ಬೆಂಗಳೂರು; ಇಂದಿನ ಅಧಿವೇಶನದ ನಡೆದ ಸಭೆಯಲ್ಲಿ ಬಜೆಪಿ ಗೋಹತ್ಯಾ ನಿಷೇಧ ಕಾಯ್ದೆಯನ್ನು ಚರ್ಚೆಯನ್ನೆ ಮಾಡದೆ ಪಶು ಸಂಗೋಪನಾ ಸಚಿವ
ಪ್ರಭು ಚೌಹಾಣ್ ವಿಧೇಯಕವನ್ನು ಮಂಡಿಸಿದ
ರು. ಕಾಂಗ್ರೆಸ್ ಇಂದು ವಿಧೇಯಕ ಮೇಲೆ ಚರ್ಚೆ ಬೇಡ ಚರ್ಚೆಯನ್ನು ನಾಳೆ ಮಾಡೋಣ ಎಂದು ಹೇಳಿದ್ರೂ ಆಡಳಿತ ಪಕ್ಷದ ಸದಸ್ಯರ ಒತ್ತಡಕ್ಕೆ ಮಣಿದು ಸರ್ಕಾರ ಗೋಹತ್ಯೆ ನಿಷೇದ ಕಾಯ್ದೆಯನ್ನು ಅಂಗೀಕರಿಸಿತು.

ಅಧಿವೇಶನದ ಕಲಾಪದಲ್ಲಿ ಯಾವುದೇ ಚರ್ಚೆಯನ್ನು ಮಾಡದೆ ಬಿಜೆಪಿ ಗೋಹತ್ಯೆ ನಿಷೇಧ ಕಾಯ್ದೆಯನ್ನು ಜಾರಿಗೊಳಿಸಿದ್ದು ಕಾಂಗ್ರೆಸ್ ಪಕ್ಷ ವಿರೊಧಿಸಿದರೂ ಇದನ್ನು ಲೆಕ್ಕಿಸಲಿಲ್ಲ.ಕಾಂಗ್ರೆಸ್ ಹಾಗೂ ವಿಪಕ್ಷ ನಾಯಕ ಸಿದ್ದರಾಮಯ್ಯ ಮಾತನಾಡಿ, ಸದನಕ್ಕೆ ನಾಳೆ ಮತ್ತು ಮುಂದಿನ ಅಧಿವೇಶನಕ್ಕೂ ನಾವು ಬರುವುದಿಲ್ಲ. ನಾವು ಜನರ ಬಳಿ ಹೋಗುತ್ತೆವೆ ಎಂದು ಕಿಡಿ ಕಾರಿದರು.
ಸಂಯುಕ್ತವಾಣಿ




