ಚಿತ್ರದುರ್ಗ: ಗ್ರಾಪಂ ಚುಮಾವಣೆ ಮತದಾನದ ವೇಳೆ ಕಲ್ಲು ತೂರಾಟ, ಮಚ್ಚಿನಿಂದ ವ್ಯಕ್ತಿಯ ಮೇಲೆ ಹಲ್ಲೆಯಂತಹ ಘಟನೆ ಭರಮಸಾಗರದ ಅಜಾದ್ ನಗರದಲ್ಲಿ ನಡೆದಿದೆ.

ಚಿತ್ರದುರ್ಗ ತಾಲೂಕಿನ ಭರಮಸಾಗರದ ಆಜಾದ್ ನಗರದಲ್ಲಿ ಮತದಾನದ ವೇಳೆ ಮತಗಟ್ಟೆ ಬಳಿ ಎರಡು ಗುಂಪುಗಳ ನಡುವೆ ಮಾರಾಮಾರಿ ನಡೆದಿದೆ. ತಮ್ಮ ತಮ್ಮವರನ್ನು ಕರೆ ತಂದು ಮತ ಹಾಕಿಸುತ್ತಿದ್ದಾರೆಂದು ಗಲಾಟೆ ಆರಂಭವಾಗಿದ್ದು, ಅದು ಮಚ್ಚಿನಿಂದ ಹಲ್ಲೆ ಮಾಡುವ ಹಾಗು ಕಲ್ಲು ತೂರಾಡುವ ಮಟ್ಟಕ್ಕೆ ಹೋಗಿದೆ. ಆಜಾದ್ ನಗರದಲ್ಲಿ ಪ್ರಕ್ಷುಬ್ಧ ವಾತಾವರಣ ಉಂಟಾಗಿ ಭಯದಿಂದ ಜನರು ಓಡಿ ಹೋಗುತ್ತಿದ್ದಾರೆ. ಸ್ಥಳಕ್ಕೆ ಭರಮಸಾಗರ ಪೋಲಿಸರು ಭೇಟಿ ನೀಡಿ ವಾತಾವರಣ ತಿಳಿಗೊಳಿಸಲು ಪ್ರಯತ್ನಿಸಿದ್ದಾರೆ.
ಸಂಯುಕ್ತವಾಣಿ




