ಬೆಂಗಳೂರು,ಜು17-ರಾಯಚೂರು ವಿಶ್ವ ವಿದ್ಯಾಲಯಕ್ಕೆ ನೂತನವಾಗಿ ಕುಲಪತಿಗಳಾಗಿ ನೇಮಕವಾಗಿದ್ದ, ಶಿವಾನಂದ ಕೆಳಗಿನಮನಿ ಅವರು, ಕಳೆದ ಒಂದು ವಾರದ ಹಿಂದೆ ಅಧಿಕಾರ ಸ್ವೀಕರಿಸಿದ್ದರು. ಈ ಹಿನ್ನೆಲೆಯಲ್ಲಿ ಇಂದು ಸಿಎಂ ಗೃಹ ಕಚೇರಿ ಕಾವೇರಿಯ ಲ್ಲಿ ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ, ಅವರಿಗೆ ಗೌರವಿಸಿ ಸನ್ಮಾನಿಸಿದರು. ನಂತರ ಅವರ ಬಳಿ ವಿಶ್ವ ವಿದ್ಯಾಲಯದ ಅಭಿವೃದ್ದಿಯ ಬಗ್ಗೆ ಚರ್ಚಿಸಿದರು. ಈ ಸಮಯದಲ್ಲಿ ಮಾಜಿ ಸಚಿವ ಹಾಗೂ ಕೆಪಿಸಿಸಿ ಉಪಾಧ್ಯಕ್ಷ. ಹೆಚ್. ಆಂಜನೇಯ, ಮುಖಂಡರಾದ ಬಿಪಿ ತಿಪ್ಪೇಸ್ವಾಮಿ ಹಾಗೂ ಬಿಪಿ ಪ್ರೇಮ್ ಸಾಗರ್ ಇದ್ದರು.





