ಚಿತ್ರದುರ್ಗ: ಸಿದ್ದರಾಮಯ್ಯ ಎಲ್ಲಾ ಭಾಗ್ಯಗಳನ್ನು ಕೊಟ್ಟು ಕರ್ನಾಟಕಕ್ಕೆ ದೌರ್ಭಾಗ್ಯ ಕೊಟ್ಟಿದ್ದಾರೆ ಎಂದು ಸಂಸದ ಪ್ರತಾಪ್ ಸಿಂಹ ವ್ಯಂಗ್ಯವಾಡಿದರು.

ಚಿತ್ರದುರ್ಗದಲ್ಲಿಮಾಧ್ಯಮಗಳೊಂದಿಗೆ ಮಾತನಾಡಿ, ರಾಜ್ಯ ಸರ್ಕಾರ ದಿವಾಳಿಯಾಗಿದೆ ಎಂದು ಹೇಳುವ ನೈತಿಕತೆ ಸಿದ್ದರಾಮಯ್ಯಗೆ ಇಲ್ಲ. 2013 ರಲ್ಲಿ ಅವರು ಸಿಎಂ ಆದಾಗ ರಾಜ್ಯದ ಸಾಲ 1 ಲಕ್ಷದ 31 ಸಾವಿರ ಕೋಟಿ ಇತ್ತು. ಅವರು ಕುರ್ಚಿಯಿಂದ ಕೆಳಗೊಳಿಯುವ ವೇಳೆಗೆ 2018 ಕ್ಕೆ ಅದನ್ನು 2ಲಕ್ಷದ 86 ಸಾವಿರ ಕೋಟಿಯಷ್ಟು ಮಾಡಿದ್ದಾರೆ. ಒಟ್ಟು ಸಿಎಂ ಗಳು ಮಾಡಿದ ಸಾಲಕ್ಕೆ ಐದು ವರ್ಷದಲ್ಲಿ ಡಬಲ್ ಮಾಡಿದ ಕೆಟ್ಟ ಶ್ರೇಯಸ್ ಸಿದ್ದರಾಮಯ್ಯಗೆ ಸಲ್ಲಬೇಕು. 2.86 ಲಕ್ಷ ಸಾವಿರ ಕೋಟಿಯ ಸಾಲವನ್ನು ರಾಜ್ಯದ ಜನರ ತಲೆ ಮೇಲೆ ಎಳೆದಿದ್ದಾರೆ. ಎಲ್ಲಾ ಭಾಗ್ಯಗಳನ್ನು ಕೊಟ್ಟು ಕರ್ನಾಟಕಕ್ಕೆ ದೌರ್ಭಾಗ್ಯ ತಂದಿಟ್ಟಿದ್ದಾರೆ. ಅವರಿಗೆ ಈ ವಿಚಾರಗಳಬಗ್ಗೆ ಮಾತನಾಡುವ ಕನಿಷ್ಠ ನೈತಿಕ ಅರ್ಹತೆ ಇಲ್ಲ. 13 ಬಜೆಟ್ ಕೊಟ್ಟು ಪ್ರತೀ ಬಜೆಟ್ ನಲ್ಲೂ ಸಾಲಮಾಡಿ ಭಾಗ್ಯಗಳನ್ನು ಕೊಟ್ಟಂತವರು ಸಿದ್ದರಾಮಯ್ಯ ಎಂದು ಹೇಳಿದ್ದಾರೆ.
ಸಂಯುಕ್ತವಾಣಿ




