ಚಿತ್ರದುರ್ಗ: ಕನ್ನಡ ಸಾಹಿತ್ಯ ಪರಿಷತ್ ಚುನಾವಣೆಯೂ ದಿನೆ ದಿನೇ ರಂಗೇರುತ್ತಿದ್ದು ನಾಮಪತ್ರ ಸಲ್ಲಿಕೆಯೂ ಭರದಿಂದ ಸಾಗಿದೆ. ಇಂದು ಕೂಡ ಮಾಜಿ ಮುಖ್ಯ ಮಂತ್ರಿ ದಿ: ಬಂಗಾರಪ್ಪ ಅವರ ಕಟ್ಟಾ ಅಭಿಮಾನಿ ಹಾಗೂ ಸದಾ ಸಮಾಜ ಸೇವೆಯಲ್ಲಿ ತೊಡಗಿಕೊಂಡಿರುವ ಆರ್. ಶೇಷಣ್ಣ ಕುಮಾರ್ ತಹಶೀಲ್ದಾರ್ ಕಚೇರಿಯಲ್ಲಿ ಜಿಲ್ಲಾ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ನಾಮಪತ್ರವನ್ನು ಸಲ್ಲಿಸಿದರು.

ನಾಮಪತ್ರ ಸಲ್ಲಿಸಿ ನಂತರ ಮಾತನಾಡಿದ ಶೇಷಣ್ಣ ಕುಮಾರ್, ಜಿಲ್ಲೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ ಸೊರಗಿ ಹೋಗಿದೆ. ಅದಕ್ಕೆ ಕಾಯಕಲ್ಪ ಅಗತ್ಯವಿದೆ. ಕನ್ನಡ ಭವನದ ನಿರ್ಮಾಣ ಕಳೆದ ೧೦ ವರ್ಷಗಳಿಂದಲೂ ಆಗಲಿಲ್ಲ ಇದಕ್ಕೆ ಕನ್ನಡ ಭವನದ ಹಿತಾಸಕ್ತಿ ಕೆಲಸಗಳ ಅಸಡ್ಡೆಗಳೆ ಕಾರಣವಾಗಿದೆ. ಕನ್ನಡದ ಕೆಲಸಗಳು ಹಾಗೂ ಕನ್ನಡದ ಕಾರ್ಯಕ್ರಮಗಳನ್ನು ಪ್ರತೀ ಕನ್ನಡಿಗರಿಗೂ ಮುಟ್ಡಿಸುವ ಕೆಲಸವನ್ನು ಮಾಡುತ್ತೇನೆ. ನಿರಂತರವಾಗಿ ನಾನು ಸಾಹಿತ್ಯ ಹಾಗೂ ಸಾಹಿತಿಗಳ ನಡುವೆ ಒಡನಾಟದಲ್ಲಿದ್ದೇನೆ. ರಾಜಕೀಯ ಕ್ಷೇತ್ರದಲ್ಲಿ ಕೆಲಸ ಮಾಡದ ನಾನು ಅನೇಕ ವರ್ಷಗಳಿಂದ ಸಾಮಾಜ ಸೇವೆಯಲ್ಲಿ ತೊಡಗಿಕೊಂಡಿದ್ದೇನೆ. ಅದರ ಮೂಲಕವೇ ಈಗ ಕನ್ನಡ ಸಾಹಿತ್ಯ ಪರಿಷತ್ ಚನಾವಣೆಗೆ ಸ್ಪರ್ಧಿಸಲು ಮುಂದಾಗಿದ್ದೇನೆ. ಈಗಾಗಲೇ ಸಾಹಿತ್ಯಾಸಕರು, ಸದಸ್ಯರು ಹಾಗೂ ಮತದಾರರ ಭೇಟಿಯನ್ನು ಮಾಡಿದ್ದು, ಉತ್ತಮ ಸ್ಪಂದನೆ ಸಿಕ್ಕಿದೆ. ಎಲ್ಲಾ ಕನ್ನಡ ಪರ ಸಂಘಟನೆಗಳು ಕೂಡ ನನ್ನ ಬೆಂಬಲಕ್ಕೆ ನಿಂತಿವೆ. ಸಾಹಿತ್ಯ ಪರಿಷತ್ ಚುನಾವಣೆ ಯಲ್ಲಿ ಗೆಲುವು ಸಾಧಿಸಿ ಉತ್ತಮ ಕೆಲಸವನ್ನು ಮಾಡುವ ಅಭಿಲಾಷೆಯನ್ನು ನಾನು ಹೊಂದಿದ್ದೆನೆ ಎಂದು ಶೇಷಣ್ಣ ಹೇಳಿದರು
ಸಂಯುಕ್ತವಾಣಿ





