ಚಿತ್ರದುರ್ಗ: ಸಾಸಹಸಿಂಹ ವಿಷ್ಣು ವರ್ಧನ್ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ ತೆಲುಗು ಚಿತ್ರ ನಟ ವಿಜಯರಂಗರಾಜು ಅವರೇ ನೀವು ಕರ್ನಾಟಕಕ್ಕೆ ಬರಬೇಡಿ ಎಂದು ವಿಷ್ಣುದಾದಾ ಅಳಿಯ ಅನಿರುದ್ಧ್ ಎಚ್ಚರಿಕೆ ನೀಡಿದ್ದಾರೆ.
ಕನ್ನಡ ಚಿತ್ರ ರಂಗದ ಮೇರು ನಟ ಡಾ. ವಿಷ್ಣುವರ್ಧನ್ ಅವರ ಬಗ್ಗೆ ವಿಜಯರಂಗರಾಜನ್ ಅವಹೇಳನಕಾರಿಯಾಗಿ ಮಾತನಾಡಿದ್ದು ನಮಗೆ ಅಷ್ಟೆ ಅಲ್ಲ ಕನ್ನಡಿಗರಿಗೆ ವಿಷ್ಣು ಅಭಿಮಾನಿಗಳಿಗೆ ತುಂಬಾ ನೋವು ತಂದಿದೆ. ಭಾರತೀಯ ಚಿತ್ರ ರಂಗದಲ್ಲಿ ಎಲ್ಲರೂ ಒಂದೆ ಎಂದು ಇದ್ದವರು ಸಾಹಸ ಸಿಂಹ. ಅಂಥವರ ಬಗ್ಗೆ ವಿಜಯರಂಗರಾಜು ತಿಳಿದುಕೊಂಡು ಮಾತನಾಡಬೇಕಾಗಿತ್ತು.

ಆದರೆ ಅವರು ಮಾತನಾಡಿರುವುದು ಸರಿಯಲ್ಲ. ಕಷ್ಟದಲ್ಲಿರುವರಿಗೆ ಸದಾ ಸಹಾಯ ಮಾಡಿಕೊಂಡು ಬಂದವರು ಸಹಾಯ ಮಾಡಿದ್ದನ್ನು ಯಾರಿಗು ಹೇಳಿಕೊಳ್ಳದಂತಹ ಸ್ನೇಹ ಹಾಗೂ ಭಾವ ಜೀವಿ ವಿಷ್ಣು ಸರ್. ಇಂತವರ ಬಗ್ಗೆ ಮಾತನಾಡಿರುವ ನಟ ವಿಜಯರಂಗರಾಜು ಅವರ ಮೇಲೆ ತೆಲುಗು ಸಿನಿಮಾ ರಂಗ ಹಾಗೂ ಚಿತ್ರಮಂಡಳಿ ಸರಿಯಾದ ಕ್ರಮ ತೆಗದುಕೊಳ್ಳಬೇಕು ಎಂದು ಮನವಿಯನ್ನು ಮಾಡಿದ್ದಾರೆ.
ಸಂಯುಕ್ತವಾಣಿ




