ಚಿಕ್ಕಮಗಳೂರು: ವಿಧಾನ ಪರಿಷತ್ ನ ಉಸಭಾಪತಿ ಧರ್ಮೇಗೌಡ ರೈಲಿಗೆ ತಲೆ ಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದು ದೇಹ ಛಿದ್ರ ಛಿದ್ರವಾಗಿದೆ.
ಕಡೂರು ತಾಲೂಕಿ ಗುಣಸಾಗರದ ಬಳಿ ರೈಲಿಗೆ ತಲೆ ಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದಕ್ಕೂ ಮುನ್ನ ಗನ್ ಮ್ಯಾನ್ ಕಾರಿನ ಚಾಲಕ ಎಲ್ಲರನ್ನೂ ಕೂಡ ಮನೆಗೆ ಕಳುಹಿಸಿ ಕಾರಿನಲ್ಲಿ ಧರ್ಮೇಗೌಡ ಒಬ್ಬರೆ ಬಂದಿದ್ದಾರೆ. ಅಲ್ಲಿಂದ
ಕಡೂರಿನ ಸ್ನೇಹಿತರೊಬ್ಬರಿಗೆ ಮಾತನಾಡುತ್ತಾ ಜನಶತಾಬ್ಧಿ ರೈಲಿನ ಬಗ್ಗೆ ವಿಚಾರಿಸಿದ್ದಾರೆ. ಸ್ನೇಹಿತರಿಗೆ ಸುಮಾರು 5 ಬಾರಿ ದೂರವಾಣಿ ಕರೆ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ.

ರೈಲಿನ ಹಳಿಯ ಕಡೆಗೆ ಹೋಗಿ ಈ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅವರು ಬಹಳ ಹೊತ್ತು ಬಾರದೆ ಇದ್ದರಿಂದ ಅವರಿಗಾಗಿ ಹುಡುಕಾಟ ನಡೆಸಿದ್ದಾರೆ. ಆದರೆ ಅವರ ಮೃತ ದೇಹ ಗುಣಸಾಗರದ ರೈಲ್ವೇ ಟ್ರಾಕ್ ಬಳಿ 1.30 ರ ಸಮಯದಲ್ಲಿ ಪತ್ತೆಯಾಗಿದೆ. ಅವರು ಡೆತ್ ನೋಟ್ ನ್ನು ಬರೆದಿಟ್ಟಿದ್ದು, ಅದರಲ್ಲಿ ಆಸ್ತಿ ಹಂಚಿಕೆ, ಹಣಕಾಸು, ವಿಚಾರಗಳಿಗೂ ಸಂಬಂಧಿಸಿದಂತೆ ಉಲ್ಲೇಖಿಸಿದ್ದಾರೆ. ನಂತರ ಅವರು ಕಳೆದ ಕೆಲ ದಿನಗಳ ಹಿಂದೆ ಪರಿಷತ್ ನಲ್ಲಿ ಸಭಾಪತಿ ವಿಚಾರದಲ್ಲಿ ನಡೆದ ಗಲಾಟೆ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ.


ಇವರ ಅತ್ಮಹತ್ಯಗೆ ನಾಡಿನ ಗಣ್ಯರು ಸಂತಾಪ ಸೂಚಿಸಿದ್ದು, ಆತ್ಮಹತ್ಯೆ ಸರಿಯಾದ ಕಾರಣ ತಿಳಿದು ಬಾರದ ಹಿನ್ನೆಲೆಯಲ್ಲಿ ತನಿಖೆಯನ್ನು ನಡೆಸಬೇಕು ಎಂದು ಆಗ್ರಹಿಸಿದ್ದಾರೆ..
ಸಂಯುಕ್ತವಾಣಿ




