ಚಿತ್ರದುರ್ಗ: ನಾನು ಯಾವುದೇ ಭ್ರಷ್ಟಾಚಾರ ಮಾಡಿಲ್ಲ, ಯಾವುದರಲ್ಲೂ ಭಾಗಿಯಾಗಿಲ್ಲ. ನಾನು ಮಂತ್ರಿಯಾದ
ಕಳೆದ 30 ವರ್ಷದ ರಾಜಕಾರಣದಲ್ಲಿ ನನ್ನ ಮೇಲೆ ಯಾವುದೇ ಆರೋಪವಿಲ್ಲ ಎಂದು ಡಿಕೆಶಿ ಹೇಳಿದರು.

ಚಿತ್ರದುರ್ಗದಲ್ಲಿ ಅವರು ಮಾಧ್ಯಮಗಳೊಂದಿಗೆ ಮಾತನಾಡಿ, ಕಮಿಷನ್ ತನಿಖೆಗೆ ಯಾವುದೂ ಇಲ್ಲ. ಮಾಡಿರುವ ತನಿಖೆಗಳೆಲ್ಲವೂ ಕೂಡ ಕ್ಲೋಸ್ ಆಗಿವೆ. ಆಧಾಯಕ್ಕಿಂತ ಆಸ್ತಿ ಜಾಸ್ತಿಯಾಗಿದೆ ಎಂದು ಕರ್ನಾಟಕದಲ್ಲಿ ಒಂದೇ ಒಂದು ಕೇಸ್ ಸಿಬಿಐಗೆ ನೀಡಿದ್ದಾರೆ. ಸಿಬಿಐ ದಾಳಿ ಮಾಡಿದ್ದರು ,ಈಗ ಸಮನ್ಸ್ ನೀಡಿದ್ದಾರೆ. ಕಾನೂನಿಗೆ ಗೌರವ. ನೀಡಿ ಉತ್ತರ ನೀಡುತ್ತೇನೆ ಎಂದರು.
ಸಂಯುಕ್ತವಾಣಿ




