ಬೆಂಗಳೂರು: ವಿಧಾನ ಪರಿಷತ್ ನ ಸಭಾಪತಿ ಯನ್ನು ಬದಲಾವಣೆ ಮಾಡಲು ಕರೆದಿದ್ದ ವಿಶೇಷ ಸಭೆಯಲ್ಲಿ ಕೋಲಾಹಲವುಂಟಾಗಿ ಅಧಿವೇಶನವನ್ನು ಅನಿರ್ಧಿಷ್ಟಾವಧಿಗೆ ಸಭಾಪತಿ ಮುಮದೂಡಿದ್ರು. ಇದರ ಬಗ್ಗೆ ರಾಜ್ಯಪಾಲರಿಗೆ ದೂರು ನೀಡಲಾಗಿತ್ತು. ಇದರಂತೆ ರಾಜ್ಯಪಾಲ ವಜುಭಾಯಿವಾಲ ಸಭಾಪತಿ ಪ್ರತಾಪ್ ಚಂದ್ರ ಶೆಟ್ಟಿಗೆ ಅಜೆಂಡಾದಲ್ಲಿರುವಂತೆ ಕಲಾಪ ಮುಂದುವರೆಸುವಂತೆ ಸಲಹೇ ನೀಡಿದ್ದಾರೆ.
ವಿಧಾನ ಪರಿಷತ್ ಸಭಾಪತಿ ಬದಲು ಮಾಡಲು ಇಂದು ವಿಶೇಷ ಅಧಿವೇಶ ಕರೆಯಲಾಗಿತ್ತು. ಸಭೆಯಲ್ಲಿ ಕಾಂಗ್ರೆಸ್ ಬಿಜೆಪಿ ಸದಸ್ಯರ ನಡುವೆ ನೂಕಾಟ ತಳ್ಳಾಟ ನಡೆದಿದೆ. ಗದ್ದಲ ಹೆಚ್ಚಾದಂತೆ ಸಭಾಪತಿ ಚಂದ್ರಶೇಖರ್ ಶೆಟ್ಟಿ ಕಲಾಪವನ್ನು ಅನಿರ್ದಿಷ್ಠಾವಧಿಗೆ ಮುಂದೂಡಿದ್ದಾರೆ. ಇದರಿಂದ ಉಪಸಭಾಪತಿ ಧರ್ಮೇಗೌಡರನ್ನು ಕೂರಿಸಿದ್ದು ಕೈ ಸದಸ್ಯರು ಧರ್ಮೇಗೌಡರನ್ನು ಹಿಡಿದು ಎಳೆದಾಡಿದ್ದಾರೆ. ಕಾಂಗ್ರೆಸ್ ಚಂದ್ರಶೇಖರ್ ಪಾಟೀಲರನ್ನು ಕೂರಿಸಿದೆ. ಇಂತಹ ಘಟನೆಗಳು ಹೈಡ್ರಾಮಗಳು ಪರಿಷತ್ ನಲ್ಲಿ ನಡೆದಿದ್ದು, ರಾಜ್ಯದ ಮಾನ ಮತ್ತೊಮ್ಮೆ ಹರಾಜಾದಂತಾಗಿದ್ದು ಬಿಜೆಪಿ ರಾಜ್ಯಪಾಲರಿಗೆ ದೂರು ನೀಡಿದ್ದು, ರಾಜ್ಯಪಾಲ ವಜುಭಾಯಿ ವಾಲ ಸಭಾಪತಿ ಪ್ರಾತಾಪ್ ಚಂದ್ರ ಶೆಟ್ಟಿಗೆ ಅಜೆಂಡಾದಲ್ಲಿರುವಂತೆ ಕಲಾಪ ಮುಂದುವರೆಸಲು ಸಲಹೆ ನೀಡಿದ್ದಾರೆ.
ಸಂಯುಕ್ತವಾಣಿ





