ಚಿತ್ರದುರ್ಗ: ಶೌಚಾಲಯಗಳ ಬಳಕೆ, ಶುಚಿತ್ವ ಮತ್ರು ನೈರ್ಮಲ್ಯ ,ಹಸಿ ಮತ್ತು ಒಣ ಕಸ ವಿಂಗಡಣೆ ಮಾಡುವ ಮೂಲಕ ತಮ್ಮ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಚವಾಗಿ ಇಟ್ಟುಕೊಂಡು ಆರೋಗ್ಯ ಕಾಪಾಡಿಕೊಳ್ಳಬೇಕು ಎಂದು ಜಿಪಂ ಸಿಇಓ ಕರೆ ನೀಡಿದರು.

ಚಿತ್ರದುರ್ಗ ಜಿಪಂ ಸಭಾಂಗಣದಲ್ಲಿ ಇಂದು ನಡೆದ ಸ್ವಚ್ಚ ಭಾರತ್ ಯೋಜನೆಯ ಫ್ಲಿಪ್ ಚಾರ್ಟ್ ಬಿಡುಗೊಳಿಸಿ ಅವರು ಮಾತನಾಡುತ್ತಾ, ನಮ್ಮ ಸುತ್ತ ಮುತ್ತಲಿನ ಪರಿಸರವನ್ನು ಸ್ವಚ್ಚವಾಗಿಟ್ಟುಕೊಂಡಾಗ ಮಾತ್ರ ನಮ್ಮ ಆರೋಗ್ಯ ಕಾಪಾಡಿಕೊಳ್ಳಲು ಸಾಧ್ಯ. ಸರ್ಕಾರಗಳು ವೈಯುಕ್ತಿಕ
ಸ್ವಚ್ಚತೆ ಮತ್ತು ನೈರ್ಮಲಕ್ಕಾಗಿ ಸಾಕಷ್ಟು ಹಣವನ್ನು ಬಿಡುಗಡೆ ಮಾಡುತ್ತಿವೆ. ಸ್ವಚ್ಚತೆಯ ಬಗ್ಗೆ ಅರಿವೂ ಮೂಡಿಸುವ ಸಲುವಾಗಿಯೇ ಅನೇಕ ಕಾರ್ಯಕ್ರಮಗಳನ್ನು ಜಿಪಂ ಮೂಲಕ ನಾವು ಮಾಡುತ್ತಿದ್ದೆವೆ . ಎಲ್ಲರೂ ಸ್ವಚ್ಚತೆಗೆ ಆದ್ಯತೆ ಕೊಟ್ಟು ಕೈ ಜೋಡಿಸಿದಾಗ ಮಾತ್ರ ಯೋಜನೆಗಳು ಸಫಲತೆ ಕಾಣಲು ಸಾಧ್ಯ ಎಂದು ಸಿಇಓ ಡಾ. ನಂದಿನಿ ದೇವಿ ಹೇಳಿದರು.
ಜಿಪಂ ಅಧ್ಯಕ್ಷೆ ಶಶಿಕಲಾ ಸುರೇಶ್ ಬಾಬು ಮಾತನಾಡಿ, ನೈರ್ಮಲ್ಯತೆಯೂ ನಮ್ಮ ಆದ್ಯತೆಯಾಗಬೇಕು. ಪ್ರತಿಯೊಬ್ವರು ಕೂಡ ಕಸ ವಿಲೇವಾರಿಯನ್ನು ಹಸಿ ಕಸ ಹಾಗೂ ಒಣ ಕಸ ಎಂದು ವಿಂಗಡಿಸುವ ಕೆಲಸವನ್ನು ಮನೆಗಳಿಂದಲೇ ಮಾಡಿದರೆ ಸ್ವಚ್ಚತೆ ಅಲ್ಲಿಂದಲೇ ಆರಂಭವಾಗುತ್ತದೆ .ಆಗ ಕಸ ವಿಂಗಡಣೆಯಲ್ಲಿ ಆಗುವ ಲೋಪಗಳನ್ನು ಸರಿಪಡಿಸಿಕೊಂಡು ಇನ್ನಷ್ಟು ಪರಿಣಾಮಕಾರಿಯಾಗಿ ಯೋಜನೆಯ ಯಶಸ್ವಿಗೊಳಿಸಬಹುದು ಎಂದು ಹೇಳಿದರು.
ಮುಖ್ಯ ಯೋಜನಾಧಿಕಾರಿ ಗಾಯತ್ರಿ,ಜಿಲ್ಲಾ ಸಾನಿಟೇಷನ್ ಮತ್ತು ಹೈಜಿನ್ ಸಮಾಲೋಚಕಿ ಪ್ರಮೀಳಾ, ಜಲಜೀವನ್ ಮಿಷನ್ ನ ಜಿಲ್ಲಾ ಯೋಜನಾ ವ್ಯವಸ್ಥಾಪಕ ಮಂಜುನಾಥ್, ಸ್ವಚ್ಚ ಭಾರತ್ ಮಿಷನ್ ಸಮಾಲೋಚಕರು, ಕಚೇರಿ ಸಿಬ್ಬಂದಿಗಳು ಹಾಜರಿದ್ದರು.
ಸಂಯುಕ್ತವಾಣಿ




