ದಾವಣಗೆರೆ: ಮೂರು ತಿಂಗಳಲ್ಲಿ ನಿನ್ನ ಪರಿಸ್ಥಿತಿ ನೋಡಿಕೋ ನೀನು ಪರಪ್ಪನ ಅಗ್ರಹಾರದಲ್ಲಿ ಇರ್ತಿಯೋ, ಎಲ್ಲಿರ್ತಿಯೋ ಎಂದು ಸಿಎಂ ಯಡಿಯೂರಪ್ಪ ವಿರುದ್ದ ಬಿಜಾಪುರ ಬಿಜೆಪಿ ಶಾಸಕ ಯತ್ನಾಳ್ ಕಿಡಿಕಾರಿದರು.


ಲಿಂಗಾಯಿತರಿಗೆ ಹಿಂದುಳಿದ ವರ್ಗ ನೀಡುವ ಆಸೆ ಸಿಎಂಗೆ ಇಲ್ಲ. ವೀರಶೈವ ಲಿಂಗಾಯಿತರನ್ನು ತೋರಿಸಿ ಕೇಂದ್ರದವರನ್ನು ಹೆದರಿಸುತ್ತಾರೆ. ಬಿಎಸ್ ವೈ ಖುರ್ಚಿ ಅಲ್ಲಾಡುವಾಗ ಮಾತ್ರ ಲಿಂಗಾಯಿತರು ಬೇಕು. ಖುರ್ಚಿಯಿಂದ ಕೆಳಗಿಳಿಸ್ತಾರೆ ಅಂದಾಗ ಮಾತ್ರ ಲಿಂಗಾಯಿತ ಮಂತ್ರಿಗಳ ಸಭೆ ಮಾಡ್ತಾರೆ. ಬಿಜೆಪಿಯಲ್ಲಿದ್ದು ನಾನು ಸತ್ಯವನ್ನೆ ಹೇಳುತ್ತಿದ್ದೆನೆ. ವೀರಶೈವ ಅಭಿ ವೃದ್ದಿ ನಿಗಮ ಮಾಡುವ ಠರಾವು ಮಾಡುವುದಾಗಿ ಹೇಳುತ್ತಾರೆ. ಸ್ವಾಮೀಜಿಗಳಿಗೆ ಸಂಭ್ರಮಾಚರಣೆ ಮಾಡಲು ಬೆಂಗಳೂರಿಗೆ ಬರಲು ಹೇಳಿ 500 ಕೋಟಿ ನೀಡುವುದಾಗಿ ಆಸೆ ಹುಟ್ಟಿಸುತ್ತಾರೆ.ಆದರೆ ಇದ್ಯಾವುದು ಇನ್ನು ಆಗಿಲ್ಲ.ಮಠಗಳನ್ನು ಮಾಡಲಯ ನಿಮಗೆ ಆಗಲ್ಲ ಮುಖ್ಯ ಮಂತ್ರಿಗಳೆ ನಿಮ್ಮ ಯಾವ ಕೋಟಿಗಳ ಬೇಡ ನಾನೇ 50 ಕೋಟಿ ಕೊಡುತ್ತೇನೆ. ನಮ್ಮ ಸಮಾಜವನ್ನು 2 ಗೆ ಸೇರಿಸಿ ಎಂದು ಸಿಎಂ ಬಿಎಸ್ ವೈ ಗೆ ಯತ್ನಾಳ್ ಸವಾಲೆಸೆದಿದ್ದಾರೆ. ಬೆಂಗಳೂರಿಗೆ ಹೋಗುವುದರೊಳಗೆ ಡಿಕ್ಲೇರ್ ಮಾಡಿ, ಮಾಡದಿದ್ದರೆ ನಿಮ್ಮ ಕುರ್ಚಿ ಅಲ್ಲಾಡುತ್ತದೆ. ನಮ್ಮ ಸಮಾಜಕ್ಕೆ ಎರಡು ಮಂತ್ರಿ ಸ್ಥಾನ ನೀಡಿದ್ದಾರೆ. ಅದರಲ್ಲಿ ಒಂದು ಬಂದ್ ಆದ ಕಾರ್ಖಾನೆ ಇನ್ನೊಂದು ಭೂ ಗರ್ಭ ಸಿಎಂ ಮಾತ್ರ ಇಂಧನ, ಹಣಕಾಸು ಬೆಂಗಳೂರು ಅಭಿವೃದ್ದಿ ಇಟ್ಟುಕೊಂಡಿದ್ದಾರೆ ಎಂದು ಸಿಎಂ ಬಿಎಸ್ ವೈ ವಿರುದ್ದ ವಾಗ್ದಾಳಿ ನಡೆಸಿದರು.
ಸಂಯುಕ್ತವಾಣಿ





