ಕಾಡಾ ಸಮಿತಿಗೆ ಜಿಲ್ಲಾ ನೀರಾವರಿ ಹೋರಾಟ ಸಮಿತಿ ಎಚ್ಚರಿಕೆ

ಜಿಲ್ಲಾ ಸುದ್ದಿ

ಚಿತ್ರದುರ್ಗ)- ಭದ್ರಾ ಮೇಲ್ದಂಡೆಗೆ ಭದ್ರಾ ನೀರನ್ನು ಬಿಡಬಾರದು ಎಂಬ ಕಾಡಾ ಸಮಿತಿ ನಿರ್ಣಯವನ್ನು ಜಿಲ್ಲಾ ನೀರಾವರಿ ಹೋರಾಟ ಸಮಿತಿ ತೀವ್ರವಾಗಿ ವಿರೋಧಿಸುತ್ತದೆ ಎಂದು ಹೋರಾಟ ಸಮಿತಿ ಕಾರ್ಯಾಧ್ಯಕ್ಷ ಬಿಎ ಲಿಂಗಾರೆಡ್ಡಿ ಹೇಳಿದರು.

 

 

 

Chitradurga niravari horata samiti warning to kada committe
ಅವರು ಖಾಸಗಿ ಹೊಟೇಲ್ ನಲ್ಲಿ ಇಂದು ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದರದೌ
ಭದ್ರಾ ಯೋಜನೆಯಡಿ ಚಿಕ್ಕಮಗಳೂರು, ಚಿತ್ರದುರ್ಗ, ದಾವಣಗೆರೆ ಮತ್ತು ತುಮಕೂರು ಜಿಲ್ಲೆಗಳಿಗೆ ನೀರಾವರಿ ಸೌಲಭ್ಯ ಕಲ್ಪಿಸಲಾಗುತ್ತಿದೆ. ಇಡೀ ಯೋಜನೆಯಲ್ಲಿ ಕೆರೆ ತುಂಬಿಸುವ, ಹನಿ ನೀರಾವರಿ ಸೌಲಭ್ಯದ ಹಾಗೂ ಕುಡಿಯುವ ನೀರು ಪೂರೈಕೆ ಬದ್ದತೆಗಳಿವೆ. ಭದ್ರಾ ಮೇಲ್ದಂಡೆ ಗೆ ಭದ್ರಾ ಜಲಾಶಯದಿಂದ 12.50 ಹಾಗೂ ತುಂಗಾ ಜಲಾಶಯದಿಂದ 17.40 ಟಿಎಂಸಿ ಯಷ್ಟು ನೀರು ಹಂಚಿಕೆಯಾಗಿದೆ. ಯೋಜನೆಯ ಕಾಮಗಾರಿ ಮುಕ್ತಾಯದ ಹಂತಕ್ಕೆ ಬರುತ್ತಿರುವ ಈ ವೇಳೆಯಲ್ಲಿ ನೀರು ಹಂಚಿಕೆ ಸೂತ್ರಕ್ಕೆ ಕ್ಯಾತೆ ತೆಗೆಯುವುದು ಸರಿಯಾದ ಕ್ರಮವಲ್ಲ ಎಂದರು.ನೀರನ್ನು ತುಂಗಾದಿಂದಲೇ ತೆಗೆದುಕೊಳ್ಳಿ ಭದ್ರಾ ದಿಂದ ಕೊಡೊಲ್ಲ ಎಂಬಿತ್ಯಾದಿ ಹೇಳಿಕೆಗಳು ಹಾಗೂ ನಿರ್ಣಯಗಳು ಸಾಧುವಲ್ಲ ಮತ್ತು ರೈತರ ನಡುವೆ ವಿಚಾರವಾಗಿದೆ.
ಚಿತ್ರದುರ್ಗ ಸೇರಿದಂತೆ ಬಯಲು ಸೀಮೆ ರೈತರು ಭದ್ರಾ ಕಾಮಗಾರಿ ಪೂರ್ಣಗೊಳಿಸುವಂತೆ ಸರ್ಕಾರದ ಮೇಲೆ ಒತ್ತಡ ಹೇರುತ್ತಿದ್ದಾರೆ. ರಾಷ್ಟ್ರೀಯ ಯೋಜನೆಯಾಗಿ ಘೋಷಣೆಯಾದರೆ ರಾಜ್ಯ ಸರ್ಕಾರದ ಮೇಲೆ ಅರ್ಥಿಕ ಹೊರೆ ಕಡಿಮೆಯಾಗುತ್ತದೆ ಎಂಬ ಕಾಳಜಿಯಿಂದ ಕೇಂದ್ರದ ಮುಂದೆ ಹಕ್ಕೋತ್ತಾಯ ಮಂಡಿಸುತ್ತಿದ್ದೆವೆ. ಇಂತಹ ವೇಳೆಯಲ್ಲಿ ಶಿವಮೊಗ್ಗ,ದಾವಣಗೆರೆ ಜಿಲ್ಲಾ ರೈತರು ನೀರಿಗಾಗಿ ಕ್ಯಾತೆ ತೆಗೆಯುವುದು ಎಷ್ಟರ ಮಟ್ಟಿಗೆ ಸರಿ ಎಂದು ಪ್ರಶ್ನಿಸಿ ದರು.
ಚಿತ್ರದುರ್ಗ ಜಿಲ್ಲೆ ಅರವತ್ತು ಬಾರಿ ಬರಗಾಲಕ್ಕೆ ತುತ್ತಾಗಿದೆ.ಕುಡಿಯಲು ಶುದ್ದ ನೀರು ಸಿಗದ ದೌರ್ಬಗ್ಯ ಇಲ್ಲಿನ ಜನರದ್ದು,ಬಯಲು ಸೀಮೆ ರೈತರು ಶುದ್ದ ನೀರನ್ನಾದರೂ ಕುಡಿಯಲು ಅವಕಾಶ ಕೊಡಿ ಎಂದು ಮನವಿ ಮಾಡುತಿದ್ದೆವೆ ಎಂದು ಹೇಳಿದರು.ಆದರೆ ನೀರಿನ ನಿರಾಕಣೆ ಮಾಡಿದರೆ ಒಡಲ ಕಿಚ್ಚು ಧಗ ಧಗಿಸುತ್ತದೆ. ಎಂಬ ಕನಿಷ್ಠ ತಿಳುವಳಿಕೆ ಕಾಡಾ ಸಮಿತಿಗೆ ಮನವರಿಕೆಯಾಗಲಿ ಎಂದು ಹೋರಾಟ ಸಮಿತಿ ಹೇಳುತ್ತದೆ. ಎಂದರು.ಇನ್ನು ಮೇಲೆ ಭದ್ರಾ ಅಚ್ಚುಕಟ್ಟು ವ್ಯಾಪ್ತಿಗೆ ಚಿತ್ರದುರ್ಗ, ಚಿಕ್ಕಮಗಳೂರು ಹಾಗೂ ತುಮಕೂರು ಜಿಲ್ಲೆಗಳು ಸೇರಬೇಕಾಗುತ್ತದೆ. ಆದ್ದರಿಂದ ಕಾಡಾ ಸಮಿತಿಗೆ ಸರ್ಕಾರ ಮೂತು ಜಿಲ್ಲೆಗಳ ರೈತರನ್ನು ನೇಮಕ ಮಾಡಬೇಕು ಎಂದು ಒತ್ತಾಯಿಸಿದರು.ಇನ್ನು ಸಂಸದ ಜಿಎಂ ಸಿದ್ದೇಶ್ವರ್ ಅವರು ಭದ್ರಾ ನೀರು ಕೊಡಲ್ಲ , ಬಿಡಲ್ಲ ಎಂಬ ರೈತರನ್ನು ಕುಟುಕುವ ಚೇಷ್ಟೇ ಮಾತುಗಳಿಗೆ ಕಡಿವಾಣ ಹಾಕಿಕೊಳ್ಳಬೇಕು. ನೀವು ಚಿತ್ರದುರ್ಗ ತಾಲೂಕಿನ ನಿವಾಸಿಗಳಾಗಿದ್ದು,ರೈತರ ಕುಟುಂಬದಿಂದ ಬಂದಿದ್ದೀರಿ ಎಂಬುದನ್ನು ಮರೆಯಬಾರದು.ಭದ್ರಾ ಮೇಲ್ದಂಡೆಯಿಂದ ತಮ್ಮ ಮತ ಕ್ಷೇತ್ರ ಜಗಲೂರಿಗೆ 2.40 ಟಿಎಂಸಿ ನೀರು ಹರಿಯುತ್ತದೆ. ಎಂಬ ಸಂಗತಿ ಮನನ ಮಾಡಿಕೊಳ್ಳಬೇಕು ಎಂದು ಎಚ್ಚರಿಸಿದರು.

ಸಂಯುಕ್ತವಾಣಿ

Leave a Reply

Your email address will not be published. Required fields are marked *