ಚಿತ್ರದುರ್ಗ,ಮಾ13(ಹಿಸ)- ಲಂಚ ಪಡೆಯುವ ವೇಳೆ ಕಾರ್ಯ ನಿರ್ವಹಣಾಧಿಕಾರಿಯೊಬ್ಬರು ಎಸಿಬಿ ಬಲೆಗೆ ಬಿದ್ದಿದ್ದಾರೆ.
ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲೂಕಿನ ತಾಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿ ಡಾ. ಶ್ರೀಧರ್ ಬಾರಕೇರ್ ಅವರು, ಬೆಳೆಗೆರೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಗುಂಡಪ್ಪ ಅವರ ಬಳಿ 14ನೇ ಹಣಕಾಸಿನ ಉಳಿಕೆ ಬಡ್ಡಿ ಮೊತ್ತಕ್ಕೆ ಕ್ರಿಯಾ ಯೋಜನೆ ತಯಾರಿಸಿ ಕೊಡಲು 20 ಸಾವಿರ ಲಂಚ ಕೇಳಿದ್ದು, ಅದನ್ನು ಲಂಚದ ಹಣವನ್ನು ತಾಲೂಕು ಕಚೇರಿ ಮುಂದೆ ಪಿಡಿಓ ಗುಂಡಪ್ಪ ಕೊಡುವಾಗ ಎಸಿಬಿ ಡಿವೈಎಸ್ಪಿ ಬಸವರಾಜ್ ಮುಗುದುಮ್ ನೇತೃತ್ವದಲ್ಲಿ ದಾಳಿ ನಡೆಸಿ ಕಾರ್ಯನಿರ್ವಹಣಾಧಿಕಾರಿ ಶ್ರೀಧರ್ ಬಾರೀಕೇರ ಅವರನ್ನು ವಶಕ್ಕೆ ಪಡೆಯಲಾಗಿದೆ.
ಹಿಂದೂಸ್ತಾನ್ ಸಮಾಚಾರ್/ಪ್ರಬಿ/ಎಂವೈ





