ಬೆಂಗಳೂರು: ರೈತರ ಐತಿಹಾಸಿಕ ಹೋರಾಟದ ವೇಳೆಯಲ್ಲಿ ನಡೆದ ಹಿಂಸಾಚಾರ ದುರಾದೃಷ್ಟಕರ ಎಂದು ಮಾಜಿ ಮುಖ್ಯ ಮಂತ್ರಿ ಹೆಚ್ ಡಿ ಕುಮಾರಸ್ಚಾಮಿ ಟ್ವೀಟ್ ಮಾಡಿದ್ದಾರೆ.
ರೈತರ ಸೋಗಿನಲ್ಲಿ ಅನ್ಯರು ಸೇರಿರಬಹುದು ರೈತರು ಇದನ್ನು ಸ್ಪಷ್ಟಪಡಿಸಿದ್ದಾರೆ. ನ್ಯಾಯವಾದ ತಮ್ಮ ಉದ್ದೇಶವನ್ನು ಈಡೇರಿಸಿಕೊಳ್ಳಲು ಚಳಿ ಗಾಳಿಯನ್ನು ಲೆಕ್ಕಿಸದೆ ಹೋರಾಡುತ್ತಿರುವ ರೈತರು ಇಂತಹ ಕೃತ್ಯಕ್ಕೆ ಕೈ ಹಾಕಲಾರರು ಎಂಬುದು ಸತ್ಯ. ನಿನ್ನೆಯ ಘಟನೆಗೆ ದೂಷಿಸುವಂತಹ ಹೇಳಿಕೆಗಳು ಅಭಿಪ್ರಾಯಗಳನ್ನು ಕೇಳಿಮನಸ್ಸಿಗೆ ನೋವಾಗಿದೆ. ಘಟನೆ ಹೇಗೆ ಯಾಕೆ ಆಯಿತು. ಘಾತಕ ಶಕ್ತಿಗಳು ಹೇಗೆ ಬಂದವು. ಎಂದು ತನಿಖೆಯಾಗದೆ ರೈತರನ್ನು ದೋಷಿಸುವುದು ಅಕ್ಷಮ್ಯ. ಕೆಂಪುಕೋಟೆಯ ಬಳಿ ನಡೆದ ಘಟನೆಯನ್ನು ಯಾರೂ ಕೂಡ ಯಾವುದೇ ರೈತರ ತಲೆಗೆ ಕಟ್ಟಬಾರದು ಎಂದು ಮನವಿ ಮಾಡಿದ್ದಾರೆ.
ಸಂಯುಕ್ತವಾಣಿ