ಚಿತ್ರದುರ್ಗ: ಭೀಕರ ಅಪಘಾತ ಇಬ್ಬರು ಸಾವು ಓರ್ವನ ಸ್ಥಿತಿ ಚಿಂತಾಜನಕ
ಚಿತ್ರದುರ್ಗದಲ್ಲಿ ksrtc ಬಸ್ ಹಾಗೂ ಬೈಕ್ ನಡುವೆ ಗ್ರಾಮಾಂತರ ಠಾಣೆ ಬಳಿ ಭೀಕರ ಅಪಘಾತ ನಡೆದು ಇಬ್ಬರು ಸ್ಥಳದಲ್ಲಿ ಮೃತಪಟ್ಟು ಓರ್ವನ ಸ್ಥಿತಿ ಗಂಭೀರವಾದ ಘಟನೆ ಇಂದು ಬೆಳ್ಳಂಬೆಳಗ್ಗೆ ನಡೆದಿದೆ. ಮೃತರನ್ನು ಕೇರಳದ ಅಲ್ತಾಫ್ ,ಯಾಸೀನ್ ಎಂದು ಗುರುತಿಸಿದೆ,ಗಾಯಾಳು ಲಬೀಲ್ ಎನ್ನಲಾಗಿದೆ.ಮೂವರು ಎಸ್ ಜೆ ಎಂ ನರ್ಸಿಂಗ್ ಕಾಲೇಜ್ ನ ಮೊದಲ ವರ್ಷದ ನರ್ಸಿಂಗ್ ವಿದ್ಯಾರ್ಥಿಗಳಾಗಿದ್ದಾರೆ.ಎಎಸ್ ಐ ನರೇಂದ್ರಬಾಬು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.





