜಿಲ್ಲಾಡಳಿತದ ವಿರುದ್ಧ ಆಕ್ರೋಶ.

ಕೋವಿಡ್ ಆಸ್ಪತ್ರೆಯಲ್ಲಿ ಹೇಳೋರಿಗಳ ಕೇಳೋರಿಲ್ಲ, ಮೂರು ಮಂದಿ ಸತ್ತರೂ ಕ್ಯಾರೆ ಅನ್ನೋರಿಲ್ಲ ಎಂದು ಹೇಳಿ ವಿಡಿಯೋ ಮಾಡಿರುವ ವಕೀಲ ಹನುಮಂತರಾಜ್ ರಿಂದ ಕೋವಿಡ್ ಆಸ್ಪತ್ರೆಯ ನಿಜ ಬಣ್ಣ ಜಯಲಾಗಿದೆ. ಸರಿಯಾದ ಸಮಯಕ್ಕೆ ಊಟ ಗಂಜಿ ಇಲ್ಲ, ಎಂದು ಸೋಂಕಿತರು ಆಳಲು ವ್ಯಕ್ತಪಡಿಸುತ್ತಾರೆ. ವಕೀಲ ಹನುಮಂತರಾಜು ನಾನು ಎಂಟು ದಿನಗಳಾಗಿದೆ. ಸರಿಯಾದ ಚಿಕಿತ್ಸೆ ನೀಡುತ್ತಿಲ್ಲ. ಜಿಲ್ಲಾಧಿಕಾರಿ ಕವಿತಾ ಮನ್ನೀಕೇರಿ, ಜಿಲ್ಲಾ ಸರ್ಜನ್ ಡಾ. ಬಸವರಾಜ್ ವಿರುದ್ಧ ಸೋಂಕಿತರು ಗರಂ ಆಗಿದ್ದಾರೆ. ಸರ್ಕಾರವಷ್ಟೆ ಅಲ್ಲದೆ ಸಿಎಂ ಯಡಿಯೂರಪ್ಪ ಅವರನ್ನು ತರಾಟೆಗೆ ತೆಗೆದುಕೊಂಡ ಸೋಂಕಿತರು, ಇದೇನಾ ಯಡಿಯೂರಪ್ಪ ಇದೆನಾ ಮೋದಿ ಎಂದು ಸೋಂಕಿತರಿಂದ ಪ್ರಶ್ನೆ. ವಿರೋಧ ಪಕ್ಷದ ಸಿದ್ದರಾಮಯ್ಯ ಅವರೆ, ಗುಡುಗುತ್ತಿರಾ ಮಲಗುತ್ತಿರಾ ಎಂದು ಅವರ ಮೇಲೂ ಆಕ್ರೋಸ ವ್ಯಕ್ತಪಡಿಸಿದ್ದಾರೆ. ರಾಜ್ಯದಲ್ಲಿ ಜೀವಗಳಿಗೆ ಬೆಲೆಯೇ ಇಲ್ಲವಾಗಿದೆ. ರಾಜ್ಯದಲ್ಲಿ ನ್ಯಾಯ ಇದೆಯಾ ನಿಮಗೆ ಮಾನವೀಯತೆ ಇದೆಯಾ ಹೇಳಿ ಎಂದು ಪ್ರಶ್ನಿಸಿದ ಸೋಂಕಿತರು.
ಸಚಿವ ಶ್ರೀರಾಮುಲು ಬಂದು ನೋಡಿ, ಆಸ್ಪತ್ರೆ ಸ್ವಚ್ಚತೆ ಇಲ್ಲದೆ ಗಬ್ಬು ನಾರುತ್ತಿದೆ. ಯಾರೂ ತಿರುಗಿ ನೋಡುತ್ತಿಲ್ಲ . ಯಡಿಯೂರಪ್ಪನವರೇ ನೀವು ನಿಮ್ಮ ಮಕ್ಕಳು ಚನ್ನಾಗಿದಿರಾಲ್ವ ? ನಾವುಗಳು ನೋಡಿ ಹೇಗಿದಿವಿ ಅಂತ. ಕುಡಿಯುವ ನೀರು, ತಿಂಡಿ, ಏನೂ ಇಲ್ಲ. ದಯಮಾಡಿ ನೋಡಿ ಸರ್, ನಾವು ಬದುಕ್ತಿವೋ ಸಾಯಿತಿವೋ ಗೊತ್ತಿಲ್ಲ ಯಾರೂ ವೈದ್ಯರು ಬರ್ತಿಲ್ಲ ಎಂದು ಸೋಂಕಿತರು ಆತಂಕ ವ್ಯಕ್ತಪಡಿಸಿದರು. ನಾನೇನಾದ್ರೂ ಸತ್ತರೆ ನೀವುಗಳೆ ಹೊಣೆ ಎಂದು ಸೋಂಕಿತ ಹನುಮಂತರಾಜು ಆರೋಪ. ಸರಿಯಾದ ಚಿಕಿತ್ಸೆ ಸಿಗದೆ ಮನೆಗೆ ತೆರಳಿ ಚಿಕಿತ್ಸೆ ಪಡಯುತ್ತಿರುವ ಹನುಮಂತರಾಜು.
ಸಂಯುಕ್ತವಾಣಿ





