ಬೆಂಗಳೂರು:ಒಳ ಮೀಸಲಾತಿ ಜಾರಿಗೆ ವಿಚಾರಣಾ ನಿಬಂಧನೆಗಳ ಆದೇಶ ಹೊರಡಿಸುವಂತೆ ಮಾಜಿ ಸಚಿವ ಹಾಗು ಕೆಪಿಸಿಸಿ ಉಪಾಧ್ಯಕ್ಷ ಹೆಚ್. ಆಂಜನೇಯ ಮುಖ್ಯ ಮಂತ್ರಿ ಸಿದ್ದರಾಮಯ್ಯ ಹಾಗು ನಿವೃತ್ತ ನ್ಯಾಯಮೂರ್ತಿ ನಾಗಮೋಹನ್ ಅವರನ್ನು ಮುಖ್ಯ ಮಂತ್ರಿ ಗೃಹ ಕಚೇರಿಕೃಷ್ಣಾ ದಲ್ಲಿ ಭೇಟಿ ಮಾಡಿ ಮನವಿಯನ್ನು ಮಂಗಳವಾರ ಮಾಡಿದರು. ಇದಕ್ಕೆ ಸ್ಪಂದಿಸಿದ ಸಿಎಂ ಸಿದ್ದರಾಮಯ್ಯ ಅವರು ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ಎಲ್ ಕೆ ಅತೀಕ್ ಅವರಿಗೆ ಇಂದೇ ಆದೇಶ ಹೊರಡಿಸುವಂತೆ ಸೂಚಿಸಿದರೆಂದು ಮಾಜಿ ಸಚಿವ ಹೆಚ್. ಆಂಜನೇಯ ತಿಳಿಸಿದ್ದಾರೆ.





