ಕೇಂದ್ರ ಬಜೆಟ್ ನ ಸಂಪೂರ್ಣ ಮಾಹಿತಿ ಇಲ್ಲಿದೆ

ದೇಶ

2021ನೇ ಸಾಲಿನ ಬಜೆಟ್ ನ ಮುಖ್ಯಾಂಶಗಳು*

ನವದೆಹಲಿ:  ಇದೇ ಮೊದಲ ಭಾರಿಗೆ ದೇಶದ ಇತಿಹಾಸದಲ್ಲಿ ಕಾಗದರಹಿತ ಬಜೆಟ್ ನ್ನು ಇಂದು ನಿರ್ಮಲಾ ಸೀತಾರಾಮನ್ ಮಂಡಿಸಿದ್ದು, ಆರ್‌ಬಿಐ ಕೈಗೊಂಡ ಕ್ರಮಗಳನ್ನು ಒಳಗೊಂಡಂತೆ ಎಲ್ಲಾ ಆತ್ಮ ನಿರ್ಭರ ಭಾರತ್ ಪ್ಯಾಕೇಜ್‌ಗಳ ಒಟ್ಟು ಆರ್ಥಿಕ ಮೊತ್ತವು ಸುಮಾರು 27.1 ಲಕ್ಷ ಕೋಟಿ ರೂ. ಆಗಿದ್ದು, ಇದು ಜಿಡಿಪಿಯ ಶೇಕಡಾ 13ಕ್ಕಿಂತ ಹೆಚ್ಚು ಎಂದು ಹೇಳಿದ ನಿರ್ಮಲಾ ಸೀತಾರಾಮನ್ 17 ಸಾವಿರ ಗ್ರಾಮೀಣ ವೆಲ್ ನೆಸ್ ಕೇಂದ್ರಗಳಿಗೆ ಬೆಂಬಲ ನೀಡುವುದಾಗಿ ಹೇಳಿದ್ದಾರೆ.

Chitradurga full budjet of central govt

ರಾಷ್ಟ್ರೀಯ ಸಾಂಕ್ರಾಮಿಕ ರೋಗ ನಿಯಂತ್ರಣ ಕೇಂದ್ರ ಘೋಷಣೆ, ಎಲ್ಲಾ ಜಿಲ್ಲೆಗಳಲ್ಲಿ ಉನ್ನತ ಮಟ್ಟದ ಲ್ಯಾಬ್ ನಿರ್ಮಾಣ, ಆರೋಗ್ಯ ಕ್ಷೇತ್ರದ ಮೇಲಿನ ಹೂಡಿಕೆ ಹೆಚ್ಚಳ, ಮೇ 2020 ರ, ಸರ್ಕಾರವು ಆತ್ಮನಿರ್ಭರ್ ಭಾರತ್ ಪ್ಯಾಕೇಜ್, ದೇಶದ ಮೇಲೆ ಪರಿಣಾಮ ಬೀರುವ ವಿಪತ್ತುಗಳ ದೃಷ್ಟಿಯಿಂದ, ಈ ಬಜೆಟ್ ಅನ್ನು ಹಿಂದೆಂದೂ ಕಂಡು ಕೇಳರಿಯದಂಥ, ವಿಶಿಷ್ಟ ಸನ್ನಿವೇಶದಲ್ಲಿ ಸಿದ್ಧಪಡಿಸಲಾಗಿದೆ ಎಂದು ಸೀತಾರಾಮನ್ ಹೇಳಿದ್ದಾರೆ.

ಭಾರತದಲ್ಲಿ ಈಗ ಪ್ರತಿ ಮಿಲಿಯನ್ ಜನಸಂಖ್ಯೆಗೆ 112 ರಂತೆ ಕೋವಿಡ್-19 ಸಾವಿನ ಪ್ರಮಾಣವನ್ನು ಹೊಂದಿದೆ ಮತ್ತು ಪ್ರತಿ ಮಿಲಿಯನ್‌ಗೆ 130 ರಷ್ಟು ಕಡಿಮೆ ಸಕ್ರಿಯ ಪ್ರಕರಣಗಳಿಗೆ ಇಳಿಕೆಯಾಗಿದೆ. ಆರ್ಥಿಕ ಪುನರುಜ್ಜೀವನ ಕಂಡುಬರುತ್ತಿದೆ, ಕೋವಿಡ್-19 ಲಸಿಕೆಗೆ 35 ಸಾವಿರ ಕೋಟಿ ರೂಪಾಯಿಗಳನ್ನು ಕೇಂದ್ರ ಸರ್ಕಾರ ನೀಡಿದೆ,
ಈ ಬಜೆಟ್ ಈ ದಶಕ ಆರಂಭದ ಮೊದಲ ಬಜೆಟ್. ಇದು ಮೊದಲ ಡಿಜಿಟಲ್ ಬಜೆಟ್ ಕೂಡ ಹೌದು ಎಂದು ಹೇಳಿದ್ದಾರೆ.

ಪ್ರಾಥಮಿಕ, ದ್ವಿತೀಯ ಮತ್ತು ತೃತೀಯ ಆರೈಕೆಯನ್ನು ಬಲಪಡಿಸಲು 64,180 ಕೋಟಿ ರೂ.ಗಳ ಮೌಲ್ಯದ ಪಿಎಂ ಆತ್ಮ ನಿರ್ಭರ ಸ್ವಸ್ಥ ಯೋಜನೆಯನ್ನು ಬಜೆಟ್ ನಲ್ಲಿ ನಿರ್ಮಲಾ ಸೀತಾರಾಮನ್ ಪ್ರಕಟಿಸಿದ್ದಾರೆ.

ಮಿಷನ್ ಪೋಷಣ್ 2.0’ ಘೋಷಣೆ, ಆರೋಗ್ಯ ವಲಯಕ್ಕೆ 2.23.846 ಕೋಟಿ ರೂ ಮೀಸಲು, ಪ್ರಧಾನಮಂತ್ರಿ ಆತ್ಮನಿರ್ಭರ ಸ್ವಸ್ಥ್ ಭಾರತ್ ಯೋಜನೆಗೆ 64,180 ಕೋಟಿ ರೂಪಾಯಿ ಅನುದಾನ, ಆರೋಗ್ಯಕ್ಕೆ  2.23.846 ಕೋಟಿ ಖರ್ಚು ಮಾಡಲು ಉದ್ದೇಶಿಸಿದ್ದೇವೆ. ಇದು ಶೇ 137ರಷ್ಟು ಹೆಚ್ಚಾಗಿದೆ. ಜವಳಿ ಪಾರ್ಕ್ ಗಳ ನಿರ್ಮಾಣ

ಮುಂದಿನ 3 ವರ್ಷಗಳಲ್ಲಿ ರೂ.20 ಸಾವಿರ ಕೋಟಿ ಆರಂಭಿಕ ಬಂಡವಾಳದ ಮೂಲಕ ಡಿಎಫ್ ಐ ಸ್ಥಾಪನೆ.

ಪಿಜಿಸಿಐಎಲ್ ಗೆ ಮೂಲ ಬಂಡವಾಳವಾಗಿ 7 ಸಾವಿರ ಕೋಟಿ

ಕೇರಳದಲ್ಲಿ 55 ಸಾವಿರ ಕೋಟಿ ರೂಪಾಯಿ ವೆಚ್ಚದಲ್ಲಿ 1,100 ಕಿ.ಮೀ ರಾಷ್ಟ್ರೀಯ ಹೆದ್ದಾರಿ ನಿರ್ಮಾಣ

ರಾಷ್ಟ್ರೀಯ ಹೆದ್ದಾರಿಗಳಿಗೆ 1 ಲಕ್ಷ 18 ಸಾವಿರ ಕೋಟಿ ರೂಪಾಯಿ ವೆಚ್ಚ

ತಮಿಳುನಾಡಿನಲ್ಲಿ 3.500 ಕಿಮೀ ರಾಷ್ಟ್ರೀಯ ಹೆದ್ದಾರಿ ನಿರ್ಮಾಣ

11 ಸಾವಿರ ಕಿ.ಮೀ ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಗುರಿ

ತಮಿಳುನಾಡಿನಲ್ಲಿ  3.500 ಕಿ.ಮೀ ರಾಷ್ಟ್ರೀಯ ಹೆದ್ದಾರಿ ನಿರ್ಮಾಣಕ್ಕೆ 1 ಲಕ್ಷ ಕೋಟಿ ರೂಪಾಯಿ ಹೂಡಿಕೆ

20 ವರ್ಷ ಹಳೆಯದಾದ ಎಲ್ಲಾ ವಾಹನಗಳನ್ನು ಸ್ಕ್ರಾಪ್ ಮಾಡಲು ಆದ್ಯತೆ, ವಾಹನ ಸ್ಕ್ರಾಪಿಂಗ್ ಯೋಜನೆಗೆ 4.12 ಲಕ್ಷ ಕೋಟಿ ರೂ

ಸ್ವಚ್ಚ ಭಾರತ್ 2.0 ಗೆ ಐದು ವರ್ಷಗಳಲ್ಲಿ 1,41,678 ಕೋಟಿ ರೂ. ವಿನಿಯೋಗಿಸುವುದಾಗಿ ವಿತ್ತ ಸಚಿವೆ ಘೋಷಣೆ

46 ಸಾವಿರ ಕಿಲೋ ಮೀಟರ್ ರೈಲ್ವೆ ಮಾರ್ಗವನ್ನು ವಿದ್ಯುದ್ದೀಕರಣ ಮಾಡಲಾಗಿದೆ
2023ರ ಡಿಸೆಂಬರ್ ಒಳಗೆ ಎಲ್ಲ ಬ್ರಾಡ್​ಗೇಜ್ ಹಳಿಗಳ ವಿದ್ಯುದೀಕರಣ ಪೂರ್ಣಗೊಳಿಸುವ ಭರವಸೆ.

ಬೆಂಗಳೂರು ಮುಂದಿನ ಹಂತದ ಮೆಟ್ರೋ ರೈಲ್ವೆ ಯೋಜನೆಗೆ 14,788 ಕೋಟಿ ರೂಪಾಯಿ

20,000 ಕೋಟಿ ರೂ.ಗಳ ವಿನಿಯೋಗದೊಂದಿಗೆ ಅಭಿವೃದ್ಧಿ ಹಣಕಾಸು ಸಂಸ್ಥೆಯನ್ನು ಸ್ಥಾಪಿಸುವ ಮಸೂದೆ ಮಂಡನೆಗೆ ಸರ್ಕಾರ ಚಿಂತನೆ

ಬೆಂಗಳೂರು ಮೆಟ್ರೋ ಫೇಸ್ 2ಎ, 2ಬಿಗೆ 14,788 ಕೋಟಿ ರೂಪಾಯಿ. 1,016 ಕಿಲೋ ಮೀಟರ್ ಮೆಟ್ರೋ ಮಾರ್ಗದ ಗುರಿ.

ಮಾರಕ ಕೋವಿಡ್ ಸಾಂಕ್ರಾಮಿಕದ ವಿರುದ್ಧ ಹೋರಾಟಕ್ಕೆ ತೊಡಗಿಸಿರುವ ಭಾರತ, ದೇಶಾದ್ಯಂತ ಕೋವಿಡ್ ಲಸಿಕೆ ವಿಚಾರಣೆಗೆ 35 ಸಾವಿರ ಕೋಟಿ ರೂ ಗಳನ್ನು ಮೀಸಲಿರಿಸಿದೆ.

ಈ ಹಣಕಾಸು ವರ್ಷದಿಂದ 5 ವರ್ಷಗಳವರೆಗೆ 1.97 ಲಕ್ಷ ಕೋಟಿ ರೂ.ಗಳ ವಿನಿಯೋಗದೊಂದಿಗೆ ಪಿಎಲ್ಐ ಯೋಜನೆ ಪ್ರಾರಂಭ

2022 ರಲ್ಲಿ ನ್ಯಾಷನಲ್ ಹೈಡ್ರೋಜನ್ ಎನರ್ಜಿ ಮಿಷನ್ ಗೆ  ಚಾಲನೆ

2021-22ನೇ ಸಾಲಿನ ಬಜೆಟ್ ಆರು ಆಧಾರ ಸ್ತಂಭಗಳನ್ನು ಹೊಂದಿದೆ. ಆರೋಗ್ಯ ಮತ್ತು ಸ್ವಾಸ್ಥ್ಯ, ಭೌತಿಕ ಮತ್ತು ಆರ್ಥಿಕ ಬಂಡವಾಳ ಮತ್ತು ಮೂಲಭೂತ ಸೌಕರ್ಯ, ಮಹಾತ್ವಾಕಾಂಕ್ಷೆಯ ಭಾರತಕ್ಕಾಗಿ ಆಂತರಿಕ ಬೆಳವಣಿಗೆ, ಮಾನವ ಬಂಡವಾಳ ಪುನರುಜ್ಜೀವನ, ನಾವೀನ್ಯತೆ, ಸಂಶೋಧನೆ ಮತ್ತು ಅಭಿವೃದ್ಧಿ, ಕನಿಷ್ಠ ಸರ್ಕಾರ ಮತ್ತು ಗರಿಷ್ಠ ಆಡಳಿತಗಳೇ ಆರು ಪ್ರಮುಖ ಆಧಾರ ಸ್ತಂಭಗಳಾಗಿವೆ.

ಆರು ವರ್ಷಗಳಲ್ಲಿ 2.8 ಕೋಟಿ ಮನೆಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲಾಗಿದೆ

ಹಳೆಯ ವಾಹನಗಳನ್ನು ಬದಲಿಸಲು ಸ್ವಯಂಪ್ರೇರಿತ ವಾಹನ ಸ್ಕ್ರ್ಯಾಪಿಂಗ್ ನೀತಿಯನ್ನು(voluntary vehicle scrapping policy) ಪ್ರಕಟಿಸಿದ ವಿತ್ತ ಸಚಿವೆ, ವೈಯಕ್ತಿಕ ವಾಹನಗಳಿಗೆ 20 ವರ್ಷಗಳ ನಂತರ ಫಿಟ್‌ನೆಸ್ ಪರೀಕ್ಷೆಗೆ ತೀರ್ಮಾನ

ಜಲ ಜೀವನ್ ಮಿಷನ್ 2.8 ಕೋಟಿ ಮನೆಗಳಿಗೆ ಟ್ಯಾಪ್ ಸಂಪರ್ಕವನ್ನು ನೀಡುವ ಉದ್ದೇಶವನ್ನು ಹೊಂದಿದ್ದು, 2.87 ಲಕ್ಷ ಕೋಟಿ ರೂ ಮೀಸಲು

ಬಂಡವಾಳ ವೆಚ್ಚವನ್ನು ಪೂರೈಸಲು ರಾಜ್ಯಗಳು ಮತ್ತು ಸ್ವಾಯತ್ತ ಸಂಸ್ಥೆಗಳಿಗೆ 2 ಲಕ್ಷ ಕೋಟಿ ರೂ.ಮೀಸಲು

ವಿಮೆಗಳಲ್ಲಿ ವಿದೇಶಿ ಬಂಡವಾಳ ಹೂಡಿಕೆ ಶೇ49 ರಿಂದ ಶೇ.74ಕ್ಕೆ  ಏರಿಕೆ

ವಾಯುಮಾಲಿನ್ಯದ ಸಮಸ್ಯೆಯನ್ನು ನಿಭಾಯಿಸಲು ಮಿಲಿಯನ್ ಗಿಂತಲೂ ಅಧಿಕ ಜನಸಂಖ್ಯೆಗೆ 42 ನಗರ ಕೇಂದ್ರಗಳಿಗೆ 2,217 ಕೋಟಿ ರೂಪಾಯಿ ಬಿಡುಗಡೆ

ಮುಂದಿನ ಹಣಕಾಸು ವರ್ಷಕ್ಕೆ ಬಂಡವಾಳ ವೆಚ್ಚವನ್ನು 5.54 ಲಕ್ಷ ಕೋಟಿಗಳಿಗೆ ಹೆಚ್ಚಿಸಲು ಪ್ರಸ್ತಾಪ. ಇದು ಕಳೆದ ವರ್ಷ 4.39 ಲಕ್ಷ ಕೋಟಿ ರೂ ನಷ್ಟಿತ್ತು.

1 ಸಾವಿರ ಹೊಸ ಗ್ಯಾಸ್ ಏಜೆನ್ಸಿಗಳಿಗೆ ಅವಕಾಶ, ಜಮ್ಮು ಕಾಶ್ಮೀರದಲ್ಲೂ ಗ್ಯಾಸ್ ಪೈಪ್ ಲೈನ್ ಅಳವಡಿಕೆಗೆ ನಿರ್ಧಾರ

ವಿಮಾ ಕಾಯ್ದೆಗೆ ತಿದ್ದುಪಡಿ. ಸೌರ ಶಕ್ತಿ ವಲಯಕ್ಕೆ 1 ಸಾವಿರ ಕೋಟಿ, ಮುಂದಿನ ಮೂರು ವರ್ಷಗಳಲ್ಲಿ 100 ಜಿಲ್ಲೆಗಳಲ್ಲಿ ಗ್ಯಾಸ್ ಪೈಪ್ ಲೈನ್ ಸ್ಥಾಪನೆ.

ಗೇಲ್ (ಇಂಡಿಯಾ) ಲಿಮಿಟೆಡ್, ಇಂಡಿಯನ್ ಆಯಿಲ್ ಕಾರ್ಪ್ (ಐಒಸಿ) ಮತ್ತು ಎಚ್‌ಪಿಸಿಎಲ್‌ನ ಪೈಪ್‌ಲೈನ್‌ಗಳನ್ನು ವಾಣಿಜ್ಯೀಕರಣ ಮಾಡಲಾಗುವುದು ಎಂದು 2021-22ರ ಬಜೆಟ್‌ ನಲ್ಲಿ ವಿತ್ತ ಸಚಿವೆ ಹೇಳಿದ್ದಾರೆ.

ಸಾರ್ವಜನಿಕ-ಖಾಸಗಿ ಸಹಭಾಗಿತ್ವದಲ್ಲಿ 2,000 ಕೋಟಿ ರೂ.ಗಿಂತ ಹೆಚ್ಚಿನ ಮೌಲ್ಯದ 7 ಬಂದರು ಯೋಜನೆಗಳನ್ನು ಪ್ರಕಟಿಸಿದ ಹಣಕಾಸು ಸಚಿವೆ

 

 

 

ಬಂಡವಾಳ ವೆಚ್ಚವನ್ನು ಪೂರೈಸಲು ರಾಜ್ಯಗಳು ಮತ್ತು ಸ್ವಾಯತ್ತ ಸಂಸ್ಥೆಗಳಿಗೆ 2 ಲಕ್ಷ ಕೋಟಿ ರೂ.ಗಳನ್ನು ನೀಡಲು ಕೇಂದ್ರ ತೀರ್ಮಾನ

ಗ್ರಾಹಕರ ಬಂಡವಾಳದ ಭದ್ರತಾ ವಿಮೆಯನ್ನು ಒಂದು ಲಕ್ಷದಿಂದ 5 ಲಕ್ಷಕ್ಕೆ ಏರಿಕೆ. ಬ್ಯಾಂಕ್ ಠೇವಣಿದಾರರ ವಿಮೆ ಮೊತ್ತ ಏರಿಕೆ.

ರೈಲ್ವೆಗಾಗಿ 1,10,055 ಕೋಟಿ ರೂ.ಗಳನ್ನು ಒದಗಿಸಲಾಗಿದೆ, ಅದರಲ್ಲಿ 2021-22ರಲ್ಲಿ ಬಂಡವಾಳ ವೆಚ್ಚಕ್ಕಾಗಿ 1,07,100 ಕೋಟಿ ರೂ ಸೇರಿದೆ.

ವಾಹನಗಳಿಗೆ ಸಿಎನ್‌ಜಿ ಒದಗಿಸುವ ನಗರ ಅನಿಲ ವಿತರಣಾ ಜಾಲ ಮತ್ತು ಇನ್ನೂ 100 ಜಿಲ್ಲೆಗಳಲ್ಲಿನ ಮನೆಗಳಿಗೆ ಅಡುಗೆ ಅನಿಲವನ್ನು ಪೈಪ್ ಮೂಲಕ ಒದಗಿಸಲಾಗುವುದು

ಕೃಷಿ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ನೀಡಲು ಕೇಂದ್ರ ಸರ್ಕಾರ ನಿರ್ಧಾರ ಬಜೆಟ್ ಮಂಡನೆ ವೇಳೆ ವಿತ್ತ ಸಚಿವೆ ಘೋಷಣೆ

ಹಸಿರು ವಿದ್ಯುತ್ ಮೂಲಗಳಿಂದ ಹೈಡ್ರೋಜನ್ ಉತ್ಪಾದಿಸಲು ಮುಂದಿನ ಹಣಕಾಸು ವರ್ಷದಲ್ಲಿ ಹೈಡ್ರೋಜನ್ ಎನರ್ಜಿ ಮಿಷನ್ ಪ್ರಾರಂಭಿಸಲು ಸರ್ಕಾರ ಪ್ರಸ್ತಾಪ

ವಿಧಾನಸಭೆ ಚುನಾವಣೆ ಹೊಸ್ತಿಲಲ್ಲಿರುವ ಪಶ್ಚಿಮ ಬಂಗಾಳದಲ್ಲಿ 25 ಸಾವಿರ ಕೋಟಿ ವೆಚ್ಚದ ರಸ್ತೆ ಯೋಜನೆಗಳನ್ನು ಪ್ರಕಟಿಸಿದ ನಿರ್ಮಲಾ ಸೀತಾರಾಮನ್

ಉಚಿತ ಅಡುಗೆ ಅನಿಲ ಎಲ್‌ಪಿಜಿ ಯೋಜನೆ “ಉಜ್ವಲ” 1 ಕೋಟಿ ಹೆಚ್ಚು ಫಲಾನುಭವಿಗಳಿಗೆ ವಿಸ್ತರಣೆಗೆ ತೀರ್ಮಾನ.

ಎಲ್ ಐಸಿ ಷೇರುಗಳನ್ನು ಷೇರು ಮಾರುಕಟ್ಟೆಯಲ್ಲಿ ಬಿಡುಗಡೆ

ಕೃಷಿಕರ ಆದಾಯವನ್ನು ದುಪ್ಪಟ್ಟುಗೊಳಿಸಲು ಸರ್ಕಾರದಿಂದ ಹಲವು ಕ್ರಮಗಳು

ನಗರ ಸ್ವಚ್ಛ ಭಾರತ್ ಮಿಷನ್ ಯೋಜನೆಯಡಿ 2021 ರಿಂದ 5 ವರ್ಷಗಳಲ್ಲಿ 1,41,678 ಕೋಟಿ ರೂಪಾಯಿ ಮೀಸಲು

ಭಾರತದಲ್ಲಿ ವ್ಯಾಪಾರಿ ಹಡಗುಗಳ ಫ್ಲ್ಯಾಗಿಂಗ್ ಅನ್ನು ಉತ್ತೇಜಿಸುವ ಯೋಜನೆ ಇದ್ದು ಇದಕ್ಕಾಗಿ ಸಬ್ಸಿಡಿ ಬೆಂಬಲವನ್ನು ನೀಡುವ ಮೂಲಕ ಯೋಜನೆ ಪ್ರಾರಂಭ ಮಾಡಲಾಗುವುದು.

ಭತ್ತ ಬೆಳೆಗಾರರಿಗೆ 1 ಲಕ್ಷದ 72 ಸಾವಿರ ಕೋಟಿ ರೂ ಅನುದಾನ ಬಿಡುಗಡೆ

ಧಾನ್ಯ ಖರೀದಿಗೆ 10.500 ಕೋಟಿ ರೂಪಾಯಿ ಅನುದಾನ ಮೀಸಲು. ಪಶುಸಂಗೋಪನೆ, ಮೀನುಗಾರಿಕೆಗೆ 40 ಸಾವಿರ ಕೋಟಿ.

ವಾಹನಗಳಿಗೆ ಸಿಎನ್‌ಜಿ ಒದಗಿಸುವ ನಗರ ಅನಿಲ ವಿತರಣಾ ಜಾಲ ನಿರ್ಮಾಣ ಹಾಗೆಯೇ ಇನ್ನೂ 100 ಜಿಲ್ಲೆಗಳಲ್ಲಿನ ಮನೆಗಳಿಗೆ ಅಡುಗೆ ಅನಿಲವನ್ನು ಪೈಪ್ ಮೂಲಕ ಸರಬರಾಜಿಗೆ ನಿರ್ಧಾರ.

ಎಲ್ಲಾ ರಾಜ್ಯಗಳಿಗೂ ಸ್ವಾಮಿತ್ವ ಯೋಜನೆ ವಿಸ್ತರಣೆ. 50 ಲಕ್ಷ ರೂ.ಗಳಿರುವ ಸಣ್ಣ ಉದ್ಯಮಗಳ ಬಂಡವಾಳದ ಮೂಲವನ್ನು 2 ಕೋಟಿ ರೂ.ಗೆ ಏರಿಸುವ ಮೂಲಕ ಆ ಕ್ಷೇತ್ರದ ವ್ಯಾಖ್ಯಾನವನ್ನು ಪರಿಷ್ಕರಣೆ ಮಾಡಬೇಕಿದೆ.

ಎನ್ ಜಿ ಒ ಸಹಭಾಗಿತ್ವದಲ್ಲಿ 100 ಸೈನಿಕ್ ಶಾಲೆಗಳ ನಿರ್ಮಾಣಕ್ಕೆ ಒತ್ತು

ಎಲ್ಲ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶದಲ್ಲಿ ಒನ್ ನೇಷನ್, ಒನ್ ರೇಷನ್ ಕಾರ್ಡ್ ಯೋಜನೆ  ಜಾರಿ

ಕೌಶಲ್ಯಾಭಿವೃದ್ದಿಗೆ ಮೂರು ಸಾವಿರ ಕೋಟಿ ರೂಪಾಯಿ ಅನುದಾನ.  ಭಾರತ್ ಜಪಾನ್ ನಡುವೆ ಕೌಶಲ್ಯ ಅಭಿವೃದ್ದಿ ಒಪ್ಪಂದ.

ಮಹಿಳೆಯರು 24 ಗಂಟೆಗಳ ಕಾಲ ಕೆಲಸ ಮಾಡಲು ಅವಕಾಶ. ಎಲ್ಲಾ ವಲಯದ ಕಾರ್ಮಿಕರಿಗೆ ಕನಿಷ್ಠ ವೇತನ ಕಾಯ್ದೆ ಅನ್ವಯ

ವಿಮೆಯಲ್ಲಿ ಎಫ್‌ಡಿಐ 49 ಪಿಸಿಯಿಂದ 74 ಪಿಸಿಗೆ ಏರಿಕೆ.ಲೇಹ್ ನಲ್ಲಿ ಸೆಂಟ್ರಲ್ ಯೂನಿವರ್ಸಿಟಿ ಸ್ಥಾಪಿಸಲು ನಿರ್ಧಾರ, 750 ಶಾಲೆಗಳನ್ನು ಬುಡುಕಟ್ಟು ಪ್ರದೇಶದಲ್ಲಿ ಸ್ಥಾಪಿಸಲಾಗಿದೆ.

ಸಂಶೋಧನಾ ವಲಯಕ್ಕೆ 50 ಸಾವಿರ ಕೋಟಿ ರೂ. ಕೃಷಿ ಸಾಲದ ಗುರಿಯನ್ನು 2021-22ರಲ್ಲಿ 16.5 ಲಕ್ಷ ಕೋಟಿ ರೂ.ಗೆ ಏರಿಸಲಾಗಿದೆ

ಮುಂದಿನ ಹಣಕಾಸು ವರ್ಷದಲ್ಲಿ ಗ್ರಾಮೀಣ ಮೂಲಸೌಕರ್ಯಾಭಿವೃದ್ಧಿಗಾಗಿ ಹಂಚಿಕೆ ಮಾಡಲಾಗುವ ಹಣವನ್ನು 40,000 ಕೋಟಿ ರೂ.ಗೆ ಏರಿಕೆ ಮಾಡಲಾಗಿದೆ.

ಗೋಧಿ ಬೆಳೆದ ರೈತರು ಎಂಎಸ್‌ಪಿ ಆಧಾರದಲ್ಲಿ 75,100 ಕೋಟಿ ರೂ ಪಡೆದಿದ್ದಾರೆ. ಇದು  43.36 ಲಕ್ಷ ಗೋಧಿ ಬೆಳೆಯುವ ರೈತರಿಗೆ  ಈ ಹಿಂದೆ 35.57 ಲಕ್ಷಕ್ಕೆ ಹೋಲಿಸಿದರೆ ಹೆಚ್ಚಿನ ಲಾಭ ದೊರಕಿಸಿದೆ.

ಲೇಹ್‌ನಲ್ಲಿ ಕೇಂದ್ರೀಯ ವಿಶ್ವವಿದ್ಯಾಲಯವನ್ನು ಸ್ಥಾಪಿಸಲಾಗುವುದು. ಗೋವಾ ವಿಮೋಚನಾ ವರ್ಷ ಆಚರಣೆಗೆ  300 ಕೋಟಿ ರೂ. ಮೀಸಲು. ಕೃಷಿ ಮೂಲಸೌಕರ್ಯಕ್ಕಾಗಿನ ನಿಧಿ 40,000 ಕೋಟಿ ರೂ.ಗೆ ಏರಿಕೆ, ಸಣ್ಣ ನೀರಾವರಿ ಬೆಳೆಗೆಳ ಸೌಕರ್ಯಕ್ಕೆ 10,000 ಕೋಟಿ ರೂ. ಮೀಸಲು.

ಡಿಜಿಟಲ್ ಮೋಡ್ ಪೇಮೆಂಟ್ ಉತ್ತೇಜನಕ್ಕೆ 1500 ಕೋಟಿ ರೂ. ಖಾಸಗಿ ಬಳಕೆ ವಾಹನಗಳಿಗೆ 20 ವರ್ಷ, ವಾಣಿಜ್ಯ ಬಳಕೆ ವಾಹನಗಳಿಗೆ 15 ವರ್ಷ, ವಾಹನಗಳಿಗೆ ಸಿಎನ್‌ಜಿ ಒದಗಿಸುವ ನಗರ ಅನಿಲ ವಿತರಣಾ ಜಾಲ ನಿರ್ಮಾಣ. ಡಿಜಿಟಲ್ ಪಾವತಿಗಳನ್ನು ಉತ್ತೇಜಿಸುವ ಯೋಜನೆಗಾಗಿ 1,500 ಕೋಟಿ ರೂ  ನಿಗದಿ.

1 ಲಕ್ಷದ 10 ಸಾವಿರ ಜನರು ತೆರಿಗೆ ಕಟ್ಟುವ ವಿವಾದ ಬಗೆಹರಿಸಿಕೊಂಡಿದ್ದಾರೆ. ಡಿವಿಡೆಂಡ್ ಮೇಲಿನ ಬಡ್ಡಿ ಇಳಿಕೆ
ರಾಷ್ಟ್ರೀಯ ಭಾಷಾ ಅನುವಾದ ಉಪಕ್ರಮಕ್ಕೆ( national language translation initiative) ಸರ್ಕಾರ ಪ್ರಸ್ತಾವನೆ

ಐದು ವರ್ಷಗಳಲ್ಲಿ 4,000 ಕೋಟಿ ರೂ.ಗಳಿಗಿಂತ ಹೆಚ್ಚಿನ ಹಣವನ್ನು ವಿನಿಯೋಗಿಸುವ ಮೂಲಕ ಆಳ ಸಾಗರ ಕಾರ್ಯಾಚರಣೆಗೆ ಕೇಂದ್ರ ಸರ್ಕಾರ ಪ್ರಸ್ತಾಪ.

1 ಲಕ್ಷದ 10 ಸಾವಿರ ಜನರು ತೆರಿಗೆ ಕಟ್ಟುವ ವಿವಾದ ಬಗೆಹರಿಸಿಕೊಂಡಿದ್ದಾರೆ.

ರಾಷ್ಟ್ರೀಯ ನರ್ಸಿಂಗ್ ಮತ್ತು ಮಿಡ್‌ವೈಫರಿ ಆಯೋಗದ ಮಸೂದೆ(National Nursing and Midwifery Commission Bill)ಯನ್ನು ಪರಿಚಯಿಸಲು ಸರ್ಕಾರ ಪ್ರಸ್ತಾಪ.

ಮುಂಬರುವ ಜನಗಣತಿಗಾಗಿ 3,726 ಕೋಟಿ ರೂ.ಗಳನ್ನು ನಿಗದಿಪಡಿಸಲಾಗಿದ್ದು ಇದು ಮೊಟ್ಟ ಮೊದಲ ಡಿಜಿಟಲ್ ಜನಗಣತಿಯಾಗಿದೆ.ಹಿರಿಯ ನಾಗರಿಕರಿಗೆ ತೆರಿಗೆಯಲ್ಲಿ ರಿಲೀಫ್, 75 ವರ್ಷ ಮೇಲ್ಪಟ್ಟವರು ತೆರಿಗೆ ಕಟ್ಟುವಂತಿಲ್ಲ, , ಪಿಂಚಣಿಗೆ ಆದಾಯ ತೆರಿಗೆ ಕಟ್ಟುವಂತಿಲ್ಲ, ದೇಶದಲ್ಲಿ 6.48 ಕೋಟಿ ಜನರಿಂದ ಐಟಿ ಫೈಲ್

ಭಾರತೀಯ ಆಹಾರ ನಿಗಮಕ್ಕೆ ಸಬ್ಸಿಡಿ ನೀಡದಿರಲು ನಿರ್ಧಾರ. 32 ರಾಜ್ಯ, ಒಂದು ಕೇಂದ್ರಾಡಳಿತ ಪ್ರದೇಶದಲ್ಲಿ “ಒನ್ ನೇಷನ್ ಒನ್ ರೇಷನ್ ಕಾರ್ಡ್” ಯೋಜನೆ ಅನುಷ್ಠಾನದಲ್ಲಿದೆ. ತೆರಿಗೆ ಸುದಾರಣಾ ನಿಯಮ ಜಾರಿಗೆ ತರಲು ನಿರ್ಧಾರ. ರೈತರಿಗೆ 16.5 ಲಕ್ಷ ಕೋಟಿ ರೂಪಾಯಿ ಸಾಲ
ಗೋಧಿ ಖರೀದಿಗೆ 75 ಸಾವಿರ ಕೋಟಿ ರೂಪಾಯಿ
ಭತ್ತ ಖರೀದಿಗೆ 1.41 ಲಕ್ಷ ಸಾವಿರ ಕೋಟಿ ಹಣ ಮೀಸಲು
ಪಶುಪಾಲನೆ -ಕಕ್ಕುಟೋದ್ಯಮಕ್ಕೆ ಹೆಚ್ಚಿನ ಅನುದಾನ
ಇ ನ್ಯಾಮ್ಸ್​ನಲ್ಲಿ ಸಾವಿರಕ್ಕೂ ಅಧಿಕ ಕೃಷಿ ಮಂಡಿಗಳ ಸೇರ್ಪಡೆ
ಕೃಷಿ ವಲಯಕ್ಕೆ 16.5 ಲಕ್ಷ ಕೋಟಿ ರೂ. ಸಾಲ ನೀಡುವ ಗುರಿ
ದೇಶದಲ್ಲಿ 5 ಮೀನುಗಾರಿಕೆ ಹಬ್​ ಸ್ಥಾಪನೆ
ದ್ವಿದಳ ಧಾನ್ಯಗಳ ಖರೀದಿಗೆ 10,530 ಕೋಟಿ ರೂ. ಮೀಸಲು
ಎಪಿಎಂಸಿಗಳ ಸಬಲೀಕರಣಕ್ಕೆ ಕೇಂದ್ರದ ಯೋಜನೆ ಜಾರಿ
ಪಶುಸಂಗೋಪನೆ, ಮೀನುಗಾರಿಕೆಗೆ 40 ಸಾವಿರ ಕೋಟಿ ರೂ.

ಪೆಟ್ರೋಲ್, ಡಿಸೇಲ್ ಬೆಲೆಯಲ್ಲಿ ಭಾರೀ ಹೆಚ್ಚಳವಾಗಿದೆ. ಪೆಟ್ರೋಲ್,ಡಿಸೇಲ್ ಮೇಲೆ ಕೃಷಿ ಸೆಸ್ ಏರಿಕೆ ಮಾಡಲಾಗಿದ್ದು, ಪ್ರತಿ ಲೀಟರ್ ಪೆಟ್ರೋಲ್ ಮೇಲೆ 2.5 ರೂ. ಸೆಸ್ ಏರಿಕೆ ಮಾಡಲಾಗಿದೆ. ಡೀಸೆಲ್ ಬೆಲೆಯಲ್ಲಿ 4 ರೂ. ಏರಿಕೆ ಮಾಡಲಾಗಿದೆ.

ಜಿಎಸ್ ಟಿ ದಾಖಲೆ ಪ್ರಮಾಣದಲ್ಲಿ ಸಂಗ್ರಹವಾಗಿದೆ. ಜಿಎಸ್ ಟಿಯನ್ನು ಮತ್ತಷ್ಟು ಸರಳೀಕರಣಗೊಳಿಸಲು ಕ್ರಮ. ಜಿಎಸ್ ಪಾವತಿದಾರರನ್ನು ಗುರುತಿಸಲು ಕ್ರಮ ಕೈಗೊಳ್ಳಲಾಗುವುದು. ಅಬಕಾರಿ ತೆರಿಗೆಯಲ್ಲಿ ಕೆಲ ಮಾರ್ಪಾಡು ಮಾಡಲಾಗಿದೆ. ಮೊಬೈಲ್ ಬಿಡಿ ಭಾಗಗಳ ಆಮದು ಸುಂಕ ಕಡಿತ ಮಾಡಲಾಗಿದೆ.

ಸಂಯುಕ್ತವಾಣಿ

Leave a Reply

Your email address will not be published. Required fields are marked *